ಐಗೂರು, ಆ. ೧೨: ಮಾದಾಪುರದ ಸಿದ್ಧಿ ಬುದ್ಧಿ ಗಣಪತಿ ದೇವಾಲಯದಲ್ಲಿ ಗೌರಿ ಗಣೇಶ ಉತ್ಸವ ಆಚರಣೆಯ ಸಮಿತಿಯನ್ನು ರಚಿಸಲಾಯಿತು. ಉತ್ಸವ ಸಮಿತಿಯ ಅಧ್ಯಕ್ಷರಾಗಿ ಜಯರಾಮ್, ಕಾರ್ಯದರ್ಶಿ ಅಖಿಲೇಶ್ ಮತ್ತು ಖಜಾಂಚಿಯಾಗಿ ಆಕಾಶ್, ಉಪಾಧ್ಯಕ್ಷ ಅವಿನಾಶ್ ಹಾಗೂ ದರ್ಶನ್, ಸಹ ಕಾರ್ಯದರ್ಶಿ ದೀಪಕ್ ಹಾಗೂ ಗಿರೀಶ್ ಅವರುಗಳನ್ನು ಆಯ್ಕೆ ಮಾಡಲಾಯಿತು.