ಕಣಿವೆ, ಆ. ೧೦: ಕಳೆದ ಒಂದೂವರೆ ತಿಂಗಳಿನಿAದ ಸತತವಾಗಿ ಎಡಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಈ ಬಾರಿ ಭಾರೀ ಹಿನ್ನಡೆಯಾಗಿತ್ತು. ಪುನರ್ವಸು ಹಾಗೂ ಪುಷ್ಯ ಮಳೆಗಳು ನಿರೀಕ್ಷೆಗೂ ಮೀರಿದ ಮಳೆ ಸುರಿಸಿ ಎಲ್ಲೆಡೆ ಜಲಾತಂಕ ಉಂಟುಮಾಡಿದ್ದವು.

ಆರಿದ್ರಾ ಮಳೆ ಜೂನ್ ೨೧ ರಿಂದ ಜುಲೈ ೪ ರವರೆಗೆ ಇತ್ತಾದರೂ ಸಮರ್ಪಕವಾಗಿ ಮಳೆ ಸುರಿಸಲಿಲ್ಲ. ಇನ್ನು ಪುನರ್ವಸು ಮಳೆ ಜುಲೈ ೫ ರಿಂದ ೧೮ ರವರೆಗೆ ಸುರಿದರೆ, ಪುಷ್ಯ ಮಳೆ ಜುಲೈ ೧೯ ರಿಂದ ಆಗಸ್ಟ್ ೨ ರವರೆಗೆ ಸುರಿದಿತ್ತು. ವಿಶೇಷವಾಗಿ ಈ ಬಾರಿ ವಾಣಿಜ್ಯ ಬೆಳೆ ಶುಂಠಿಯ ಫಸಲಂತು ಅತೀವ ಮಳೆಗೆ ಸಿಲುಕಿ ಕೊಳೆ ರೋಗಕ್ಕೆ ತುತ್ತಾಯಿತು. ಇನ್ನು ಜೋಳದ ಬೆಳೆ ವಿಪರೀತವಾದ ಶೀತಕ್ಕೆ ಸಿಲುಕಿ ಕುಂಠಿತಗೊAಡಿತು.

ಸಿಹಿ ಗೆಣಸು, ಮರಗೆಣಸು, ಕೆಸ ಮೊದಲಾದÀ ಕಾಯಿ ಪಲ್ಯೆಗಳ ಬೆಳೆಗಳಿಗೂ ಕೂಡ ಹಿನ್ನಡೆಯಾಯಿತು. ಈ ಹಿಂದಿನ ಅನೇಕ ವರ್ಷಗಳಿಂದ ತಪ್ಪದೇ ಸುರಿಯುತ್ತಿದ್ದ ಆಶ್ಲೇಷ ಮಳೆ ಸದ್ಯ ಈ ಬಾರಿ ವಿಶ್ರಾಂತಿ ಪಡೆದಂತಿದೆ. ಆಗಸ್ಟ್ ೩ ರಂದು ಜನ್ಮತಳೆದ ಆಶ್ಲೇಷ ಮಳೆ ಆಗಸ್ಟ್ ೧೫ ರವರೆಗೆ ಇದೆ. ಆದಾಗ್ಯೂ ಇದೀಗ ಆಶ್ಲೇಷ ಮಳೆ ಮಂಕಾದ ಹಿನ್ನೆಲೆ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕುಗಳ ಮೊದಲಾದ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕಂಡು ಬಂದ ಬಿಸಿಲು ವಾತಾವರಣವಂತು ಕುಂಠಿತಗೊAಡ ಬೆಳೆಗಳಿಗೆ ಅಮೃತ ಸಿಂಚನಗೈದಿತು.

ಅAದರೆ ಕಳೆದ ಅನೇಕ ದಿನಗಳಿಂದ ಬಿಸಿಲನ್ನೇ ಕಾಣದೇ ಜೀವ ಚೇತರಿಕೆಗೆ ಕನವರಿಸುತ್ತಿದ್ದ ಅನೇಕ ಬೆಳೆಗಳ ಹಸಿರೆಲೆಗಳು ಸೂರ್ಯನ ಶಾಖಕ್ಕೆ ಮೈಯೊಡ್ಡಿ ಚಳಿಯಿಂದ ಮೇಲೆದ್ದು ಬಂದAತಹ ರೀತಿ ಭಾಸವಾಗುತ್ತಿದೆ. ಶುಂಠಿ ಹಾಗೂ ಜೋಳ ಕೃಷಿಕರು ಮಳೆಯಿಂದಾಗಿ ಬಾಕಿ ಉಳಿಸಿಕೊಂಡಿದ್ದ ಕೃಷಿ ಚಟುವಟಿಕೆಗಳಿಗೆ ತೊಡಗಿಸಿಕೊಂಡಿದ್ದಾರೆ.

ಇನ್ನು ಹಾರಂಗಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿದ ಕಾರಣ ಕುಶಾಲನಗರ ತಾಲೂಕಿನ ಹಾರಂಗಿ ಅಚ್ಚುಕಟ್ಟು ಪ್ರದೇಶಗಳ ಕೃಷಿಕರ ಭತ್ತದ ನಾಟಿ ಕಾರ್ಯ ಭರದಿಂದ ಸಾಗಿದೆ. ಅತ್ತ ಕಳೆಗುಂದಿದ ಚಿಕ್ಲಿಹೊಳೆ ಜಲಾನಯನ ಪ್ರದೇಶದಲ್ಲೂ ಅಳಿದುಳಿದ ಗದ್ದೆಗಳಲ್ಲಿ ಭತ್ತದ ನಾಟಿಗೆ ಬೆರಳೆಣಿಕೆಯಷ್ಟು ರೈತರು ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ. ಒಟ್ಟಾರೆ ಆಶ್ಲೇಷಾ ಮಳೆ ಈ ಬಾರಿ ನದಿಯಂಚಿನ ಅನೇಕ ನಿವಾಸಿಗಳಿಗೆ ಬೇರೆ ರೀತಿಯ ನೆಮ್ಮದಿ ತಂದರೆ, ಕೃಷಿಕರಿಗೂ ಅತೀವ ಖುಷಿ ತಂದಿದೆ. ಈಗಾಗಲೇ ಆಶ್ಲೇಷಾ ಮಳೆಯ ಎರಡನೇ ಪಾದ ಮುಗಿವ ಹಂತದಲ್ಲಿದ್ದು ಈ ತಿಂಗಳ ಆಗಸ್ಟ್ ೧೫ ರವರೆಗೆ ಇದೆ. ಇನ್ನು ಆರು ದಿನಗಳು ಕಳೆದರೆ ಈ ಬಾರಿಯ ಆಶ್ಲೇಷಾ ಆತಂಕ ದೂರವಾಗಲಿದೆ. - ಕೆ.ಎಸ್. ಮೂರ್ತಿ