ಕುಶಾಲನಗರ, ಆ. ೧೨: ರಕ್ತದಾನ ಮಹಾದಾನವಾಗಿದ್ದು, ಆ ಮೂಲಕ ಒಂದು ಜೀವವನ್ನು ಉಳಿಸಲು ಸಹಾಯವಾಗಲಿದೆ ಎಂದು ಮಡಿಕೇರಿ ರಕ್ತ ನಿಧಿ ಕೇಂದ್ರ ಮುಖ್ಯಸ್ಥ ಡಾ.ಕರುಂಬಯ್ಯ ಹೇಳಿದರು.
ಭಾರತೀಯ ರೆಡ್ ಕ್ರಾಸ್ ತಾಲೂಕು ಘಟಕ ಮತ್ತು ರೋಟರಿ ಸಂಸ್ಥೆ ಕುಶಾಲನಗರ ಹಾಗೂ ಮಡಿಕೇರಿ ರಕ್ತನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಹಾಗೂ ಕಣ್ಣು ಮತ್ತು ಅಂಗಾAಗ ದಾನದ ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಕಂಡುಬರುತ್ತಿದೆ. ಇಂತಹ ಶಿಬಿರ ಏರ್ಪಡಿಸುವ ಮೂಲಕ ರೋಗಿಗಳ ತುರ್ತು ಚಿಕಿತ್ಸೆಗೆ ಸಹಕಾರಿಯಾಗಲಿದೆ. ಯುವ ಜನಾಂಗ ಕೆಟ್ಟ ಚಟಗಳಿಗೆ ದಾಸರಾಗದೆ ಉತ್ತಮ ಗುಣಮಟ್ಟದ ಆಹಾರವನ್ನು ಸೇವಿಸಿ ಆರೋಗ್ಯವಂತರಾಗಿ ಇನ್ನೊಂದು ಜೀವವನ್ನು ಉಳಿಸುವ ಮಹತ್ಕಾರ್ಯದ ಚಿಂತನೆ ನಡೆಸಬೇಕಾಗಿದೆ ಎಂದರು.
ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಅಸಹಾಯಕರಾಗುವ ಸಂದರ್ಭ ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದೆ ಎಂದರು.
ನೇತ್ರ ತಜ್ಞ ಡಾ.ನಿರಂಜನ್ ಮಾತನಾಡಿ,ರಕ್ತದಾನ ಜೀವಂತ ಇರುವ ವ್ಯಕ್ತಿಗಳು ನೀಡಬಹುದು. ಆದರೆ ನೇತ್ರ ಮತ್ತು ಅಂಗಾAಗ ದಾನ ವ್ಯಕ್ತಿ ಮೃತಪಟ್ಟ ನಂತರ ನೀಡುವ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಆಸಕ್ತಿಯುಳ್ಳವರು ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು ಎಂದರು. ನೇತ್ರ ಮತ್ತು ಅಂಗಾAಗÀ ದಾನದ ಮೂಲಕ, ಒಬ್ಬ ಅಂಗಾAಶ ದಾನಿಯು ಏಳು ಜೀವಗಳನ್ನು ಉಳಿಸಬಹುದು ದಾನಿಗಳು ಮತ್ತು ಅವರ ಕುಟುಂಬಗಳು ಸಾವಿನ ನಂತರ ತಮ್ಮ ಅಂಗಾAಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಬೇಕು ಎಂದು ಮಾಹಿತಿ ಒದಗಿಸಿದರು.
ತಾಲೂಕು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಕೆ. ಸತೀಶ್ ಮಾತನಾಡಿ, ರಕ್ತದಾನ ಮಹಾದಾನ.ಆರೋಗ್ಯ ವಂತ ವ್ಯಕ್ತಿಯು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹದು.ಕೆಲವರಿಗೆ ರಕ್ತ ದಾನ ಮಾಡುವ ವಿಚಾರದಲ್ಲಿ ತಪ್ಪುಕಲ್ಪನೆ, ಗೊಂದಲ ಮತ್ತು ಭಯವಿದೆ.ರಕ್ತ ನೀಡಿದ ಕೆಲವೇ ದಿನದಲ್ಲಿ ಪರಿಶುದ್ಧವಾದ ರಕ್ತ ಸೇರ್ಪಡೆಗೊಳ್ಳಲಿದೆ ಎಂದರು.
ಕುಶಾಲನಗರ ರೋಟರಿ ಸಂಸ್ಥೆ ಅಧ್ಯಕ್ಷ ಸಿ.ಬಿ. ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಇದೆ ಸಂದರ್ಭ ಮಡಿಕೇರಿ ರಕ್ತ ನಿಧಿಯ ಡಾ ಕರುಂಬಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭ ರೋಟರಿ ವಲಯಾಧ್ಯಕ್ಷ ಡಾ.ಹರೀಶ್ ಶೆಟ್ಟಿ, ರೋಟರಿ ಸದಸ್ಯರಾದ ಶೋಭಾ ಸತೀಶ್, ರೆಡ್ ಕ್ರಾಸ್ ಉಪಾಧ್ಯಕ್ಷ ಎಂ.ಡಿ.ರAಗಸ್ವಾಮಿ,ಪುರಸಭೆ ಸದಸ್ಯ ಬಿ. ಅಮೃತ ರಾಜ್, ರೆಡ್ ಕ್ರಾಸ್ ಕಾರ್ಯಕರ್ತರಾದ ಚಂದ್ರು, ನಂಜುAಡಸ್ವಾಮಿ, ದೇವರಾಜು, ಕೋದಂಡರಾಮ, ಎನ್.ಕೆ. ಮೋಹನ್ ಕುಮಾರ್, ಬಿ. ಅಮೃತ್ ರಾಜ್, ಕೂರನ ಪ್ರಕಾಶ್, ಮಡಿಕೇರಿ ಆಸ್ಪತ್ರೆಯ ಡಾ.ಚೇತನ್ ಕುಮಾರ್ ಉಪಸ್ಥಿತರಿದ್ದರು. ಮಡಿಕೇರಿ ರಕ್ತನಿಧಿ ಕೇಂದ್ರ ತಂಡದವರು ರಕ್ತ ಸಂಗ್ರಹಣೆ ಕಾರ್ಯ ನೆರವೇರಿಸಿದರು.