ವೀರಾಜಪೇಟೆ, ಆ. ೧೨: ಶ್ರಾವಣ ಮಾಸದ ಪ್ರಥಮ ಶನಿವಾರ ದಿನದ ಅಂಗವಾಗಿ ಶ್ರೀ ಶನೈಶ್ಚರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಶನಿವಾರದ ಪೂಜಾ ಕೈಂಕಾರ್ಯಗಳು ಭಕ್ತಿ ಬಾವದಿಂದ ಜರುಗಿತು.

ವೀರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಥಮ ಶನಿವಾರದ ಪೂಜಾ ಕಾರ್ಯಕ್ರಮಗಳು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಆರಂಭವಾಯಿತು. ಅರ್ಚಕರಾದ ಸಂತೋಷ್ ಹೆಬ್ಬಾರ್ ಮತ್ತು ಪವನ್ ಕುಮಾರ್ ಭಟ್ ಸಾರಥ್ಯದಲ್ಲಿ ಪೂಜೆಗಳು ಆರಂಭಗೊAಡಿತು. ದೇವಾಲಯದಲ್ಲಿ ನವಗ್ರಹ ಪೂಜೆ, ಶನಿ ಶಾಂತಿ, ಶನಿ ಜಪ, ರಾಹು ಕೇತು ಜಪ, ಕುಂಕುಮಾರ್ಚನೆ, ಮೃತ್ಯುಂಜಯ ಜಪ ಪೂಜಾದಿಗಳು ನಡೆಯಿತು. ಬಳಿಕ ಮಧ್ಯಾಹ್ನ ೧-೦೦ ಗಂಟೆಗೆ ಶ್ರೀ ಶನೀಶ್ವರ ಸ್ವಾಮಿಗೆ ಮಹಾ ಮಂಗಳಾರತಿ, ಮಹಾಪೂಜೆ ಜರುಗಿತು.

ದೇವಾಲಯದಲ್ಲಿ ತಾ. ೧೭, ೨೪, ೩೧ ರಂದು ಶ್ರಾವಣ ಶನಿವಾರದ ವಿಶೇಷ ಪೂಜೆಗಳು ನಡೆಯಲಿದೆ ಹಾಗೂ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಮಹಾಪೂಜೆಯ ಸಂದರ್ಭದಲ್ಲಿ ದೇಗುಲ ತಕ್ಕರಾದ ಚೋಕಂಡ ರಮೇಶ್ ಮತ್ತು ಕುಟುಂಬಸ್ಥರು, ಪುರೋಹಿತ ವರ್ಗ, ಗ್ರಾಮಸ್ಥರು ನಗರ ಮತ್ತು ಸ್ಥಳೀಯ ಗ್ರಾಮಗಳಿಂದ ಭಕ್ತರು ದೇಗುಲಕ್ಕೆ ಆಗಮಿಸಿ ಶ್ರೀ ಶನೀಶ್ವರ ದೇವರ ಅನುಗ್ರಹ ಪಡೆದು ಪುನಿತರಾದರು.