ನಾಪೋಕ್ಲು, ಆ. ೧೧: ಹಾಕಿ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಕಿ ಕರ್ನಾಟಕ ಸಂಸ್ಥೆಯ ವತಿಯಿಂದ ಕ್ರೀಡಾ ಪರಿಕರಗಳನ್ನು ಮೂರ್ನಾಡು ವಿದ್ಯಾಸಂಸ್ಥೆಗೆ ಕೊಡುಗೆಯಾಗಿ ನೀಡಲಾಯಿತು.

ಹಾಕಿ ಕರ್ನಾಟಕದ ಅಧ್ಯಕ್ಷ ಎಸ್.ವಿ.ಎಸ್. ಗುಪ್ತ ಅವರ ಸಹಕಾರದೊಂದಿಗೆ ಕ್ರೀಡಾ ಸಾಮಗ್ರಿ ನೀಡಲಾಗಿದೆ. ಇದನ್ನು ನಿನ್ನೆ ನಡೆದ ಸಮಾರಂಭದಲ್ಲಿ ಕಾರ್ಯದರ್ಶಿಯಾಗಿರುವ ಮಾಜಿ ಒಲಂಪಿಯನ್ ಡಾ.ಎ.ಬಿ. ಸುಬ್ಬಯ್ಯ ಅವರು ವಿತರಿಸಿದರು.

೩೦ ಹಾಕಿ ಸ್ಟಿಕ್, ೩೦ ಹಾಕಿ ಬಾಲ್ ಹಾಗೂ ಗೋಲ್‌ಕೀಪರ್ ಕಿಟ್‌ಅನ್ನು ಕೊಡುಗೆಯನ್ನಾಗಿ ನೀಡಲಾಗಿದೆ. ಡಾ. ಅಂಜಪರವAಡ ಸುಬ್ಬಯ್ಯ ಮಾತನಾಡಿ, ಹಾಕಿ ಕ್ರೀಡೆಗೆ ಮೂರ್ನಾಡು ವಿದ್ಯಾ ಸಂಸ್ಥೆಯ ಕೊಡುಗೆ ಅಪಾರವಾಗಿದ್ದು ಕ್ರೀಡೆಯನ್ನು ಉತ್ತೇಜಿಸಲು ಮೂರ್ನಾಡು ವಿದ್ಯಾ ಸಂಸ್ಥೆಗೆ ಇನ್ನೂ ಮುಂದಿನ ದಿನಗಳಲ್ಲಿ ತಮ್ಮಿಂದಾಗುವ ಕೊಡುಗೆಯನ್ನು ನೀಡುವ ಭರವಸೆ ನೀಡಿದರು.

ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ. ಚೌರಿರ ಜಗತ್ ತಿಮ್ಮಯ್ಯ ಈ ಕೊಡುಗೆಯನ್ನು ಸ್ವೀಕರಿಸಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಯಶಸ್ಸನ್ನು ಸಾಧಿಸಿ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಿ, ದಾನಿಗಳು ನೀಡಿದ ಕೊಡುಗೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮೂರ್ನಾಡು ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ವಿದ್ಯಾಸಂಸ್ಥೆಯ ನಿರ್ದೇಶಕರಾದ ಕೆರೆಮನೆ ರಾಮಮೂರ್ತಿ, ಮುಂಡAಡ ಚಂಗಪ್ಪ, ವಿದ್ಯಾಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.