ಗೋಣಿಕೊಪ್ಪಲು, ಆ. ೧೨: ಅಖಂಡ ಭಾರತದ ಹಿಂದೂಗಳು ಜಾಗೃತವಾಗುವ ಕಾಲ ಸನ್ನಿಹಿತವಾಗಿದ್ದು ಈ ನಿಟ್ಟಿನಲ್ಲಿ ಹಿಂದುಗಳು ಒಗ್ಗಟ್ಟನ್ನು ಕಾಪಾಡುವ ಮೂಲಕ ಈ ದೇಶವನ್ನು ಮತ್ತಷ್ಟು ಬಲಿಷ್ಟಗೊಳಿಸಬೇಕು. ಪರಕೀಯರ ದಾಳಿಯಿಂದ ಛಿದ್ರಗೊಂಡಿರುವ ಭಾರತ ನೆಲ ಒಂದಾಗಿ ಅಖಂಡ ಭಾರತ ಸೃಷ್ಟಿಯಾಗಬೇಕು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಒಂದಾಗಬೇಕೆAದು ವಿಹೆಚ್‌ಪಿಯ ನಿಕಟಪೂರ್ವ ಪ್ರಾಂತ ಗೋ ರಕ್ಷಕ ಪ್ರಮುಖ್ ಮುರುಳಿಕೃಷ್ಣ ಹಂಸತಡ್ಕ ಕರೆ ನೀಡಿದರು.

ಪೊನ್ನಂಪೇಟೆ ತಾಲೂಕು ಹಿಂದೂ ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪೊನ್ನಂಪೇಟೆ ಕೊಡವ ಸಮಾಜದಿಂದ ಗೋಣಿಕೊಪ್ಪ ಆರ್‌ಎಂಸಿ ಸಭಾಂಗಣದವರೆಗೆ ನಡೆದ ಬೃಹತ್ ವಾಹನ ಜಾಥಾದ ಬಳಿಕ ಕೃಷಿ ಉತ್ಪನ್ನ ಮಾರುಕಟ್ಟೆಯ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾಷಣ ಮಾಡಿದ ಅವರು ಅಖಂಡ ಭಾರತವಾಗಿದ್ದ ಭಾರತದ ಮೇಲೆ ಡಚ್ಚರು, ಆಂಗ್ಲರು, ಮುಸ್ಲಿಂ ದೊರೆಗಳ ಆಕ್ರಮಣದಿಂದಾಗಿ ಭಾರತವು ತುಂಡು ತುಂಡಾಯಿತು. ಅಂದಿನ ಕಾಲದಲ್ಲಿ ನಡೆದ ನರಮೇಧ, ಮಹಿಳೆಯರ ಮೇಲೆ ಅತ್ಯಾಚಾರ, ಮಕ್ಕಳ ಮೇಲಿನ ದೌರ್ಜನ್ಯ, ಕೊಲೆ ಭೀಕರತೆ ಇವುಗಳನ್ನು ಇಂದಿನ ಯುವ ಸಮಾಜ ನೆನಪಿಟ್ಟುಕೊಳ್ಳಬೇಕು. ಸ್ವಾತಂತ್ರö್ಯ ಸೇನಾನಿಗಳ ಹೋರಾಟಗಾರರ, ತ್ಯಾಗ ಬಲಿದಾನಗಳ ನೆತ್ತರ ಚರಿತ್ರೆಯನ್ನು ಮರೆಯಬಾರದು ಎಂದರು. ಕಟ್ಟಕಡೆಯ ಹಿಂದುಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಇತ್ತೀಚೆಗೆ ಭಯಭೀತ ವಾತಾವರಣ ನಿರ್ಮಾಣವಾಗುತ್ತಿದೆ. ಸಂಘಟನೆಗೆ ಕೈ ಜೋಡಿಸುವ ಮೂಲಕ ಹಿಂದುಗಳು ಒಗ್ಗಟ್ಟಾಗಬೇಕಾಗಿದೆ. ರಾಜಕೀಯ ಲಾಭಕ್ಕಾಗಿ ಹಿಂದೂ ಧರ್ಮದ ಅವಹೇಳನವಾಗುತ್ತಿರುವುದು ಖಂಡನೀಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಬ್ಲಾö್ಯಕ್ ಕ್ಯಾಟ್ ಕಮಾಂಡೊ ಕ್ಯಾ. ಮಲ್ಲೆಂಗಡ ಎಂ.ಪೂಣಚ್ಚ ಮಾತನಾಡಿ ದೇಶದ ಭದ್ರತೆಗೆ ಸರ್ವರ ಸಹಕಾರ ಅಗತ್ಯವಾಗಿದ್ದು, ವಿದ್ವಾಂಸಕ ಕೃತ್ಯಗಳನ್ನು ತಡೆಗಟ್ಟಬೇಕು ಎಂದರು.

ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಸಹ ಸಂಯೋಜಕ್ ಅಲ್ಲುಮಾಡ ಶರತ್, ಜಿಲ್ಲಾ ಸಂಘ ಸಂಚಾಲಕ ಚಕ್ಕೆರ ಮನು ಕಾವೇರಪ್ಪ, ಪೊನ್ನಂಪೇಟೆ ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಯೋಜಕ ಸುಳ್ಳಿಮಾಡ ಪಿ.ಸಂಪತ್ ಉಪಸ್ಥಿತರಿದ್ದರು.

ಹಿಂದೂ ಜಾಗರಣ ವೇದಿಕೆಯ ಮಾದಾಪುರದ ಸುನೀಲ್ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮುಖರಾದ ಜೀವನ್, ಲಾಲಾ ಅಯ್ಯಣ್ಣ, ಗಣೇಶ್, ಜೋಯಪ್ಪ, ತಿಮ್ಮಯ್ಯ ಸೇರಿದಂತೆ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು. ಹಿಂದೂ ಜಾಗರಣ ವೇದಿಕೆಯ ಸುನೀಲ್ ಮಾದಾಪುರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿ, ಪೊನ್ನಂಪೇಟೆಯ ಪುತ್ತಾಮನೆ ಅನಿಲ್ ಪ್ರಸಾದ್ ವಂದಿಸಿದರು.

(ಮೊದಲ ಪುಟದಿಂದ) ಮುಂಜಾನೆ ೧೧ ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದಿಂದ ಹೊರಟ ವಾಹನ ಜಾಥಾವು ಪೊನ್ನಂಪೇಟೆ ನಗರ ಪ್ರವೇಶಿಸಿ, ಗೋಣಿಕೊಪ್ಪ ಬೈಪಾಸ್ ಮೂಲಕ ಉಮಾಮಹೇಶ್ವರಿ ದೇವಾಲಯ ತಲುಪಿ ನಂತರ ಮುಖ್ಯ ರಸ್ತೆಯ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸಮಾಪ್ತಿಗೊಂಡಿತ್ತು.

ಆರ್‌ಎಂಸಿ ಬಳಿಯಲ್ಲಿ ಜಾಥಾವನ್ನು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಕೆ. ಬೋಪಣ್ಣ, ಪ್ರಮುಖರಾದ ಗುಮ್ಮಟ್ಟಿರ ಕಿಲನ್ ಗಣಪತಿ, ಪಂದ್ಯAಡ ಹರೀಶ್, ಅಮೃತ್‌ರಾಜ್ ಸೇರಿದಂತೆ ಇನ್ನಿತರ ಪ್ರಮುಖರು ಬರಮಾಡಿಕೊಂಡರು.

ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಶಿವರಾಜ್ ಮುದೋಳ್ ಮುಂದಾಳತ್ವದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ಜಾಥಾದ ಹಿನ್ನಲೆಯಲ್ಲಿ ಬೇರೆ ವಾಹನಗಳನ್ನು ಬದಲಿ ಮಾರ್ಗದಲ್ಲಿ ಬಿಡಲಾಯಿತು. -ಹೆಚ್.ಕೆ. ಜಗದೀಶ್