ಪೊನ್ನಂಪೇಟೆ, ಆ. ೧೧ : ವೀರಾಜಪೇಟೆ ಟೆಕ್ವಾಂಡೋ ತರಬೇತಿ ಕೇಂದ್ರದ ವಿದ್ಯಾರ್ಥಿಗಳು, ಕರ್ನಾಟಕ ಟೆಕ್ವಾಂಡೋ ಅಸೋಸಿಯೇಶನ್ ವತಿಯಿಂದ ಬೆಂಗಳೂರಿನ ಬಸವೇಶ್ವರ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಟೆಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದಾರೆ.

ಕೂರ್ಗ್ ಪಬ್ಲಿಕ್ ಸ್ಕೂಲ್‌ನ ೬ನೇ ತರಗತಿ ವಿದ್ಯಾರ್ಥಿನಿ ಪಟ್ಟಡ ಕಾಂಚನ ಎರಡು ಚಿನ್ನದ ಪದಕ, ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯ ೫ನೇ ತರಗತಿಯ ವಿದ್ಯಾರ್ಥಿಗಳಾದ ಅಖಿಲೇಶ್, ಎಸ್. ಪಿ.ಸಂಜಯ್ ಹಾಗೂ ದಿಲನ್ , ಕಾಲ್ಸ್ ಶಾಲೆಯ ೫ ನೇ ತರಗತಿ ವಿದ್ಯಾರ್ಥಿ ಎಸ್. ವಿಹಾನ್, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಿದ್ಯಾರ್ಥಿಗಳಾದ ರುಹಾನ್, ಧನ್ಯತಾ, ನಿಯೋನ್ ಜೋಸೆಫ್ ಅವರುಗಳು ತಲಾ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗಳಿಸಿ ಸಾಧನೆ ಮಾಡಿರುತ್ತಾರೆ. ವಿದ್ಯಾರ್ಥಿಗಳಿಗೆ ವೀರಾಜಪೇಟೆಯ ಟೆಕ್ವಾಂಡೋ ಟ್ರೆöÊನಿಂಗ್ ಕೇಂದ್ರದ ತರಬೇತುದಾರರಾದ ಅರುಣ್ ಕುಮಾರ್ ಮಾರ್ಗದರ್ಶನ ನೀಡಿದ್ದಾರೆ.