ಮಡಿಕೇರಿ, ಆ. ೧೦: ಮೂರ್ನಾಡ್ ಲಯನ್ಸ್ ಕ್ಲಬ್ ಮತ್ತು ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ ಜಂಟಿ ಆಶ್ರಯದಲ್ಲಿ ಮೂರ್ನಾಡ್ ಲಯನ್ಸ್ ಕ್ಲಬ್ ಕಟ್ಟಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಪತ್ನಿಯರಾದ ಪೆಮ್ಮಂಡ ಶೋಭ ಕಾವೇರಪ್ಪ ಮತ್ತು ನೀಲಮ್ಮ ವೆಂಕಟ್ ಅವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಬಡುವಂಡ ಕನ್ನು ಅಪ್ಪಚ್ಚು, ಲಯನ್ಸ್ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣುಅಪ್ಪಣ್ಣ, ಮೂರ್ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಪಳಂಗAಡ ರೇಖಾ, ಕಾರ್ಯದರ್ಶಿ ಪೆಮ್ಮಂಡ ಗೀತಾಪವಿತ್ರ, ಎರಡೂ ಸಂಸ್ಥೆಯ ಸದಸ್ಯರುಗಳು ಭಾಗವಹಿಸಿದ್ದರು.