ಸೋಮವಾರಪೇಟೆ, ಆ. ೧೦: ಬೆಂಗಳೂರಿನ ಆಶಾ ಕಿರಣ ಕಲಾ ಟ್ರಸ್ಟ್ ವತಿಯಿಂದ ಮಳೆಹಾನಿ ಸಂತ್ರಸ್ತರಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರು ಮಳೆಯಿಂದ ಬಡವರು ಸಂಕಷ್ಟ ದಲ್ಲಿರುವ ಬಗ್ಗೆ ಟ್ರಸ್ಟ್ ಅಧ್ಯಕ್ಷೆ ಮಾಲತಿ ಅವರ ಗಮನ ಸೆಳೆದ ಹಿನ್ನೆಲೆ ರಾಮ ನಳ್ಳಿ, ಎಳನೀರುಗುಂಡಿ, ನಂದಿಗುAದ, ಬೀಟಿಕಟ್ಟೆ, ಹೊನವಳ್ಳಿ, ಬೀಟಿಕಟ್ಟೆ, ಚನ್ನಾಪುರ, ಶುಂಠಿ ಗ್ರಾಮದ ೨೭ ಕುಟುಂಬಗಳ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.