ವೀರಾಜಪೇಟೆ, ಆ. ೧೩: ತೋರ ಗ್ರಾಮದಲ್ಲಿ ಗುಡ್ಡ ಕುಸಿದು ನಿರಾಶ್ರಿತರಾದ ನಿವಾಸಿಗಳಿಗೆ ಮನೆ ನಿರ್ಮಾಣ ಸೇರಿದಂತೆ ಅತಿವೃಷ್ಟಿ ಯಿಂದ ರೈತರು ಬೆಳೆದ ಬೆಳೆಗಳಿಗೆ ಪರಿಹಾರ ಹಾಗೂ ೧೦ ಹೆಚ್.ಪಿ. ಪಂಪ್ಸೆಟ್ಗೆ ಉಚಿತ ವಿದ್ಯುತ್ ನೀಡುವಂತೆ ಗ್ರಾಮ ಪಂಚಾಯಿತಿ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಮಾಡಿದ್ದರು.
ಅತಿ ವೃಷ್ಟಿಯಿಂದ ಹಾನಿ ಗೊಳಗಾದ ಪ್ರದೇಶಗಳಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರ ಪರವಾಗಿ ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಮಾಳೇಟಿರ ಎಸ್. ಪ್ರಶಾಂತ್, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ಮೂಲಕ ವಿವಿಧ ಬೇಡಿಕೆಯನ್ನು ಮುಂದಿಟ್ಟು ಮನವಿ ಪತ್ರ ಸಲ್ಲಿಸಿದರು. ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ತೋರ ಗ್ರಾಮದಲ್ಲಿ ೨೦೧೯ ರಲ್ಲಿ ಸಂಭವಿಸಿದ ಜಳಪ್ರಳಯದಲ್ಲಿ ಗುಡ್ಡ ಕುಸಿದು ೧೦ ಮಂದಿ ಮರಣಹೊಂದಿದರು. ವರ್ಷಗಳೇ ಕಳೆದು ಹೋದರು ತೋರ ಗ್ರಾಮ ನಿವಾಸಿಗಳಾದ ಕೆ.ಪಿ. ಲಿಂಗಯ್ಯ, ಎ.ಎಂ ಪರಮೇಶ ಮತ್ತು ಕೆ.ಜಿ. ಉಮೇಶ ಅವರುಗಳು ವಸತಿಗಾಗಿ ಅರ್ಜಿ ಸಲ್ಲಿಸಿದರು. ಇಂದಿನವರೆಗೆ ಮನೆ ನಿರ್ಮಾಣ ವಾಗಿರುವುದಿಲ್ಲ. ಸೂರಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸವಿದ್ದಾರೆ. ಶೀಘ್ರವಾಗಿ ಮನೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. ಕೆದಮುಳ್ಳೂರು ಗ್ರಾಮದ ರಸ್ತೆಗಳು ದುಃಸ್ಥಿತಿಯಲ್ಲಿವೆ. ಅಲ್ಲದೆ ಅತಿವೃಷ್ಟಿಯಿಂದ ಕಾಫಿ ಫಸಲು ಕೊಳೆತು ಕಾಯಿಕಟ್ಟಿದ ಕಾಫಿ ಬೀಜಗಳು ನೆಲಕ್ಕೆ ಉರುಳುತ್ತಿದೆ. ರೈತರು ಕಂಗಾಲಾಗಿದ್ದಾರೆ. ಹಾನಿಗೆ ಒಳಗಾದ ರೈತರಿಗೆ ಬೆಳೆ ಪರಿಹಾರ ಒದಗಿಸಿಕೊಡುವಂತೆ ಹಾಗೂ ಜಿಲ್ಲೆಯ ಬಹುಬೇಡಿಕೆಯ ವಿಚಾರವಾಗಿದ್ದ ೧೦ ಹೆಚ್.ಪಿ. ಪಂಪ್ಸೆಟ್ಗೆ ಉಚಿತ ವಿದ್ಯುತ್ ಕಲ್ಪಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧÀ್ಯಕ್ಷ ಜೆಫ್ರಿ ಉತ್ತಪ್ಪ, ಸದಸ್ಯ ಎಂ.ಎA. ಇಸ್ಮಾಯಿಲ್, ಪವಿತ್ರ, ವಲಯ ಅಧÀ್ಯಕ್ಷ ನಡಿಕೇರಿಯಂಡ ಮಹೇಶ್, ತೋರ ಬೂತ್ ಅಧÀ್ಯಕ್ಷ ವಿಜಯ್ ಕುಮಾರ್, ಡಿ.ಸಿ.ಸಿ ಸದಸ್ಯ ಬೆಲ್ಲು ಬೋಪಯ್ಯ,, ಸಹಕಾರ ಬ್ಯಾಂಕ್ ಅಧÀ್ಯಕ್ಷ ಮಿಟ್ಟು ಅಯ್ಯಪ್ಪ, ಗ್ರಾಮಸ್ಥರಾದ ಕಾರ್ಯಪ್ಪ, ವಿಜಯ್ ಮಂದಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆಲಿ ಮತ್ತು ಸಾರ್ವಜನಿಕರು ಹಾಜರಿದ್ದರು.