ಕುಶಾಲನಗರ, ಆ. ೧೨: ವಿಶ್ವ ಆನೆಗಳ ದಿನದ ಅಂಗವಾಗಿ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಸೋಮವಾರ ಆನೆಗಳನ್ನು ವಿಶೇಷವಾಗಿ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು.
ದುಬಾರೆ ಶಿಬಿರದಲ್ಲಿ ಸುಮಾರು ೩೦ ಆನೆಗಳು ಇದ್ದು ಅವುಗಳನ್ನು ಒಂದೆಡೆ ಸೇರಿಸಿ ಮಾವುತ ಸಿಬ್ಬಂದಿಗಳು ಆಹಾರ ನೀಡಿದ ನಂತರ ಪೂಜೆ ನೆರವೇರಿಸಲಾಯಿತು.
ಕಾರಣಾಂತರಗಳಿAದ ಆನೆಗಳ ಮೂಲಕ ಶಿಬಿರದಲ್ಲಿ ನಡೆಸಬೇಕಾಗಿದ್ದ ಕಾರ್ಯಕ್ರಮಗಳನ್ನು ಮುಂದೂಡ ಲಾಗಿದೆ ಎಂದು ಶಿಬಿರದ ಉಪವಲಯ ಅರಣ್ಯ ಅಧಿಕಾರಿ ಉಮಾಶಂಕರ್ ತಿಳಿಸಿದ್ದಾರೆ.
ಈ ಸಂದರ್ಭ ಉಪವಲಯ ಅರಣ್ಯ ಅಧಿಕಾರಿಗಳಾದ ವೆಂಕಟೇಶ್, ದೇವಯ್ಯ, ಸುಬ್ರಾಯ ಸಿಬ್ಬಂದಿಗಳಾದ ಸಾಯಬನ ತಳವಾರ್ ಮತ್ತು ಮಾವುತರು, ಸಿಬ್ಬಂದಿಗಳು ಇದ್ದರು.