ಮಡಿಕೇರಿ, ಆ. ೧೩: ೨೦೨೪-೨೫ನೇ ಸಾಲಿಗೆ ಕಾಫಿ ಮಂಡಳಿ ವತಿಯಿಂದ ಕಾರ್ಯಚಟುವಟಿಗಳಿಗಾಗಿ ಸಹಾಯಧನದ ಅನುಮೋದನೆ ದೊರೆತಿದೆ.
ಕಾಫಿ ಮರುನಾಟಿ, ನೀರಾವರಿ ಯೋಜನೆಯಡಿ ಕೆರೆ/ತೆರೆದಬಾವಿ/ರಿಂಗ್ ಬಾವಿ/ ಸ್ಪಿçಂಕ್ಲರ್ ಇರಿಗೇಷನ್ / ಹನಿ ನೀರಾವರಿಗೆ, ಕಾಫಿಗೋಡೌನ್ / ಕಾಫಿ ಕಣ /ಪಲ್ಪರ್ ಯುನಿಟ್, ಇಕೋ ಪಲ್ಪರ್, ಮೆಕಾನಿಕಲ್ ಡ್ರೆöÊಯರ್/ಸೋಲಾರ್ ಟನೆಲ್ ಡ್ರೆöÊಯರ್, ಬಿಳಿಕಾಂಡ ಕೊರಕದ ಹತೋಟಿಗಾಗಿ ಓoಟಿ-ತಿoveಟಿ ಈಚಿbಡಿiಛಿ ತಿಡಿಚಿಠಿiಟಿg mಚಿಣeಡಿiಚಿಟ, ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳು ಇತ್ಯಾದಿ ಸಹಾಯಧನ ದೊರೆಯಲಿದೆ.
ತಮ್ಮ ತೋಟದಲ್ಲಿ ಅಬಿವೃದ್ಧಿಪಡಿಸಲಿಚ್ಚಿಸುವ ಆರ್ಹ ಕಾಫಿ ಬೆಳೆಗಾರರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಸೆ.೩೦ ಕಡೆ ದಿನ.
೬೨ ಎಕರೆವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರು ಇದಕ್ಕೆ ಅರ್ಹರಾಗಿದ್ದು, ಅರ್ಜಿ ಸಲ್ಲಿಸುವವರ ಫೋಟೋ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ೨೦೨೪-೨೫ನೇ ಸಾಲಿನ ಪಹಣಿಗಳು, ಖಾತಾ ನಕಲು, ತೋಟದ ಅಂದಾಜು ನಕ್ಷೆ, ಕೊಟೇಷನ್/ ಪ್ಲಾನ್, ಎಸ್ಟಿಮೇಷನ್, ಜಾತಿ ಪ್ರಮಾಣ ಪತ್ರ (ಎಸ್ಸಿ/ಎಸ್ಟಿ ಕಾಫಿ ಬೆಳೆಗಾರರಿಗೆ ದಾಖಲೆಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಲು ಗೋಣಿಕೊಪ್ಪಲು ಕಾಫಿ ಮಂಡಳಿ ಸಂಪರ್ಕಧಿಕಾರಿ ತಿಳಿಸಿದ್ದು, ಹೆಚ್ಚಿನ ಮಾಹಿತಿಗೆ ಮುಖಾರೀಬ್ ಡಿ.ಎಸ್. ೯೪೪೯೦೬೩೦೫೭ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.