ಸುಂಟಿಕೊಪ್ಪ, ಆ. ೯: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ೨೦೨೪-೨೫ನೇ ಸಾಲಿನ ಅಧ್ಯಕ್ಷರಾಗಿ ಕೆ.ವಿ. ಕಿಟ್ಟಣ್ಣ ರೈ, ಪ್ರಧಾನ ಕಾರ್ಯ ದರ್ಶಿಯಾಗಿ ಎಂ.ಐ. ರಿಜ್ವಾನ್ ಅವರುಗಳನ್ನು ನೇಮಕ ಗೊಳಿಸಲಾಯಿತು.
ಸಂಘದ ಸಾರ್ವಜನಿಕ ಸಭಾಂ ಗಣದಲ್ಲಿ ನಡೆದ ವಾರ್ಷಿಕ ಮಹಾ ಸಭೆಯು ಅಧ್ಯಕ್ಷ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದು ಕಳೆದ ಸಾಲಿನ ಲೆಕ್ಕಪತ್ರ ಮಂಡನೆಯ ನಂತರ ೨೦೨೪-೨೫ರ ಸಾಲಿನ ಆಡಳಿತ ಮಂಡಳಿಗೆ ನೇಮಕಗೊಳಿಸಲಾಯಿತು.
ಅಧ್ಯಕ್ಷರಾಗಿ ಕೆ.ವಿ. ಕಿಟ್ಟಣ್ಣ ರೈ, ಉಪಾಧ್ಯಕ್ಷರಾಗಿ ಅಬ್ದುಲ್ಲ, ಕಾರ್ಯದರ್ಶಿಯಾಗಿ ಎಂ.ಐ. ರಿಜ್ವಾನ್, ಸಹಕಾರ್ಯದರ್ಶಿ ಪಿ.ಎಸ್. ರೀನು, ಖಜಾಂಚಿಯಾಗಿ ಅನೀಶ್, ಸಂಘಟನಾ ಕಾರ್ಯದರ್ಶಿಯಾಗಿ ಮುನೀರ್ ಕಂಬಿಬಾಣೆ, ಸಲಹಾ ಸಮಿತಿಗೆ ಸಿ.ಎ. ಬಸಪ್ಪ, ರಾಜ, ವಿನೀಶ್ ಡಿಸೋಜ, ಇಸ್ಮಾಯಿಲ್, ಕೆ. ರವಿ, ಅತೀಕ್, ಸಂದೀಪ್, ಸುರೇಶ, ಅಸೀಸ್, ಅಸ್ಕರ್, ಸೈನುದ್ದೀನ್, ಶಕ್ತಿವೇಲು, ಮೋನು, ಅವರನ್ನು ಆಯ್ಕೆಗೊಳಿಸಲಾಯಿತು.
ಇದೇ ಸಂದರ್ಭ ಚಾಲಕ ಸಿ.ಎ. ಬಸಪ್ಪ ಅವರನ್ನು ನೂತನ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.