ಸೋಮವಾರಪೇಟೆ, ಆ. ೧೨: ತಾಲೂಕಿನ ಶಾಂತಳ್ಳಿ ಹೋಬಳಿಯ ಬಹುಪಾಲು ಕೃಷಿ ಪ್ರದೇಶ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕೃಷಿ ಮಾಡಿರುವ ಜಮೀನನ್ನು ಸಿ. ಮತ್ತು ಡಿ. (ವ್ಯವಸಾಯಕ್ಕೆ ಯೋಗ್ಯವಲ್ಲದ ಜಾಗ) ಎಂದು ಪರಿಗಣಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ನಂತರ ಉದ್ಬವಿಸಿದ ಸಮಸ್ಯೆಗೆ ಈವರೆಗೆ ಪರಿಹಾರ ಸಿಕ್ಕಿಲ್ಲ.
ಈ ನಡುವೆ ಇಂತಹ ಜಾಗದಲ್ಲಿ ಅನೇಕ ದಶಕಗಳಿಂದಲೂ ಕೃಷಿ ಮಾಡಿ ಕೊಂಡು ಜೀವನ ಕಟ್ಟಿಕೊಟ್ಟಿರುವ ರೈತಾಪಿ ವರ್ಗದ ಮಂದಿ ಜಾಗದ ಮೇಲಿನ ಹಕ್ಕಿಗಾಗಿ ತಾಲೂಕು ಕಚೇರಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಸರ್ಕಾರವೇ ನಿಗದಿ ಪಡಿಸಿದ ಅರ್ಜಿ ನಮೂನೆ ೫೦, ೫೩, ೫೭ರಲ್ಲಿಯೂ ಅರ್ಜಿ ಸಲ್ಲಿಸಿ ದಾಖಲೆಗಾಗಿ ಎದುರು ನೋಡುತ್ತಿರುವ ಮಂದಿಗೆ ಇದೀಗ ಸರ್ಕಾರದ ಆದೇಶಗಳು ಅಕ್ಷರಶಃ ಮರಣ ಶಾಸನಗಳಾಗಿ ಕಂಡುಬರುತ್ತಿದ್ದು, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿಯಬೇಕಾಗಿ ಬಂದಿದೆ.
ತಾಲೂಕಿನ ಶಾಂತಳ್ಳಿ ಹೋಬಳಿಯ ಬಹುತೇಕ ಎಲ್ಲಾ ಗ್ರಾಮಗಳನ್ನು ಒಳಗೊಂಡAತೆ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮ ಗಳಲ್ಲಿಯೂ ಈ ಸಮಸ್ಯೆ ಹೆಚ್ಚಾಗಿದೆ.
ಇದೀಗ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಮೂಲಕ ಪ್ರಕಟಣೆಗಳು ಹೊರಬರುತ್ತಿದ್ದು, ಈ ಹಿಂದೆ ಸಿ ಮತ್ತು ಡಿ ಜಾಗವೆಂದು ಗುರುತಿಸಿರುವ ಸರ್ವೆ ನಂಬರ್ ಗಳನ್ನೂ ಒಳಗೊಂಡAತೆ ಗ್ರಾಮಗಳಲ್ಲಿರುವ ಇತರ ಕೃಷಿ ಜಮೀನುಗಳನ್ನು(ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿರುವ ಪ್ರದೇಶಗಳೂ ಸೇರಿ) ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ವೇಳೆ
(ಮೊದಲ ಪುಟದಿಂದ) ಮೈಮರೆತರೆ ನಮ್ಮ ಅಸ್ತಿತ್ವವೇ ಇಲ್ಲವಾಗುತ್ತದೆ ಎಂಬ ಆತಂಕದಿAದ ನೂರಾರು ಮಂದಿ ರೈತರು ಪಟ್ಟಣದಲ್ಲಿ ಸಭೆ ನಡೆಸಿ, ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿದರು.
ಸಿ ಮತ್ತು ಡಿ. ಜಾಗದ ಸಮಸ್ಯೆ ಮತ್ತೆ ರೈತರನ್ನು ಕಾಡುತ್ತಿದೆ. ಒಂದು ವೇಳೆ ನಮ್ಮ ಜಾಗವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದರೆ ನಾವುಗಳು ಅಕ್ಷರಶಃ ಬೀದಿಪಾಲಾಗುತ್ತೇವೆ. ಅನೇಕ ದಶಕಗಳಿಂದ ನೆಲೆಸಿರುವ ನಮಗೆ ಅಸ್ತಿತ್ವವೇ ಇಲ್ಲವಾಗುತ್ತದೆ. ಇದು ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಎಲ್ಲರೂ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧರಾಗಬೇಕಿದೆ. ಕಾನೂನು ಭಾಗದಲ್ಲಿಯೂ ಹೋರಾಟ ನಡೆಸಬೇಕು. ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೂ ತರಬೇಕು. ಈ ನಿಟ್ಟಿನಲ್ಲಿ ಅರಣ್ಯ ಸಚಿವರು, ಕಂದಾಯ ಸಚಿವರೊಂದಿಗೆ ಮುಖ್ಯಮಂತ್ರಿಗಳ ಬಳಿಗೂ ನಿಯೋಗ ತೆರಳಬೇಕೆಂಬ ಒಮ್ಮತದ ಅಭಿಪ್ರಾಯ ಸಭೆಯಲ್ಲಿ ಕೇಳಿಬಂದಿತು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನೂರಾರು ಮಂದಿ ರೈತರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗ್ರಾಮಾಭಿವೃದ್ಧಿ ಮಂಡಳಿ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಕಾರ್ಯಕರ್ತರು, ಸಾರ್ವಜನಿಕರು ಭಾಗಿಯಾಗಿದ್ದರು.
ಸಭೆಯ ಉಸ್ತುವಾರಿಯನ್ನು ಒಕ್ಕಲಿಗರ ಯುವ ವೇದಿಕೆ ವಹಿಸಿಕೊಂಡಿದ್ದು, ಅಧ್ಯಕ್ಷ ಸುರೇಶ್ ಚಕ್ರವರ್ತಿ ಅವರು ಸಮಸ್ಯೆಗಳ ಬಗ್ಗೆ ಸೂಚ್ಯವಾಗಿ ವಿವರಿಸಿದರು. ಶಾಂತಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಗ್ಗನ ಅನಿಲ್ ಮಾತನಾಡಿ, ಶಾಂತಳ್ಳಿ ಹೋಬಳಿ ಮಾತ್ರವಲ್ಲದೆ ಪಟ್ಟಣ ಸುತ್ತಮುತ್ತಲಿನ ಇತರ ಗ್ರಾಮಗಳನ್ನೂ ಸಿ ಮತ್ತು ಡಿ ಎಂದು ವಿಂಗಡಿಸಲಾಗಿದೆ. ನಮ್ಮ ಬುಡಕ್ಕೆ ಬೆಂಕಿ ಬಿದ್ದಾಗಲೂ ನಾವುಗಳು ಎಚ್ಚೆತ್ತುಕೊಳ್ಳದಿದ್ದರೆ ಅಸ್ತಿತ್ವ ಉಳಿಯುವುದಿಲ್ಲ. ಕೃಷಿ ಮಾಡುತ್ತಿದ್ದ ಭೂಮಿಯನ್ನು ಸಿ ಮತ್ತು ಡಿ ಎಂದು ಗುರುತಿಸಿದ ಅಧಿಕಾರಿಗಳು, ಈ ಜಾಗದಲ್ಲಿ ರೆಸಾರ್ಟ್, ಹೋಂ ಸ್ಟೇಗಳಿಗೆ ಅವಕಾಶ ನೀಡಿದ ಅಧಿಕಾರಿಗಳನ್ನು ಮೊದಲು ವಜಾಗೊಳಿಸಲಿ ಎಂದರು.
ನಮ್ಮ ಜಾಗವು ಸರ್ಕಾರಿ ದಾಖಲೆಗಳಲ್ಲಿ ಅರಣ್ಯ ಎಂದಾದರೆ; ನಂತರ ಕೇಂದ್ರ ಸರ್ಕಾರದ ಬಳಿ ಹೋಗಬೇಕಾಗುತ್ತದೆ. ಹಾರಂಗಿ ಅಣೆಕಟ್ಟೆ ನಿರ್ಮಾಣ ಸಂದರ್ಭ ಮಾಡಿರುವ ಒಡಂಬಡಿಕೆಯAತೆ ೮ ಸಾವಿರ ಏಕರೆ ಬದಲಿ ಜಾಗವನ್ನು ಅರಣ್ಯ ಇಲಾಖೆಗೆ ನೀಡಬೇಕಿದ್ದು, ಇದನ್ನು ೧೧,೨೭೦ಕ್ಕೆ ಏರಿಸಿ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಜಾಗ ಗುರುತಿಸಿದ್ದಾರೆ. ಸ್ಥಳೀಯರು ಕೃಷಿ ಮಾಡಿಕೊಂಡಿರುವ ಜಾಗವನ್ನು ಸಿ.ಮತ್ತು ಡಿ. ಎಂದು ವಿಂಗಡಿಸಿ ಅರಣ್ಯ ಇಲಾಖೆಗೆ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಹೋರಾಟ ಮಾಡಲೇಬೇಕಿದೆ ಎಂದರು.
ಇದರ ನಡುವೆ ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿಷಯವೂ ಮುನ್ನೆಲೆಗೆ ಬಂದಿದೆ. ಹಂತ ಹಂತವಾಗಿ ಈ ಭಾಗದ ಜನರನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆದಿದೆ. ತಕ್ಷಣ ಅರಣ್ಯ-ಕಂದಾಯ ಇಲಾಖೆ ಮೂಲಕ ಸಿ.ಮತ್ತು ಡಿ. ಎಂದು ಗುರುತಿಸಿರುವ ಜಾಗದ ಜಂಟಿ ಸರ್ವೆ ನಡೆಸಬೇಕು. ವಾಸ್ತವಾಂಶದ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ, ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ವಿವರವಾದ ವರದಿ ಸಲ್ಲಿಸಬೇಕೆಂದು ಸಲಹೆ ನೀಡಿದರು.
ವಕೀಲ ಬಿ.ಜೆ. ದೀಪಕ್ ಮಾತನಾಡಿ, ಅರಣ್ಯ ಇಲಾಖೆ ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆ ಸರ್ಕಾರ ವಿಶೇಷ ಅಧಿಕಾರಿಯನ್ನು ನೇಮಕಗೊಳಿಸಿದೆ. ಈ ಅಧಿಕಾರಿಗಳು ಸಿ.ಮತ್ತು ಡಿ ಜಾಗವನ್ನು ಮರಳಿ ಅರಣ್ಯಕ್ಕೆ ವಶಪಡಿಸಿಕೊಳ್ಳಲು ಪ್ರಕಟಣೆ ನೀಡುತ್ತಿದ್ದಾರೆ. ತಕ್ಷಣಕ್ಕೆ ಇಂತಹ ಜಾಗ ಹೊಂದಿರುವ ಮಂದಿ ತಮ್ಮ ಬಳಿಯಿರುವಷ್ಟು ದಾಖಲೆಗಳ ಸಹಿತ ಸಂಬAಧಿಸಿದ ಅಧಿಕಾರಿಗಳ ಎದುರು ತಕರಾರು ಅರ್ಜಿ ಸಲ್ಲಿಸಬೇಕು. ಈ ಕೆಲಸ ತಕ್ಷಣಕ್ಕೆ ಆಗಬೇಕಿದೆ ಎಂದರು.
ಸಿ. ಮತ್ತು ಡಿ. ವರ್ಗದ ಜಮೀನನ್ನು ಮರಳಿ ಕಂದಾಯ ಇಲಾಖೆಗೆ ಪಡೆದು, ೩೦ ವರ್ಷಗಳ ಅವಧಿಗೆ ಕೃಷಿಕರಿಗೆ ಭೋಗ್ಯಕ್ಕೆ ನೀಡುವ ಬಗ್ಗೆ ಹಿಂದಿನ ಸರ್ಕಾರ ಕ್ರಮ ಕೈಗೊಂಡಿತ್ತು. ಕೃಷಿಕರು ಕೃಷಿ ಮಾಡಿಕೊಂಡಿರುವ ಜಾಗವನ್ನು ಪರಿಶೀಲಿಸದೇ ಕಚೇರಿಗಳಲ್ಲಿ ಕುಳಿತು ಅಧಿಕಾರಿಗಳು ನೀಡಿದ ವರದಿಯಿಂದಾಗಿ ಇಷ್ಟೆಲ್ಲಾ ಸಮಸ್ಯೆಗಳು ಉದ್ಬವಿಸಿವೆ. ತಕ್ಷಣಕ್ಕೆ ವೈಯಕ್ತಿಕವಾಗಿ ತಕರಾರು ಸಲ್ಲಿಸುವುದು, ಸರ್ಕಾರದ ಗಮನ ಸೆಳೆಯಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ರೈತಾಪಿ ವರ್ಗವನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಅಧಿಕಾರಿಗಳು ತಮಗಿಷ್ಟ ಬಂದAತೆ ವರದಿ ನೀಡುತ್ತಿದ್ದಾರೆ. ಮೈಮರೆತರೆ ಅಸ್ತಿತ್ವ ಇಲ್ಲವಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷ ದಿನೇಶ್ ಹೇಳಿದರು. ಮಾಜೀ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಮುಂದಿನ ಪೀಳಿಗೆಯ ಉಳಿವಿನ ದೃಷ್ಟಿಯಿಂದ ಹೋರಾಟ ಮಾಡಲೇಬೇಕಿದೆ. ಈಗಿನ ಆದೇಶವನ್ನು ಹಿಂಪಡೆದು, ಕೃಷಿ ಮಾಡಿಕೊಂಡಿರುವ ಜಾಗಗಳಿಗೆ ದಾಖಲೆ ಪತ್ರಗಳನ್ನು ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕಿದೆ ಎಂದರು.
ತಾ.ಪA. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಕಳೆದ ೨೦ ವರ್ಷಗಳ ಹಿಂದೆಯೇ ಸಿ ಮತ್ತು ಡಿ. ಜಾಗದ ಸಮಸ್ಯೆಯ ಬಗ್ಗೆ ಹೋರಾಟ ಮಾಡಿದ್ದೆವು. ಇಂದಿಗೂ ಸಮಸ್ಯೆ ಜೀವಂತವಿದೆ. ಈ ಬಗ್ಗೆ ಶಾಸಕ ಮಂತರ್ ಗೌಡ ಅವರ ಗಮನಕ್ಕೆ ತರಲಾಗಿದೆ. ಅವರು ಅರಣ್ಯ ಸಚಿವರೊಂದಿಗೆ ಮಾತನಾಡಿದ್ದಾರೆ. ಸಂರಕ್ಷಿತ ಅರಣ್ಯ ಪ್ರದೇಶದ ಒತ್ತುವರಿ ತೆರವಿಗೆ ಮಾತ್ರ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಸಿ ಮತ್ತು ಡಿ. ಜಾಗದ ಸಮಸ್ಯೆ ಬಗ್ಗೆ ವೀರಾಜಪೇಟೆ ಕ್ಷೇತ್ರದ ಎ.ಎಸ್. ಪೊನ್ನಣ್ಣ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಬಿಜೆಪಿ ಸರ್ಕಾರವಿದ್ದ ಸಂದರ್ಭ ತಂದಿರುವ ೩೦ ವರ್ಷಗಳ ಭೋಗ್ಯಕ್ಕೆ ನೀಡುವ ಕಾನೂನಿನ ವ್ಯಾಪ್ತಿಯಲ್ಲಿ ಸಿ ಮತ್ತು ಡಿ ಜಾಗವೂ ಸೇರಿದೆಯೇ ಅಥವಾ ಕೇವಲ ಪೈಸಾರಿ ಜಾಗ ಮಾತ್ರ ಸೇರಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದು, ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಲೋಕೇಶ್ ತಿಳಿಸಿದರು.
ಎಸ್.ಬಿ. ಭರತ್ಕುಮಾರ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಸಾವಿರಾರು ದುರಸ್ತಿ ಅರ್ಜಿಗಳು ಹಾಗೆಯೇ ಉಳಿದುಕೊಂಡಿವೆ. ದುರಸ್ತಿಗಳಾಗಿದ್ದರೆ ಇದೀಗ ಇಂತಹ ಸಮಸ್ಯೆ ಬರುತ್ತಿರಲಿಲ್ಲ ಎಂದರು. ಗರಗಂದೂರಿನ ಲಕ್ಷö್ಮಣ್ ಮಾತನಾಡಿ, ಅರಣ್ಯಕ್ಕೆ ಭೂಮಿ ವಶಪಡಿಸಿಕೊಳ್ಳುವ ಬಗ್ಗೆ ೨೦೦೬ರಲ್ಲಿಯೇ ಆದೇಶವಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಸರ್ಕಾರ ಬಂದರೂ ಒತ್ತುವರಿ ತೆರವಿಗೆ ಮುಂದಾಗಿರಲಿಲ್ಲ. ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳು ಒತ್ತುವರಿ ತೆರವು ಸಂಬAಧ ಆದೇಶ ಹೊರಡಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸ್ವಾತಂತ್ರೊö್ಯÃತ್ಸವದAದು ಕಪ್ಪು ಬಾವುಟ ಪ್ರದರ್ಶನ ಮಾಡಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಮುಖಂಡರು ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದು ಭಾಗದಲ್ಲಿ ಬೀದಿಗಿಳಿದು ಹೋರಾಡುವ ಮೂಲಕ ಸರ್ಕಾರದ ಗಮನ ಸೆಳೆಯುವುದು, ಮತ್ತೊಂದು ಭಾಗದಲ್ಲಿ ಕಾನೂನಾತ್ಮಕ ಹೋರಾಟ ಮಾಡುವ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು. ಎಲ್ಲಾ ಗ್ರಾಮ ಸಮಿತಿಗಳ ಅಧ್ಯಕ್ಷರುಗಳು, ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು, ಹೋರಾಟಗಾರರನ್ನು ಒಳಗೊಂಡAತೆ ಸಮಿತಿ ರಚಿಸಿ ಮುಂದಿನ ಕಾರ್ಯಸೂಚಿಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಮುಖರಾದ ಎಸ್.ಎಂ. ಚಂಗಪ್ಪ, ಕೆ.ಟಿ. ಪರಮೇಶ್, ಕೂತಿ ದಿವಾಕರ್, ಕೂತಿ ಪರಮೇಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಗಣಪತಿ, ತಲ್ತರೆ ಮಿಥುನ್, ಹರಗ ಶರಣ್, ಹೂವಯ್ಯ ಮಾಸ್ಟರ್, ಬಿ.ಎ. ಧರ್ಮಪ್ಪ, ಎಂ.ಸಿ. ಮುದ್ದಪ್ಪ, ಜಯರಾಂ, ಯೋಗೇಂದ್ರ ಸೇರಿದಂತೆ ನೂರಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.