ಚೆಯ್ಯಂಡಾಣೆ, ಆ. ೧೩: ಕ್ಷುಲ್ಲಕ ಕಾರಣಕ್ಕೆ ಗೃಹಿಣಿಯೊಬ್ಬಳು ನಾಲ್ಕು ತಿಂಗಳ ಮಗುವನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪಾರಾಣೆ ಕೊಣಂಜAಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಾಡು ಗ್ರಾಮದಲ್ಲಿ ನಡೆದಿದೆ.
ಕೈಕಾಡು ಗ್ರಾಮದ ಚೊಟ್ಟೆಯಂಡ ಅರುಣ, ಸ್ವಾತಿ ದಂಪತಿ ಪುತ್ರಿ ತನೀಷ ಬೊಳ್ಳಮ್ಮ (೨೬) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ. ಕಳೆದ ಒಂದು ವರ್ಷದ ಹಿಂದೆ ವೀರಾಜಪೇಟೆ ಸಮೀಪದ ಕೊಳತ್ತೋಡು ಬೈಗೋಡು ಗ್ರಾಮದ ನಿವಾಸಿ ಕೇಳಪಂಡ ಶಿರಾಗ್ ತಮ್ಮಯ್ಯ ತನೀಷ ಬೊಳ್ಳಮ್ಮ ನಡುವೆ ವಿವಾಹ ನಡೆದಿತ್ತು. ಗರ್ಭಿಣಿಯಾಗಿದ್ದ
ತನೀಷ ಕಳೆದ ೭ ತಿಂಗಳಿAದ ಕೈಕಾಡಿನಲ್ಲಿರುವ ತನ್ನ ತವರು
ಮನೆಯಲ್ಲಿ ಇದ್ದಳು. ಕಳೆದ ೪ ತಿಂಗಳ ಹಿಂದೆ ಗಂಡು ಮಗುವಿಗೆ
ಜನ್ಮ ನೀಡಿದ ತನೀಷ ಮನೆಯಲ್ಲಿ ಮಗುವಿನ ಆರೈಕೆಯಲ್ಲಿ
ತೊಡಗಿದ್ದರು.
ಪ್ರತಿದಿನ ಮನೆಯಲ್ಲಿ ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಮಗಳಿಗೆ ತಾಯಿ ಸ್ವಾತಿ ಹಾಗೂ ತಂದೆ ಅರುಣ ಮೊಬೈಲ್ ಬಳಕೆಯಿಂದ ನಿನಗೂ ಮಗುವಿಗೂ ತೊಂದರೆಯಾಗುತ್ತದೆ ಎಂದು ಬುದ್ದಿವಾದ ಹೇಳಿದ್ದಾರೆ. ಇದಕ್ಕೆ ಮನನೊಂದ ತನೀಷ ಬೊಳ್ಳಮ್ಮ ಮಂಗಳವಾರ ಮುಂಜಾನೆ ೩ ಗಂಟೆಗೆ ಮನೆಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಕರಣ ಸಂಬAಧ ಮೃತಳ ತಂದೆ ಅರುಣ ನೀಡಿದ ದೂರಿನ ಅನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಮಡಿಕೇರಿ ತಾಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಅರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.