ಮಡಿಕೇರಿ, ಆ. ೧೪ : ಪ್ರಸ್ತುತ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಕಂಡುಬAದಿದ್ದು ಮುಂಗಾರಿನ ಅಬ್ಬರ ಕಡಿಮೆಯಾದಂತಿದೆ. ಮಂಗಳವಾದAದು ದಿನವಿಡೀ ಬಿಸಿಲಿನ ವಾತಾವರಣವೇ ಇತ್ತಾದರೂ ಸಂಜೆಯ ವೇಳೆಗೆ ದಿಢೀರ್ ಬದಲಾವಣೆ ಕಂಡುಬAದಿತು.

ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಹಲವೆಡೆಗಳಲ್ಲಿ ಭಾರೀ ಮಳೆ ಸುರಿಯಿತು. ಮಡಿಕೇರಿ, ವೀರಾಜಪೇಟೆ, ಕಡಂಗ, ಸುಂಟಿಕೊಪ್ಪ, ಕುಶಾಲನಗರ, ಸಂಪಾಜೆ ಮತ್ತಿತರ ಹಲವೆಡೆಗಳಲ್ಲಿ ಮಳೆಯ ತೀವ್ರತೆಗೆ ಜನರು ಆತಂಕಪಡುವAತಾಗಿತ್ತು.

ಇದಲ್ಲದೆ ಗುಡುಗು - ಮಿಂಚಿನ ಆರ್ಭಟವೂ ಕಂಡುಬAದು ಜನರು ಮತ್ತೊಮ್ಮೆ ಆಶ್ಲೇಷ ಮಳೆ ಕೊನೆಯ ದಿನಗಳಲ್ಲಿ ಏನು ಮಾಡಲಿದೆಯೋ ಎಂಬ ದುಗುಡು ಏರ್ಷಟ್ಟಿತ್ತು. ಸಂಪಾಜೆ, ಸುಂಟಿಕೊಪ್ಪದಲ್ಲಿ ಕೆಲವು ಮನೆಗಳೀಗೆ ನೀರು ನುಗ್ಗಿ ಸಮಸ್ಯೆ ಎದುರಾಗಿತ್ತು. ಕುಶಾಲನಗರದ ಹಲವು ಬಡಾವಣೆಗಳ ಜನರೂ ಮಳೆಯ ಆತಂಕಕ್ಕೆ ಒಳಗಾಗಿದ್ದರು. ಮಡಿಕೇರಿಯಲ್ಲಿ ತಡ ರಾತ್ರಿಯ ತನಕವೂ ಮಳೆ ಸುರಿಯಿತು.

ಸಂಪಾಜೆಗೆ ೬.೩೨ ಇಂಚು

ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ೧.೫೯ ಇಂಚು ಮಳೆಯಾಗಿದೆ. ಸಂಪಾಜೆ ಹೋಬಳಿಯಲ್ಲಿ ೬.೩೨ ಇಂಚುಗಳಷ್ಟು ಭಾರೀ ಮಳೆ ಸುರಿದಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೩.೦೫ ಇಂಚು, ವೀರಾಜಪೇಟೆ ೧.೩೫, ಸೋಮವಾರಪೇಟೆ ೧.೫೨, ಕುಶಾಲನಗರ ತಾಲೂಕಿನಲ್ಲಿ ೨. ಇಂಚು ಮಳೆಯಾಗಿದೆ. ಮಡಿಕೇರಿ ಕ.ಸ.ಬಾ.ದಲ್ಲಿ ೨.೦೯, ನಾಪೋಕ್ಲು ೧.೭೮, ಭಾಗಮಂಡಲ ೨.೧೦, ವೀರಾಜಪೇಟೆ ೧.೨೮, ಅಮ್ಮತ್ತಿ ೧.೪೨, ಸೋಮವಾರಪೇಟೆ ೨, ಶನಿವಾರಸಂತೆ ೧.೮೫, ಕುಶಾಲನಗರ ೧.೩೦, ಸುಂಟಿಕೊಪ್ಪ ಹೋಬಳಿಯಲ್ಲಿ ೨.೬೪ ಇಂಚು ಮಳೆಯಾಗಿದೆ. ಬುಧವಾರದಂದೂ ಅಪರಾಹ್ನ ವೀರಾಜಪೇಟೆ, ಮೂರ್ನಾಡು, ನಾಪೋಕ್ಲು ವಿಭಾಗದಲ್ಲಿ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.