ಸೋಮವಾರಪೇಟೆ, ಆ. ೯: ಗ್ರಾಮೀಣ ಪ್ರದೇಶಗಳಿಗೂ ಸಾರಿಗೆ ಸೌಲಭ್ಯ ದೊರಕಿದರೆ ಮಾತ್ರ ಮೂಲಭೂತ ಸೌಕರ್ಯಕ್ಕೆ ಅರ್ಥ ಬರುತ್ತದೆ ಎಂದು ತಪೋಕ್ಷೇತ್ರ ಮನೇಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ಅರಕಲಗೂಡು ಡಿಪೋದಿಂದ ಮಾಗಲು, ಅಂಕನಹಳ್ಳಿ ಮೂಲಕ ಮನೆಹಳ್ಳಿ ಮಠಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ. ನೂತನ ಬಸ್ ಮಾರ್ಗಕ್ಕೆ ಮಠದ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಈ ಭಾಗಕ್ಕೆ ಸರ್ಕಾರಿ ಬಸ್‌ನ ಬೇಡಿಕೆ ಇತ್ತು. ಇಲ್ಲಿನ ವಿದ್ಯಾರ್ಥಿಗಳು, ಗ್ರಾಮಸ್ಥರು ನಗರ ಪ್ರದೇಶಗಳಿಗೆ ತೆರಳಲು ಪರದಾಡುತ್ತಿದ್ದರು. ಈ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಮಾಡಿ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಸಚಿವರು ಇಂದಿನಿAದ ಬಸ್ ಸೌಲಭ್ಯ ಕಲ್ಪಿಸಿದ್ದಾರೆ ಎಂದರು. ಬೆಳಿಗ್ಗೆ ೮.೩೦ಕ್ಕೆ ಅರಕಲಗೂಡಿನಿಂದ ಹೊರಟು ಮಾಗಲು, ಅಂಕನಹಳ್ಳಿ ಮೂಲಕ ಶನಿವಾರಸಂತೆಗೆ ಆಗಮಿಸಿ ನಂತರ ಅರಕಲಗೂಡಿಗೆ ತೆರಳಲಿದೆ. ಸಂಜೆ ೪ ಗಂಟೆಗೆ ಮತ್ತೊಂದು ಬಸ್ ಇದೆ ಮಾರ್ಗವಾಗಿ ಸಂಚರಿಸಲಿದೆ ಎಂದರು. ಈ ಸಂದರ್ಭ ಮನೆ ಹಳ್ಳಿ ಮಠದ ಸಮಿತಿಯ ಪದಾಧಿಕಾರಿಗಳಾದ ಮಂಜುನಾಥ್, ಚಂದ್ರಶೇಖರ್, ಸೋಮಣ್ಣ, ಪ್ರಮುಖರುಗಳಾದ ಬಸಪ್ಪ, ರಾಜಣ್ಣ, ಮಲ್ಲೇಶ್, ಬಿ.ಪಿ. ಬಸಪ್ಪ, ಚಂದ್ರಶೇಖರ್, ಧರ್ಮಪ್ಪ, ಶೈಲಮ್ಮ, ಶೀಲಮ್ಮ, ಉಮಾ, ಪುಷ್ಪ, ಕಮಲ, ಮಲ್ಲೇಶಪ್ಪ ಹಾಗೂ ಚಿಕ್ಕ ವೀರರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.