ಇಂದು ಗ್ರಂಥಾಲಯ ದಿನ

‘ಗ್ರಂಥಾಲಯಗಳು ಬಾಳನ್ನು ಬೆಳಗಿಸುವ ಅಮೃತ ಸಂಜೀವಿನಿಗಳು’ ಎಲ್ಲರಿಗೂ ಒಂದು ವಿಶೇಷ ದಿನವಿರುತ್ತದೆ. ಅದೇ ರೀತಿ ಗ್ರಂಥಾಲಯಕ್ಕೂ ಒಂದು ದಿನ ಅದು ಆಗಸ್ಟ್ ೧೨ ಗ್ರಂಥಪಾಲಕರ ದಿನ. ಬಹುಶ ಎಷ್ಟೋ ಜನರಿಗೆ ಇದು ತಿಳಿದಿರುವುದಿಲ್ಲ. ಆಧುನಿಕ ಡಿಜಿಟಲ್ ಯುಗದಲ್ಲಿ ಗ್ರಂಥಾಲಯವನ್ನೇ ಎಷ್ಟೋ ಮಂದಿ ಮರೆತಿರುತ್ತಾರೆ.

ಗ್ರಂಥಾಲಯದ ಪಿತಾಮಹಾರಾದ ಎಸ್.ಆರ್. ರಂಗನಾಥನ್ ಅವರ ಹುಟ್ಟು ಹಬ್ಬವನ್ನೇ ಗ್ರಂಥಪಾಲಕರ ದಿನ ಎಂದು ಆಚರಿಸಲಾಗುತ್ತದೆ. ಎಸ್.ಆರ್. ರಂಗನಾಥ್ ಅವರ ಪೂರ್ಣ ಹೆಸರು ಶಿಯಾಲಿ, ರಾಮ ಅಮೃತ ಅಯ್ಯರ್ ರಂಗನಾಥನ್. ಅವರು ೧೮೯೨ ರಲ್ಲಿ ಆಗಸ್ಟ್ ೧೨ ರಂದು ತಮಿಳುನಾಡಿನ ತಂಜಾವೂರಿನ ಶಿಯಾಲಿಯಲ್ಲಿ ತಂದೆ ರಾಮ ಅಮೃತ್ ಅಯ್ಯರ್, ತಾಯಿ ಸೀತಾಲಕ್ಷಿö್ಮ ಅವರಿಗೆ ಜನಿಸಿದರು.

ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ತಾತ ಸುಬ್ಬಯ್ಯ ಅವರ ಆಶ್ರಯದಲ್ಲಿ ಬೆಳೆದರು.

ಓದಿನಲ್ಲಿ ಅತ್ಯಂತ ಚುರುಕಾಗಿದ್ದವರು ಓದಿ ಗಣಿತ ಶಾಸ್ತçಜ್ಞರಾದರು. ೧೯೧೬ ರಲ್ಲಿ ಮದ್ರಾಸ್ ವಿಶ್ವ ವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ೧೯೧೭ ರಲ್ಲಿ ಎಲ್.ಟಿ. ಪದವಿ ಪಡೆದು ೧೯೧೭ ರಲ್ಲಿ ಮೊದಲಿಗೆ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ನೇಮಕವಾದರು. ನಂತರ ೧೯೨೩ ರಲ್ಲಿ ಮದರಾಸು ವಿಶ್ವ ವಿದ್ಯಾಲಯದ ಗ್ರಂಥಪಾಲಕರಾಗಿ ನೇಮಕವಾಗುವುದರ ಮೂಲಕ ಅವರ ವೃತ್ತಿ ಜೀವನಕ್ಕೆ ಅತ್ಯಂತ ಮಹತ್ವವಾದ ತಿರುವು ಪಡೆದುಕೊಂಡಿತು. ಇವರು ಅತ್ಯಂತ ಶ್ರದ್ಧೆ ಹಾಗೂ ಬುದ್ಧಿವಂತಿಕೆಯಿAದ ಕೆಲಸ ನಿರ್ವಹಿಸುತ್ತಿದ್ದರು. ಪುಸ್ತಕಗಳ ಜೋಡಣೆ ಬಗ್ಗೆ ಇವರಿಗೆ ಇದ್ದ ಆಸಕ್ತಿಯಿಂದ ಇವರನ್ನು ೧೯೨೪ ರಲ್ಲಿ ಹೆಚ್ಚಿನ ಅಭ್ಯಾಸಕ್ಕಾಗಿ ಇಂಗ್ಲೆAಡಿನ ‘ಲಂಡನ್ ಸ್ಕೂಲ್ ಆಫ್ ಲೈಬ್ರರಿಯನ್’ ಎಂಬ ಶಿಕ್ಷಣ ಸಂಸ್ಥೆಗೆ ಕಳುಹಿಸಿ ಕೊಡಲಾಯಿತು. ಇವರು ಅಲ್ಲಿ ಅಪಾರ ಜ್ಞಾನ ಸಂಪಾದಿಸಿ ಅಲ್ಲಿನ ಅನೇಕ ಗ್ರಂಥಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಪುಸ್ತಕಗಳ ಜೋಡಣೆ, ನಿರ್ವಹಣೆ, ಆಡಳಿತ, ವಿತರಣೆ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ್ದರು. ಈ ಸಮಯದಲ್ಲಿ ಅವರಿಗೆ ಬರ‍್ವಿಕ್ ಸೇಯರ್ಸ್ ಗುರುಗಳಾಗಿದ್ದರು. ನಮ್ಮ ದೇಶದ ಗ್ರಂಥಾಲಯಕ್ಕೂ ಒಂದು ಜೋಡಣೆಯ ಕ್ರಮ ತರಬೇಕೆಂದು ಅವಿರತ ಪ್ರಯತ್ನ ನಡೆಸಿದ್ದರು. ಭಾರತವೂ ಅನೇಕ ಧರ್ಮ, ಸಂಸ್ಕೃತಿಯನ್ನು ಒಳಗೊಂಡ ದೇಶ ಆದ್ದರಿಂದ ಅದೇ ರೀತಿ ವರ್ಗೀಕರಣ ಮಾಡಬೇಕೆಂದು ಒಮ್ಮೆ ಲಂಡನ್‌ನಲ್ಲಿ ‘ಮೈಕೋನ್ ಸೆಟ್’ ಎಂಬ ಗೊಂಬೆಯನ್ನು ಅಂಗಡಿಯಲ್ಲಿ ಕಂಡ ಅವರು ಅದರ ಜೋಡಣೆ, ಸಲಕರಣೆಯನ್ನು ಗಮನಿಸಿ ಇದರಲ್ಲಿ ವಿವಿಧ ಮಾದರಿಯ ಗೊಂಬೆಯನ್ನು ತಯಾರಿಸುವಂತೆ ಗ್ರಂಥಾಲಯದ ಪುಸ್ತಕದ ವರ್ಗೀಕರಣ ಮಾಡಬಹುದು ಎಂದು ೧೯೨೫ ರಲ್ಲಿ ಇಂಗ್ಲೆAಡಿನಿAದ ಭಾರತಕ್ಕೆ ಹಡಗಿನಲ್ಲಿ ಬರುವಾಗ ಗ್ರಂಥಾಲಯ ಪಟ್ಟಿಯನ್ನು ವರ್ಗೀಕರಣ ಮಾಡಿ ೧೯೩೩ ರಲ್ಲಿ ದ್ವಿಬಿಂದು ವರ್ಗೀಕರಣ ಮೊದಲ ಮುದ್ರಣ ಹೊರತಂದರು. ೧೯೩೧ ರಲ್ಲಿ ಗ್ರಂಥಾಲಯಕ್ಕೆ ಪಂಚ ಸೂತ್ರವನ್ನು ಕಂಡು ಹಿಡಿದರು.

೧. ಪುಸ್ತಕಗಳು ಬಳಕೆಗಾಗಿ

೨. ಪ್ರತಿ ಓದುಗನಿಗೆ ಅವನ ಪುಸ್ತಕ

೩. ಪ್ರತಿ ಪುಸ್ತಕಕ್ಕೆ ಅವರ ಓದುಗ

೪. ಓದುಗನ ಸಮಯವನ್ನು ಉಳಿಸಿ

೫. ಗ್ರಂಥಾಲಯವು ಬೆಳೆಯುತ್ತಿರುವ ಶಿಶು.

ಅನೇಕ ಕೃತಿಗಳನ್ನು ಗ್ರಂಥಾಲಯದ ಉಪಯೋಗಕ್ಕೆ ಪ್ರಕಟಿಸಿದ್ದರು. ಇವರ ಕಾವ್ಯನಾಮ ‘ಲಿಬ್ರಿ’. ೧೯೩೧ ರಲ್ಲಿ ಮದ್ರಾಸ್‌ನಲ್ಲಿ ಗ್ರಂಥಾಲಯದ ಡಿಪ್ಲೊಮಾ ತರಗತಿ ಪ್ರಾರಂಭಿಸಿದ್ದರು. ಇವರ ಸಾಧನೆಯನ್ನು ನೋಡಿ ಅನೇಕ ಪ್ರಶಸ್ತಿಗಳು ಇವರನ್ನು ಹರಸಿ ಬಂದವು. ೧೯೫೭ ರಲ್ಲಿ ಪದ್ಮಶ್ರೀ, ೧೯೬೪ ರಲ್ಲಿ ಟಿ. ಲಿಟ್ ಪದವಿ, ೧೯೩೫ ರಲ್ಲಿ ರಾವ್ ಸಾಹೇಬ್, ೧೯೭೦ ರಲ್ಲಿ ಅಮೇರಿಕಾದ ಮಾರ್ಗರೇಟ್ ಮಾನ್ ಪಾರಿತೋಷಕ ಪಡೆದ ಪ್ರಥಮ ಭಾರತೀಯರು, ಇವರನ್ನು ಉಡಿಚಿಟಿಜ ಏಟಿighಣ oಜಿ ಣhe Peಚಿಛಿe ಎಂದು ಕರೆಯುತ್ತಿದ್ದರು.

ಭಾರತದ ಗ್ರಂಥಾಲಯಕ್ಕೆ ಒಂದು ಸ್ಥಾನಮಾನ, ಗೌರವ ಬರಲು ಶ್ರಮಿಸಿದವರನ್ನೇ ಗ್ರಂಥಾಲಯದ ಪಿತಾಮಹಾರೆಂದು ಹಾಗೂ ಅವರ ಹುಟ್ಟುಹಬ್ಬವನ್ನೇ ಗ್ರಂಥಪಾಲಕರ ದಿನವೆಂದು ಆಚರಿಸಲಾಗುತ್ತದೆ.

ಈ ಅಮೂಲ್ಯ ರತ್ನ ೧೯೭೨ ಸೆಪ್ಟೆಂಬರ್ ೨೭ ರಂದು ಹೃದಯಾಘಾತದಿಂದ ಕಣ್ಮರೆಯಾಯಿತು. ನಮ್ಮ ಗ್ರಂಥಪಾಲಕರು ಹಾಗೂ ಸಾರ್ವಜನಿಕ ಗ್ರಂಥಾಲಯವನ್ನು ಉಳಿಸುವ ಸಲುವಾಗಿ ಇವರು ಪಟ್ಟ ಕಷ್ಟ ಅನೇಕ. ಆದ್ದರಿಂದ ಸಾರ್ವಜನಿಕ ಗ್ರಂಥಾಲಯವನ್ನು ಉಳಿಸುವ ಪ್ರಯತ್ನ ಪ್ರತಿಯೊಬ್ಬರ ಕರ್ತವ್ಯವಾಗಬೇಕು.

ಎಲ್ಲಾ ಗ್ರಂಥಪಾಲಕರಿಗೂ, ಗ್ರಂಥಪಾಲಕರ ದಿನದ ಶುಭಾಶಯಗಳನ್ನು ಕೋರುತ್ತಾ, ದಯವಿಟ್ಟು ಎಲ್ಲರೂ ಮೊಬೈಲನ್ನು ಬದಿಗಿಟ್ಟು ಗ್ರಂಥಾಲಯದ ಕಡೆ ಒಂದು ಹೆಜ್ಜೆ ಇಡಿ...

- ಎಂ.ವಿ. ಶೋಭಿಕಾ, ಕದನೂರು ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಪಾಲಕರು, ವೀರಾಜಪೇಟೆ.