ಐಗೂರು, ಆ. ೧೧: ಮಕ್ಕಳಿಗೆ ಪಾಠಗಳ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಲು ಶಿಕ್ಷಣ ಇಲಾಖೆ ವತಿಯಿಂದ ಹೊಸ ತೋಟದ ಸ.ಹಿ. ಪ್ರಾಥಮಿಕ ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ನೀಡಿದ್ದರು. ಈ ಕ್ರೀಡಾ ಸಾಮಗ್ರಿಗಳನ್ನು ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಹರದೂರು ಗ್ರಾ.ಪಂ. ಅಧ್ಯಕೆÀ್ಷ ಉಷಾ, ಪಿಡಿಓ ಪೂರ್ಣಿಮ, ಎಸ್.ಡಿ.ಎಂ.ಸಿ ಅಧ್ಯಕ್ಷ ಚಿದಾನಂದ, ಮು.ಶಿ. ಪವಿತ್ರ, ಹರದೂರು ಗ್ರಾ.ಪಂ. ಉಪಾಧ್ಯಕ್ಷ ಸಲೀಂ ಹೊಸತೋಟ, ಗ್ರಾ.ಪಂ. ಸದಸ್ಯೆ ಉಷಾ, ಶಿಕ್ಷಕಿಯರಾದ ಕೆಂಚವ್ವ ಹೇಮಾವತಿ, ಅಂಜಲಿಕ, ಸವಿತ ನಂದಿತ ಭಾಗವಹಿಸಿದ್ದರು.