ಅಧಿಸೂಚನೆ
ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೩೦೮- ಇ ರಡಿ ರಚಿತವಾ ಗಿರುವ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು, ಅಧಿನಿಯಮದ ಪ್ರಕರಣ ೩೦೮-ಎಫ್ ರಡಿಯ ಲ್ಲಿನ ಉಪಬಂಧಗಳನುಸಾರ ಕೊಡಗು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಐದು ತಾಲೂಕುಗಳಿಂದ ಆಯ್ಕೆಯಾಗುವ ಜಿಲ್ಲಾ ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರ ವ್ಯಾಪ್ತಿಯೊಳಗಿರುವ ಪ್ರದೇಶ ವನ್ನು ೨೯ ಏಕ ಸದಸ್ಯ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ, ಅವುಗಳ ಸೀಮಾ/ಗಡಿಯನ್ನು ನಿರ್ಣಯಿಸಿರುತ್ತದೆ. ಈ ಸಂಬAಧ ಅಧಿನಿಯಮದ ಪ್ರಕರಣ ೩೦೮-ಎಫ್ ರಡಿಯ ಉಪಬಂಧಗಳನುಸಾರ ಎಲ್ಲಾ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತದೆ. ಆಯೋಗದ ಶಿಫಾರಸ್ಸುಗಳನ್ನು ಸರ್ಕಾರವು ಪರಿಶೀಲಿಸಿದ ಮತ್ತು ಕೋಷ್ಠಕ "ಅ" ಮತ್ತು "ಆ" ದಲ್ಲಿ ನಮೂದಿಸಿರುವಂತೆ ಅನುಮೋದಿಸಿದೆ.ಅಧಿಸೂಚನೆ
ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣ ೩೦೮- ಇ ರಡಿ ರಚಿತವಾಗಿರುವ ಕರ್ನಾಟಕ ಪಂಚಾ ಯತ್ ರಾಜ್ ಸೀಮಾ ನಿರ್ಣಯ ಆಯೋಗವು, ಅಧಿನಿಯಮದ ಪ್ರಕರಣ ೩೦೮-ಎಫ್ ರಡಿಯಲ್ಲಿನ ಉಪಬಂಧಗಳ ನುಸಾರ ಕೊಡಗು ಜಿಲ್ಲೆಯ ಐದು ತಾಲೂಕು ಪಂಚಾಯಿತಿಗಳಿಗೆ ಆಯ್ಕೆ ಯಾಗುವ ಚುನಾಯಿತ ಸದಸ್ಯರ ಸಂಖ್ಯೆ ಯನ್ನು ಹಾಗೂ ತಾಲೂಕು ಪಂಚಾಯಿತಿ ಅಧಿಕಾರ ವ್ಯಾಪ್ತಿಯೊಳಗಿನ ಪ್ರದೇಶವನ್ನು ೫೦ ಏಕ ಸದಸ್ಯ ತಾಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ, ಅವುಗಳ ಸೀಮಾ/ಗಡಿಯನ್ನು ನಿರ್ಣಯಿಸಿರುತ್ತದೆ.