ಮಡಿಕೇರಿ, ಆ. ೧೪: ಬೆಂಗಳೂರು ಕೊಡವ ಸಮಾಜಕ್ಕೆ ಈ ಹಿಂದೆ ಬೆಂಗಳೂರು ಉತ್ತರದಲ್ಲಿ ಹಿಂದಿನ ಸರಕಾರದ ಮೂಲಕ ನೀಡಲಾಗಿರುವ ೭ ಎಕರೆ ಜಾಗದ ದರವನ್ನು ಮರು ಪರಿಶೀಲಿಸುವ ನಿಟ್ಟಿನಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಸಮಾಜದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಸಮಾಜದ ಪದಾಧಿಕಾರಿಗಳು ಸಚಿವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದರು. ಬೆಂಗಳೂರು ಉತ್ತರ ತಾಲೂಕು ಜಾಲ ಹೋಬಳಿ ಹೊಸಳ್ಳಿ ಗ್ರಾಮದಲ್ಲಿ ೭ ಎಕರೆ ಜಾಗವನ್ನು ನೀಡಲಾಗಿದೆ.

ಹಿಂದಿನ ಸಚಿವ ಸಂಪುಟದಲ್ಲಿ ನಿಗದಿಪಡಿಸಿರುವ ಮಾರುಕಟ್ಟೆ ಮೌಲ್ಯದರವನ್ನು ಮರುಪರಿಶೀಲಿಸಲು ಕೋರಿ ಇದೀಗ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ ಅವರು ಕಡತವನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಸಮಾಜದ ಅಧ್ಯಕ್ಷ ಕರವಂಡ ಟಿ. ಪೆಮ್ಮಯ್ಯ, ಉಪಾಧ್ಯಕ್ಷೆ ಪಾಂಡAಡ ಎಂ. ಕಮಲ, ಪದಾಧಿಕಾರಿಗಳಾದ ಮಹೇಶ್, ಪಿ.ಕೆ. ಗಣಪತಿ ಮತ್ತಿತರರು ಪಾಲ್ಗೊಂಡಿದ್ದರು.