ನವದೆಹಲಿ, ಆ. ೮: ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರಿAದ ವಿರೋಧದ ನಡುವೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಗುರುವಾರ ವಕ್ಫ್ ಮಂಡಳಿಯನ್ನು ನಿಯಂತ್ರಿಸುವ, ಕಾನೂನಿಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಿದರು.

ಸಚಿವ ಕಿರಣ್ ರಿಜಿಜು ಅವರು ಸದನದಲ್ಲಿ ಮಾತನಾಡಿ “ ಇದನ್ನು ಯಾವುದೇ ಸಮಿತಿಗೆ ಉಲ್ಲೇಖಿಸಬೇಕಾದರೆ, ನಾನು ನನ್ನ ಸರ್ಕಾರದ ಪರವಾಗಿ ಮಾತನಾಡಲು ಬಯಸುತ್ತೇನೆ. ವಿವರವಾದ ಚರ್ಚೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಲಾಗುವುದು” ಎಂದು ಹೇಳಿದರು.

ವಿಪಕ್ಷಗಳು ಸರಕಾರದ ನಿರ್ಧಾರ “ಕಠಿಣÀ” ಎಂದು ಕರೆದು ”ಧಾರ್ಮಿಕ ನೆಲೆಯಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ” ಎಂದು ಆಕ್ರೋಶ ಹೊರ ಹಾಕಿವೆ.

ಪ್ರತಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ಸಚಿವ ರಿಜಿಜು ‘ವಕ್ಫ್ ಮಂಡಳಿಯನ್ನು ಮಾಫಿಯಾ ವಶಪಡಿಸಿಕೊಂಡಿದೆ ಮತ್ತು ಯಾವುದೇ ಧಾರ್ಮಿಕ ಸಂಸ್ಥೆಯ ಸ್ವಾತಂತ್ರö್ಯಕ್ಕೆ ಅಡ್ಡಿಪಡಿಸುವುದಿಲ್ಲ’ ಎಂದು ಹೇಳಿದರು.

”ಸಂಸತ್ ಸದಸ್ಯರನ್ನು ಯಾವುದೇ ಧರ್ಮದೊಂದಿಗೆ ಜೋಡಿಸುವುದು ಸರಿಯಲ್ಲ. ಬೇರೆ ಬೇರೆ ಧರ್ಮದವರನ್ನು ವಕ್ಫ್ ಮಂಡಳಿಯ ಭಾಗವಾಗಿಸಬೇಕೆಂದು ನಾವು ಹೇಳುತ್ತಿಲ್ಲ. ಸಂಸದರು ವಕ್ಫ್ ಮಂಡಳಿ ಸದಸ್ಯರಾಗಿರಬೇಕು ಎಂದು ನಾವು ಹೇಳುತ್ತಿದ್ದೇವೆ. ಈಗ, ಸಂಸದರು ಹಿಂದೂ ಅಥವಾ ಕ್ರಿಶ್ಚಿಯನ್ ಆಗಿದ್ದರೆ, ಅದಕ್ಕೆ ನಾವು ಏನು ಮಾಡಬಹುದು? ಈಗ, ಒಬ್ಬ ಸಂಸದ/ಸAಸದೆಯನ್ನು ವಕ್ಫ್ ಮಂಡಳಿಗೆ ಸೇರಿಸಿದರೆ ನಾವು ಸಂಸದರ ಧರ್ಮವನ್ನು ಬದಲಾಯಿಸಬೇಕೇ?’ ಎಂದು ಕಿರಣ್ ರಿಜಿಜು ಪ್ರಶ್ನಿಸಿದರು.

ಒಮ್ಮೆ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಗುರ್ತಿಸಿದರೆ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಭಾರತ ದೇಶದಲ್ಲಿ ಒಟ್ಟು ೩೦ ವಕ್ಫ್ ಮಂಡಳಿಗಳಿದ್ದು, ಒಟ್ಟು ೯ ಲಕ್ಷ ಎಕರೆ ಭೂಮಿಯನ್ನ ನಿರ್ವಹಿಸುತ್ತಿವೆ. ಈ ಭೂಮಿಯ ಒಟ್ಟು ಮೌಲ್ಯ ಸುಮಾರು ೧.೨ ಲಕ್ಷ ಕೋಟಿ ರೂ. ಎನ್ನಲಾಗಿದೆ. ಇದೇ ಕಾರಣಕ್ಕಾಗಿ ವಕ್ಫ್ ಬೋರ್ಡ್ ಇಡೀ ಭಾರತದಲ್ಲೇ ಅತಿ ಹೆಚ್ಚು ಭೂಮಿಯ ಮಾಲೀಕತ್ವ ಹೊಂದಿರುವ ಮೂರನೇ ಸಂಸ್ಥೆಯಾಗಿದೆ. ರೈಲ್ವೆ ಹಾಗೂ ರಕ್ಷಣಾ ಇಲಾಖೆ ಬಳಿಕ ವಕ್ಫ್ ಮಂಡಳಿ ಬಳಿಯಲ್ಲೇ ಹೆಚ್ಚು ಭೂಮಿ ಇದೆ. ಈ ಹಿನ್ನೆಲೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ವಕ್ಫ್ ತಿದ್ದುಪಡಿ ಮಸೂದೆಯ ೫ ಮುಖ್ಯಾಂಶಗಳು

ಹಲವು ಮಹತ್ವದ ಸುಧಾರಣೆಗಳನ್ನು ಈ ತಿದ್ದುಪಡಿ ಮಸೂದೆ ಪ್ರಸ್ತಾಪಿಸಿದೆ. ಪ್ರಮುಖವಾಗಿ ರಾಜ್ಯಗಳ ವಕ್ಫ್ ಮಂಡಳಿ ಜೊತೆಯಲ್ಲೇ ಕೇಂದ್ರೀಯ ವಕ್ಫ್ ಸಮಿತಿ ರಚನೆ, ಮುಸ್ಲಿಂ ಮಹಿಳೆ ಹಾಗೂ ಮುಸ್ಲಿಂಮೇತರ ಸದಸ್ಯರ ನೇಮಕ, ಪ್ರತಿ ರಾಜ್ಯಗಳ ಬೋರ್ಡ್ಗಳು ಹಾಗೂ ಕೇಂದ್ರೀಯ ಪರಿಷತ್ನಲ್ಲೂ ತಲಾ ಇಬ್ಬರು ಮಹಿಳೆಯರನ್ನು ನೇಮಕ ಮಾಡಬೇಕೆಂದು ತಿದ್ದುಪಡಿ ಮಸೂದೆ ಹೇಳುತ್ತದೆ.

ಯಾವುದೇ ಭೂಮಿಯನ್ನು ವಕ್ಫ್ ಆಸ್ತಿ ಅಥವಾ ಸರ್ಕಾರಿ ಭೂಮಿ ಎಂದು ನಿರ್ಧರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕೈಗೆ ನೀಡಬೇಕು. ಮುಸ್ಲಿಮರ ಬೋಹರಾಸ್ ಹಾಗೂ ಅಘಖಾನಿ ಪಂಗಡದ ಆಸ್ತಿಗಳ ನಿರ್ವಹಣೆಗೆ ಪ್ರತ್ಯೇಕ ಔಕಾಫ್ ಮಂಡಳಿ ಸ್ಥಾಪನೆ ಮಾಡಬೇಕು. ಜೊತೆಯಲ್ಲೇ ವಕ್ಫ್ ಮಂಡಳಿಯಲ್ಲಿ ಶಿಯಾ, ಸುನ್ನಿ, ಬೋಹರಾಸ್ ಹಾಗೂ ಅಘಖಾನಿ ಪಂಗಡಗಳ ಪ್ರಾತಿನಿಧ್ಯ ಇರಲೇಬೇಕು ಎಂದು ಹೇಳುತ್ತದೆ.

ಭಾರತ ಸರ್ಕಾರದ ಸಿಎಜಿ ನೇಮಕ ಮಾಡುವ ಆಡಿಟರ್ಗಳು ವಕ್ಫ್ ಆಸ್ತಿಗಳ ಲೆಕ್ಕ ಪರಿಶೀಲನೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಈ ಮಸೂದೆ ಮೂಲಕ ನೀಡಲಾಗುತ್ತದೆ.

ಯಾವುದೇ ಆಸ್ತಿಯನ್ನು ವಕ್ಫ್ ಮಂಡಳಿಗೆ ನೀಡುವವರು ಕಡ್ಡಾಯವಾಗಿ ‘ವಕ್ಫ್ ನಾಮಾ’ ಮಾಡಿಸಬೇಕು. ಲಿಖಿತ ದಾಖಲೆಯಲ್ಲಿ ಆಸ್ತಿಯನ್ನು ವಕ್ಫ್ ಮಂಡಳಿಗೆ ಬರೆದುಕೊಡಬೇಕು ಎಂದು ಮಸೂದೆ ಹೇಳುತ್ತದೆ. ಇದಕ್ಕೂ ಮುನ್ನ ಕೇವಲ ಬಾಯಿಮಾತಿನಲ್ಲೇ ವಕ್ಫ್ ಆಸ್ತಿ ಒಪ್ಪಂದ ಆಗುತ್ತಿತ್ತು..

“ನಾನು ಸದನಕ್ಕೆ, ವಿಶೇಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಹೇಳಲು ಬಯಸುತ್ತೇನೆ, ನಿಮಗೆ ಸಾಧ್ಯವಾಗದ್ದನ್ನು ಮಾಡಲು ನಾವು ತಿದ್ದುಪಡಿಗಳನ್ನು ತರುತ್ತಿದ್ದೇವೆ, ಇದು ಸಾಮಾನ್ಯ ಮುಸ್ಲಿಮರನ್ನು ಮೇಲೆತ್ತುತ್ತದೆ" ಎಂದು ಸಚಿವ ರಿಜಿಜು ಎಲ್ಲಾ ಸದಸ್ಯರು ಮಸೂದೆಯನ್ನು ಬೆಂಬಲಿಸುವAತೆ ಒತ್ತಾಯಿಸಿದರು.

ಈ ಮಸೂದೆಯು ಭಾರತೀಯ ಸಂವಿಧಾನದ ಒಂದೇ ಒಂದು ಷರತ್ತನ್ನು ಉಲ್ಲಂಘಿಸುವುದಿಲ್ಲ ಎಂದು ಪ್ರತಿಪಾದಿಸಿದ ಅವರು, ''ವಕ್ಫ್ ಮಂಡಳಿಯು ಸಂವಿಧಾನದ ೨೫ ಮತ್ತು ೨೬ ನೇ ಪರಿಚ್ಛೇದದ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿದರು.

ಮಸೂದೆ ಯಾರ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ, ಬದಲಾಗಿ ಇದುವರೆಗೆ ವಂಚಿತರಾದವರಿಗೆ ಹಕ್ಕುಗಳನ್ನು ನೀಡುತ್ತದೆ ಎಂದು ರಿಜಿಜು ಸ್ಪಷ್ಟಪಡಿಸಿದರು.

"ವಕ್ಫ್ ಬೋರ್ಡ್ ಅನ್ನು ಗಣಕೀಕರಣಗೊಳಿಸಬೇಕು, ಡೇಟಾವನ್ನು ಕೇಂದ್ರೀಕರಿಸಬೇಕು ಮತ್ತು ಮರುಪರಿಶೀಲಿಸಬೇಕು ಎಂದು ನುಡಿದರು.

ಈ ಸಂದರ್ಭ ಅವರು ಕೆಲವು ಉದಾಹರಣೆಗಳನ್ನು ನೀಡಿದರು. ತಿರುಚಿರಾಪಳ್ಳಿಯಲ್ಲಿ ೧,೫೦೦ ವರ್ಷಗಳಷ್ಟು ಹಳೆಯದಾದ ದೇವಸ್ಥಾನವೊಂದು ಗ್ರಾಮದಲ್ಲಿದೆ. ಈ ಗ್ರಾಮವನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಸೂರತ್ ಮುನ್ಸಿಪಲ್ ಕಾರ್ಪೋರೇಶನ್‌ನ ಪ್ರಧಾನ ಕಚೇರಿಯನ್ನು ವಕ್ಫ್ ಭೂಮಿ ಎಂದು ಘೋಷಿಸಲಾಗಿದೆ.

ಅಲ್ಲದೆ ೨೦೧೨ ರಲ್ಲಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ವರದಿಯು ವಕ್ಫ್ ಮಂಡಳಿಯು ೨೯,೦೦೦ ಎಕರೆ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಿದೆ ಎಂದು ಹೇಳಿಕೊಂಡಿದೆ" ಎಂದು ಸಚಿವರು ವಿವರಿಸಿದರು.