ಪೊನ್ನಂಪೇಟೆ, ಆ. ೧೧ : ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾನೂರು ಗ್ರಾಮದಲ್ಲಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಕುಟ್ಟ ಜ್ಯೋತಿ ನಗರದ ನಿವಾಸಿ ಪುಷ್ಪ ಎಂಬ ಮಹಿಳೆಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ತಾ. ೧೧ ರಂದು ಬೆಳಿಗ್ಗೆ ಕಾನೂರು ಬಸ್ಸು ತಂಗುದಾಣ ಬಳಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಆಕೆಯ ಬಳಿ ಇದ್ದ ಲಾಟರಿ ಟಿಕೆಟ್ ಹಾಗೂ ನಗದು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಠಾಣಾಧಿಕಾರಿ ನವೀನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಅಪರಾಧ ವಿಭಾಗದ ಉಪನಿರೀಕ್ಷಕ ಹೆಚ್.ಸಿ.ಸುಬ್ರಮಣಿ, ಸಿಬ್ಬಂದಿ ಎಸ್.ಬಿ.ಮಹದೇಶ್ವರ ಸ್ವಾಮಿ, ಹರೀಶ್ ಬಾಳಪ್ಪ ಮತ್ತು ರಮ್ಯಾ ಪಾಲ್ಗೊಂಡಿದ್ದರು.