ಚೆಯ್ಯಂಡಾಣೆ, ಆ. ೧೪: ಚೆಯ್ಯಂಡಾಣೆ-ಪಾರಾಣೆ ಮುಖ್ಯ ರಸ್ತೆಯ ಕೊಣಂಜಗೇರಿ-ಪಾರಾಣೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಬಾವಲಿ ಗ್ರಾಮದ ಸೇತುವೆ ಸಮೀಪದಲ್ಲಿರುವ ಬರೆ ಕುಸಿದಿದ್ದು ಅವಘಡ ಸಂಭವಿಸುವ ಮುನ್ನ ಸಂಬAಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನರಿಯಂದಡ ಗ್ರಾಮಸ್ಥ ತೊಟಂಬೈಲು ಅನಂತ್‌ಕುಮಾರ್ ಮಾತನಾಡಿ, ಮುಖ್ಯ ರಸ್ತೆಯ ಬದಿ ಬರೆ ೪೦ ಅಡಿಯಷ್ಟು ಜರಿದಿದ್ದು, ಇನ್ನು ೨ ಅಡಿಗಳಷ್ಟು ಮಾತ್ರ ಬಾಕಿ ಇದೆ. ಬರೆಯ ಕೆಳಗಡೆ ತೋಡು ಹರಿಯುತ್ತಿದೆ.

ವಾಹನ ಸಂಚರಿಸುವಾಗ ಬರೆ ಜರಿಯುವ ಸಾಧ್ಯತೆ ಇದೆ. ಬರೆ ಜರಿದರೆ ಅನಾಹುತ ಸಂಭವಿಸುತ್ತದೆ. ಕೂಡಲೇ ಇದಕ್ಕೆ ಸಂಬAಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂದರು. ಈ ಸಂದರ್ಭ ಪೊಕ್ಕುಳಂಡ್ರ ದನೋಜ್, ಜಯರಾಂ, ಅಭಿಲಾಶ್, ಮನೋಜ್, ತೊಟಂಬೈಲು ತ್ರಿಶೂಲ್ ಇದ್ದರು. - ಅಶ್ರಫ್