ಐಗೂರು, ಆ. ೯: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜೂರಿಗೆ ಶಿಕ್ಷಣ ಇಲಾಖೆ ವತಿಯಿಂದ ಶೂ ಮತ್ತು ಸಾಕ್ಸ್ಗಳನ್ನು ನೀಡಲಾಯಿತು. ೧ನೇ ತರಗತಿಯಿಂದ ೭ನೇ ತರಗತಿಯವರೆಗೆ ಒಟ್ಟು ೬೫ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ಗಳನ್ನು ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್ ವಿತರಿಸಿದರು.

ಈ ಸಂದರ್ಭ ಸಿ.ಆರ್.ಪಿ. ಗಿರೀಶ್, ಮುಖ್ಯ ಶಿಕ್ಷಕಿ ಸರಳಕುಮಾರಿ, ಎಸ್.ಡಿ.ಎಂ.ಸಿ. ಸದಸ್ಯೆ ಆಶಾ, ಶಿಕ್ಷಕ ಅಜಿತ್ ಕುಮಾರ್, ಶಿಕ್ಷಕಿಯರಾದ ಅನಸೂಯ, ಇಂದಿರಾ, ಭಾರತಿ ಮತ್ತು ಮಾನಸ ಭಾಗವಹಿಸಿದ್ದರು.