ಆಷಾಢ ಕಳೆದು ಎಲ್ಲ ಹಬ್ಬ ಹರಿದಿನಗಳಿಗೆ ಮುನ್ನುಡಿಯಿಡುವುದು ನಾಗರ ಪಂಚಮಿ ಹಬ್ಬ. ಈ ಹಬ್ಬವು ಮುಂದೆ ಬರಲಿರುವ ಸಾಲು ಸಾಲು ಹಬ್ಬಗಳಿಗೆ ಮೊದಲ ಮೆಟ್ಟಿಲು. ಹೆಂಗಳೆ ಯರು, ಮಕ್ಕಳು ಸಂಭ್ರಮದಿAದ ಸಂಭ್ರಮಿಸುವ ಹಬ್ಬ. ಹಿಂದೂ ಧರ್ಮದಲ್ಲಿ ನಾಗದೇವರಿಗೆ ವಿಶೇಷ ಮಹತ್ವವಿದೆ. ನಾಗರ ಪಂಚಮಿ ಹಬ್ಬದಂದು ಸಂತೋಷ ಸಮೃದ್ಧಿಯ ಬದುಕಿಗಾಗಿ ಹೊಲಗಳಲ್ಲಿನ ಬೆಳೆಗಳ ರಕ್ಷಣೆಗಾಗಿ ಹಾವುಗಳನ್ನು ಪೂಜಿಸಲಾಗುತ್ತದೆ. ನಾಗದೇವರಿಗೂ ಮನುಜರಿಗೂ ಅವಿನಾಭಾವ ಸಂಬAಧ. ಜಗತ್ತಿನೆಲ್ಲೆಡೆ ಬೇರೆ ಬೇರೆಯ ರೀತಿಯಿಂದ ಆರಾಧನೆ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಭಿನ್ನ ಚಿಂತನೆಯಿAದ ದೇವರೆಂದು ಭಕ್ತಿಭಾವದಲ್ಲಿ ಪೂಜಿಸಲಾಗುತ್ತದೆ. ಶ್ರಾವಣ ಶುದ್ಧ ಪಂಚಮಿಯ ದಿನ ಸೆಗಣಿಯಿಂದ ಅಂಗಳ ಸಾರಿಸಿ, ರಂಗೋಲಿ ಅಥವ ಅರಿಶಿನ ಕುಂಕುಮ ಹುಡಿಯಿಂದ ನಾಗನ ಚಿತ್ರ ಬಿಡಿಸಿ ನೇಮ ನಿಷ್ಠೆಯಿಂದ ಸ್ನಾನ ಮಾಡಿ ಮಡಿಯುಟ್ಟು ಪೂಜೆ ಸಲ್ಲಿಸುತ್ತಾರೆ. ಮನೆಯ ಹತ್ತಿರವಿರುವ ನಾಗನ ಹುತ್ತಕ್ಕೆ ಆರಿಶಿನ ಕುಂಕುಮ ಹಾಕಿ ಹಾಲು ಎರೆಯುತ್ತಾರೆ ಇದೊಂದು ನಂಬಿಕೆ.

ತುಳುನಾಡಿನಲ್ಲಿ ನಾಗನಿಗೆ ತನ್ನದೇ ಆದ ವಿಶೇಷ ಸ್ಥಾನವಿದೆ. ಇಲ್ಲಿ ತಿಂಗಳಿಗೊಮ್ಮೆ ಬರುವ ಪಂಚಮಿಯ ದಿನದಂದು ತಂಬಿಲ ಸೇವೆ ಮಾಡುತ್ತಾರೆ. ಅಂತೇಯೇ ವರುಷಕೊಮ್ಮೆ ನಾಗರ ಪಂಚಮಿಯ ಹಬ್ಬದಂದು ಕುಟುಂಬದ ಪ್ರತಿಯೊಬ್ಬ ಸದಸ್ಯರು ಸೇರಿ ಸಂಭ್ರಮದಿAದ ಆಚರಿಸುವುದು ರೂಢಿ. ಇಲ್ಲಿ ಪ್ರತಿ ಮನೆ - ಕುಟುಂಬಕ್ಕೊAದು ನಾಗ ಬನ - ನಾಗಕಟ್ಟೆ ಗಳಿರುವುದನ್ನು ಕಾಣಬಹುದು. ಪಂಚಮಿಯ ದಿನ ನಾಗಕಟ್ಟೆಯನ್ನು ಶೃಂಗರಿಸಿ ನಾಗನ ಮೂರ್ತಿಯನ್ನು ಶುಚಿಗೊಳಿಸಿ ಹಾಲಾಭಿಷೇಕ , ಸಿಯಾಳಾಭಿಷೇಕ, ಅರಶಿನಾಭಿಷೇಕ ಕೊನೆಗೆ ಕಲಶಾಭಿಷೇಕ ಮಾಡುತ್ತಾರೆ. ನಾಗದೇವರಿಗೆ ಪ್ರಿಯವಾದ ಪಿಂಗಾರ(ಹಿAಗಾರ)ದೊAದಿಗೆ ಅರಿಶಿನದ ಉಂಡೆಯನ್ನು ನಾಗನ ಪ್ರತಿಮೆಯ ಹೆಡೆಯ ಮೇಲಿರಿಸಿ ಪೂಜಿಸುವುದು ತುಳುನಾಡಿನ ಸಂಪ್ರದಾಯ. ನಾಗ ಸಂತತಿಗಳನ್ನು ನಾಶಮಾಡಿದರೆ ಅವುಗಳ ಶಾಪದಿಂದ ಸಂತಾನಪ್ರಾಪ್ತಿಯಾಗದು, ಒಂದು ವೇಳೆ ಸಂತಾನ ಭಾಗ್ಯವಾದರೂ ಅಂಗವಿಕಲತೆಯನ್ನು ಹೊಂದಿದ್ದು, ಕೌಟುಂಬಿಕ ನೆಮ್ಮದಿಯಿಂದ ಶಾಂತಿಯುತ ಜೀವನ ಸಾಗಿಸಲು ಅಸಾಧ್ಯ. ಚರ್ಮ ಸಂಬAಧಿಸಿದ ಕಾಯಿಲೆಗಳು ಕೂಡ ನಾಗ ಸಂತತಿಗೆ ಕೊಟ್ಟ ತೊಂದರೆಯಿAದ ಉಂಟಾಗುವ ದೋಷಗಳೆಂಬ ಬಲವಾದ ನಂಬಿಕೆ ಇದೆ. ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಹಬ್ಬಕ್ಕೆ ಹೆಚ್ಚಿನ ಸ್ಥಾನವಿದೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಆಕೆಯ ಅಣ್ಣ-ತಮ್ಮ ಬಂದು ಅತ್ತೆಮನೆಯಿಂದ ತವರುಮನೆಗೆ ಕರೆದುಕೊಂಡು ಹೋಗುವ ಭಾವನಾತ್ಮಕ ಪದ್ಧತಿ ಇದೆ. ಹೆಣ್ಣುಮಕ್ಕಳು ಈ ಹಬ್ಬವನ್ನು ತಮ್ಮ ಒಡಹುಟ್ಟಿದವರ ಜೊತೆ ಸಂಭ್ರಮದಿAದ ಆಚರಿಸುತ್ತಾರೆ. ವಿಶೇಷ ಅಡುಗೆಗಳಾದ ರೊಟ್ಟಿ, ಬದನೆ ಎಣ್ಣೆಗಾಯಿ, ಕಾಳು ಪಲ್ಯ, ತಂಬಿಟ್ಟು, ಲಾಡು ಮುಂತಾದವುಗಳನ್ನು ಸಡಗರದಿಂದ ತಯಾರಿಸಿ ಪೂಜೆ ಮಾಡುತ್ತಾರೆ.

- ಜಯಂತಿ ರೈ, ಮಡಿಕೇರಿ. ಮೊ. ೯೪೮೧೯೫೨೨೧೬.