ಸಿದ್ದಾಪುರ, ಆ. ೧೧: ಸಿದ್ದಾಪುರ ವ್ಯಾಪ್ತಿಯಲ್ಲಿ ಸಾರ್ವಜನಿಕ ಕ್ರೀಡಾ ಮೈದಾನ ಒದಗಿಸುವಂತೆ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷರಿಗೆ ಎಸ್.ಐ.ಓ. ಸಂಘಟನೆ ಮನವಿ ಸಲ್ಲಿಸಿತು.
ಸಿದ್ದಾಪುರ ವ್ಯಾಪ್ತಿ ಯಲ್ಲಿ ಹೆಚ್ಚು ಕ್ರೀಡಾಪಟು ಗಳಿದ್ದರೂ ಕೂಡ ಮೈದಾನದ ಕೊರತೆಯಿಂದ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮೈದಾನದ ಕೊರತೆ ಕುರಿತು ಹಲವಾರು ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನ ವಾಗಲಿಲ್ಲ. ಈ ಹಿನ್ನೆಲೆ ಎಸ್.ಐ.ಓ. ಸಂಘಟನೆಯು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದೆ. ಈ ಸಂದರ್ಭ ಸಂಘಟನೆಯ ಪ್ರಮುಖರಾದ ಮುಹಮ್ಮದ್ ಫಿರಾಸ್ ಮತ್ತು ಶಮ್ನಾಸ್ ಇದ್ದರು.