ಮಡಿಕೇರಿ, ಆ. ೯: ಅಖಂಡ ಭಾರತ ಸಂಕಲ್ಪ ಯಾತ್ರೆ ಅಂಗವಾಗಿ ಮಂಜಿನ ನಗರಿ ಮಡಿಕೇರಿಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ಮಡಿಕೇರಿ ತಾಲೂಕು ಹಿಂದೂ ಜಾಗರಣ ವೇದಿಕೆ ವತಿಯಿಂದ ಸಂಜೆ ಏರ್ಪಡಿಸಲಾಗಿದ್ದ ಮೆರವಣಿಗೆಗೆ ಮಹದೇವಪೇಟೆ ಯಿಂದ ಚಾಲನೆ ನೀಡಲಾಯಿತು. ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ಬಳಿಕ ಮೆರವಣಿಗೆ ಹೊರಟಿತು. ಮಹಿಳೆಯರು ಮುಂಚೂಣಿಯಲಿದ್ದ ಮೆರವಣಿಗೆ ಮಹದೇವಪೇಟೆ, ಇಂದಿರಾಗಾAಧಿ ವೃತ್ತ, ಹಳೆ ಖಾಸಗಿ ಬಸ್ ನಿಲ್ದಾಣವನ್ನು ಹಾದು ಜ. ತಿಮ್ಮಯ್ಯ
ವೃತ್ತದವರೆಗೆ ಸಾಗಿ ನಂತರ
ಕೊಡವ ಸಮಾಜದಲ್ಲಿ ಸಮಾಪ್ತಿಯಾಯಿತು.
ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಅಖಂಡ ಭಾರತ ಸಂಕಲ್ಪದ ಘೋಷಣೆಗಳನ್ನು ಕೂಗಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಹಿಳಾ ಮೋರ್ಚಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಹಿಂಜಾವೆ ಜಿಲ್ಲಾಧ್ಯಕ್ಷ ಕುಕ್ಕೇರ ಅಜಿತ್, ಪ್ರಮುಖರಾದ ಕುಮಾರ್, ಸುನಿಲ್, ಚೇತನ್, ಚಂದ್ರ, ರಮೇಶ್ಹೊಳ್ಳ, ಮನು ಮಂಜುನಾಥ್, ಬಿ.ಕೆ. ಜಗದೀಶ್ ಸೇರಿದಂತೆ ಹೆಚ್ಚಿನ ಸಂಖೈಯಲ್ಲಿ ಹಿಂದೂ ಬಾಂಧವರು ಪಾಲ್ಗೊಂಡಿದ್ದರು. ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.