ಮಡಿಕೇರಿ, ಆ. ೧೩: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಈಜುಕೊಳದ ಕೇರ್‌ಟೇಕರ್ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪುರುಷ ಅಭ್ಯರ್ಥಿಯಾಗಿರಬೇಕು. ಈಜು ಕಡ್ಡಾಯವಾಗಿ ಬರತಕ್ಕದ್ದು. ಆಯ್ಕೆ ಪ್ರಕ್ರಿಯೆಗೆ ಬರುವಂತಹ ಅಭ್ಯರ್ಥಿಗಳು ಈಜು ತರಬೇತಿಯ ಪ್ರಮಾಣ ಪತ್ರ ತರಬೇಕು. ಆಯ್ಕೆ ಪ್ರಕ್ರಿಯೆಗೆ ಬರುವಂತಹ ಅಭ್ಯರ್ಥಿಗಳು ಈಜು ಸಮವಸ್ತçವನ್ನು ತರಬೇಕು.

ಆಸಕ್ತ ಅಭ್ಯರ್ಥಿಗಳು ತಾ. ೧೭ ರಂದು ತಮ್ಮ ದಾಖಲಾತಿಗಳನ್ನು ತರತಕ್ಕದ್ದು. ಹೆಚ್ಚಿನ ಮಾಹಿತಿಗೆ ದೂ. ೦೮೨೭೨-೨೨೦೯೮೬ ಮತ್ತು ೯೯೮೦೮೮೭೪೯೯ ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ತಿಳಿಸಿದ್ದಾರೆ.