ಕುಶಾಲನಗರ, ಆ.೧೧: ತುಂಗಭದ್ರಾ ಅಣೆಕಟ್ಟು ಅಪಾಯದಂಚಿಗೆ ಸಿಲುಕಿದ ಬೆನ್ನಲ್ಲೇ ಜಿಲ್ಲೆಯ ಬೃಹತ್ ಜಲಾಶಯವಾಗಿರುವ ಹಾರಂಗಿ ಅಣೆಕಟ್ಟೆಯ ಭದ್ರತೆಗಾಗಿ ಭಾನುವಾರದಿಂದ ಅಧಿಕಾರಿಗಳು ತೀವ್ರ ನಿಗಾ ವಹಿಸಲು ಆರಂಭಿಸಿದ್ದಾರೆ.
ಹಾರAಗಿ ಜಲಾಶಯ ಗರಿಷ್ಠ ನೀರಿನ ಸಂಗ್ರಹಮಟ್ಟ ೮.೫ ಟಿಎಂಸಿ ಪ್ರಮಾಣವಾಗಿದ್ದು, ಜಲಾಶಯದ ಭದ್ರತೆಯ ದೃಷ್ಟಿಯಲ್ಲಿ ಗರಿಷ್ಠ ಮಟ್ಟದ
೩ಐದನೇ ಪುಟಕ್ಕೆ (ಮೊದಲ ಪುಟದಿಂದ) ನೀರಿನ ಸಂಗ್ರಹ ಮಾಡುತ್ತಿಲ್ಲ ಎಂದು ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.
ಅಣೆಕಟ್ಟಿನ ನಾಲ್ಕು ಕ್ರಸ್ಟ್ ಗೇಟ್ಗಳು ಮತ್ತು ತಳಭಾಗದಲ್ಲಿರುವ ಮೂರು ಸ್ಲೂಯಿಸ್ ಗೇಟ್ಗಳನ್ನು ವಾರ್ಷಿಕವಾಗಿ ಎರಡು ಬಾರಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ನಿರ್ವಹಣೆ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ.
ತಾಂತ್ರಿಕ ತಜ್ಞರ ಮೂಲಕ ಪರಿಶೀಲನೆ ನಡೆಸಲಾಗುತ್ತದೆ ಎಂದು ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಬಿ.ಜೆ. ಪುಟ್ಟಸ್ವಾಮಿ ತಿಳಿಸಿದ್ದಾರೆ. ಹಾರಂಗಿ ಅಣೆಕಟ್ಟೆಗೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದಿನದ ೨೪ ಗಂಟೆಗಳ ಕಾಲ ಅಣೆಕಟ್ಟೆಯ ನೀರಿನ ಒಳಹರಿವು ಹೊರಹರಿವಿನ ಪ್ರಮಾಣವನ್ನು ದಾಖಲೀಕರಣ ಮಾಡಲಾಗುತ್ತಿದೆ ಎಂದು ಅಣೆಕಟ್ಟು ಉಸ್ತುವಾರಿ ಅಧಿಕಾರಿ ಸಿದ್ದರಾಜು ಅವರು ತಿಳಿಸಿದ್ದು, ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕಾಯ್ದುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ವಿವಿಧಡೆ ವಾರದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆ ಎಂದು ಶಕ್ತಿಗೆ ಅಣೆಕಟ್ಟು ಅಧಿಕಾರಿಗಳು ಮುನ್ಸೂಚನೆ ನೀಡಿದ್ದು ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. -ಚಂದ್ರಮೋಹನ್