ಪ್ಯಾರಿಸ್, ಆ. ೯ : ಕಳೆದ ಒಲಂಪಿಕ್ಸ್ ನಲ್ಲಿ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು, ಟ್ರಾö್ಯ ಆ್ಯಂಡ್ ಫೀಳ್ಡ್ ಗೇಮ್ಸ್ಗಳಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದಿದ್ದ ನೀರಜ್ ಚೋಪ್ರಾ ಅವರು ಈ ಸಾಧನೆಯನ್ನು ಪುನರಾವರ್ತಿಸಲು ಸ್ವಲ್ಪದರಲ್ಲಿ ಎಡವಿ ೨ನೆ ಸ್ಥಾನಕ್ಕೆ ತೃಪ್ತರಾದರು. ತಾ. ೮ರ ತಡರಾತ್ರಿ ನಡೆದ ಪುರುಷರ ಜಾವಲಿನ್ ಥ್ರೋನ ಫೈನಲ್ ಸುತ್ತಿನಲ್ಲಿ ಹಾಲಿ ಚಾಂಪಿಯನ್ ನೀರಜ್ ಅವರು ಮತ್ತೆ ಚಿನ್ನ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಅಂತಿಮ ಸುತ್ತಿನ ೬ ಪ್ರಯತ್ನಗಳಲ್ಲಿ ಕೇವಲ ಒಂದು ಪ್ರಯತ್ನದಲ್ಲಿ ಮಾತ್ರ ಫೌಲ್ ರಹಿತ ಎಸೆತ ಮಾಡಲು ಸಫಲರಾದರು. ಆದಾಗ್ಯೂ ಈ ಎಸೆತವು ೮೯.೪೫ ಮೀಟರ್ ದೂರ ಸಾಗಿದ್ದರಿಂದ ೨ನೆ ಸ್ಥಾನವನ್ನು ಪಡೆದುಕೊಂಡರು. ಪಾಕಿಸ್ತಾನದ ಅರ್ಶಾದ್ ನದೀಮ್ ಅವರು ತಮ್ಮ ೬ ಪ್ರಯತ್ನಗಳಲ್ಲಿ ಗರಿಷ್ಠ ೯೨.೯೭ ಮೀಟರ್ ದೂರ ಜಾವಲಿನ್ ಅನ್ನು ಎಸೆದು ಹೊಸ ಒಲಂಪಿಕ್ ದಾಖಲೆಯನ್ನು ಸೃಷ್ಟಿಸಿ ಚಿನ್ನದ ಪದಕವನ್ನು ಗಿಟ್ಟಿಸಿಕೊಂಡರು. ೩ನೆ ಸ್ಥಾನವನ್ನು ಗ್ರೆನಡಾ ದೇಶದ ಆ್ಯಂಡರ್ಸನ್ ಪೀಟರ್ಸ್ ೮೮.೫೪ ಮೀಟರ್ ಎಸೆಯುವ ಮೂಲಕ ಪಡೆದುಕೊಂಡರು.

ನೀರಜ್‌ಗೆ ಬೆಳ್ಳಿ

(ಮೊದಲ ಪುಟದಿಂದ)

ಒAದಕ್ಕಿAತ ಹೆಚ್ಚು ಪದಕ ಪಡೆದವರು

ಭಾರತದ ಮಾಜಿ ಕುಸ್ತಿಪಟು ಸುಶಿಲ್ ಕುಮಾರ್ ೨೦೦೮ ರಲ್ಲಿ ಕಂಚು, ೨೦೧೨ ರಲ್ಲಿ ಬೆಳ್ಳಿ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ೨೦೧೬ ರಲ್ಲಿ ಬೆಳ್ಳಿ, ೨೦೨೦ ರಲ್ಲಿ ಕಂಚು ಪಡೆದು ಇದುವರೆಗೆ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಒಂದಕ್ಕಿAತ ಹೆಚ್ಚು ಒಲಂಪಿಕ್ ಪದಕಗಳನ್ನು ಗೆದ್ದ ಆಟಗಾರರೆನಿಸಿಕೊಂಡಿದ್ದರು. ಇದೀಗ ನೀರಜ್ ಕೂಡ ಒಂದು ಚಿನ್ನ, ಒಂದು ಬೆಳ್ಳಿಯೊಂದಿಗೆ ಈ ಪಟ್ಟಿಗೆ ಸೇರಿದ್ದಾರೆ ಹಾಗೂ ಮನು ಭಾಕರ್ ಅವರು ಒಂದೇ ಒಲಂಪಿಕ್ಸ್ನಲ್ಲಿ ೨ ಪದಕಗಳನ್ನು ಪಡೆದುಕೊಂಡಿರುವುದರಿAದ ವೈಯಕ್ತಿಕ ವಿಭಾಗದಲ್ಲಿ ಒಂದಕ್ಕಿAತ ಹೆಚ್ಚು ಪದಕ ಪಡೆದ ಭಾರತೀಯರ ಸಂಖ್ಯೆ (ಸ್ವಾತಂತ್ರö್ಯ ನಂತರ) ಇದೀಗ ೪ಕ್ಕೇರಿದೆ.