ಮಡಿಕೇರಿ, ಆ. ೮: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬೊಳ್ಳುಮಾಡು ಮಾತಂಡ ಕುಟುಂಬಸ್ಥರ ಸಹಭಾಗಿತ್ವದಲ್ಲಿ ಬೊಳ್ಳುಮಾಡು, ಕುಂಜಿಲಗೇರಿ, ಕಡಂಗಮರೂರು, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸಹಕಾರ ದೊಂದಿಗೆ ತಾ. ೧೪ ರಂದು ನಡೆಯುವ “ಬೇಲ್ ನಮ್ಮೆ”ಯ ಬಗ್ಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯು ಬೊಳ್ಳುಮಾಡು ವಿಎಸ್‌ಎಸ್‌ಎನ್ ಕಟ್ಟಡದಲ್ಲಿ ನಡೆಸಲಾಯಿತು. ಬೊಳ್ಳುಮಾಡು ವಿಎಸ್‌ಎಸ್‌ಎನ್ ಅಧ್ಯಕ್ಷ ಮಾತಂಡ ಬೇಬ ಪೂವಯ್ಯ ಮುಂದಾಳತ್ವದ ಸಭೆಯಲ್ಲಿ ಬೇಲ್‌ನಮ್ಮೆಯ ರೂಪುರೇಷೆಗಳ ಬಗ್ಗೆ ಚರ್ಚಿಸ ಲಾಯಿತು. ಅಕಾಡೆಮಿ ರಿಜಿಸ್ಟಾçರ್ ಅಜ್ಜಿಕುಟ್ಟಿರ ಸಿ. ಗಿರೀಶ್ ಅಕಾಡೆಮಿಯ ಕಾರ್ಯ ವ್ಯಾಪ್ತಿಯ ಬಗ್ಗೆ ವಿವರಿಸಿದರು.

ಬೇಲ್ ನಮ್ಮೆಗೆ ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಜಿಲ್ಲೆಯ ಶಾಸಕರುಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿಯವರು, ತಹಶೀಲ್ದಾರರು, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಆಗಮಿಸಲಿ ರುವುದರಿಂದ ಸರ್ವ ರೀತಿಯ ವ್ಯವಸ್ಥೆ- ಏರ್ಪಾಡು ಗಳನ್ನು ಮಾಡಿಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಬೇಲ್ ನಮ್ಮೆಯ ಸಂಪೂರ್ಣ ಉಸ್ತುವಾರಿಯನ್ನು ಮಾತಂಡ ಪಿ. ಧೀರಜ್ ಚಂಗಪ್ಪ, ಮಾತಂಡ ರನ್ನ, ಮೇಚುವಂಡ ಎ. ಮಂಜು, ಕಳ್ಳಿರ ವಿನು ಕರುಂಬಯ್ಯ, ಪಟ್ಟಂಡ ಅರುಣ್, ಮುಂಡAಡ ನವೀನ್, ಮುಕ್ಕಾಟಿರ ಬಿನ್ನು, ಮಾತಂಡ ಮಧು ಪೂವಯ್ಯ, ಅಲ್ಲಪಿರ ಶ್ವೇತ ನಾಣಯ್ಯ, ಮಾತಂಡ ಯಶ್ಮ ಕರುಂಬಯ್ಯ ಇವರುಗಳಿಗೆ ವಹಿಸಲಾಯಿತು. ಸ್ವಾಗತ ಸಮಿತಿಗೆ ಅಕಾಡೆಮಿ ಅಧ್ಯಕ್ಷರು, ರಿಜಿಸ್ಟಾçರ್, ಸದಸ್ಯರು, ಮಾತಂಡ ಬೇಬ ಪೂವಯ್ಯ, ಬಟ್ಟಕಾಳಂಡ ಕಾಮುಣಿ, ಮಾತಂಡ ಕಂಬು ಕರುಂಬಯ್ಯ ಅವರನ್ನು ಆಯ್ಕೆ ಮಾಡಲಾಯಿತು. ವೇದಿಕೆ ಸಮಿತಿಗೆ ಅಲ್ಲಪ್ಪಿರ ಶ್ವೇತ ನಾಣಯ್ಯ, ಮಾತಂಡ ಯಶ್ಮ ಕರುಂಬಯ್ಯ, ಕಂಬು ಕರುಂಬಯ್ಯ, ಶಕು ಅಕ್ಕಮ್ಮರನ್ನು ಉಸ್ತುವಾರಿಗಳಾಗಿ ನೇಮಿಸಿ ಕೊಳ್ಳ ಲಾಯಿತು. ಪೈಪೋಟಿ ಸಮಿತಿಗೆ ಚೇನಂಡ ಸುರೇಶ್, ಮಾತಂಡ ಸೋಮಣ್ಣರಿಗೆ ಜವಾಬ್ದಾರಿಕೆ ನೀಡ ಲಾಯಿತು. ಸ್ವಚ್ಛತಾ ಸಮಿತಿಗೆ ಗ್ರಾ.ಪಂ. ಸದಸ್ಯರಾದ ಕುಮ್ಮಂಡ ಕಾಳಯ್ಯರಿಗೆ ಜವಾಬ್ದಾರಿ ನೀಡಲಾಯಿತು.

ವಾಲಗ ತಂಡದ ವ್ಯವಸ್ಥೆಯನ್ನು ಮಾತಂಡ ಮನು ದೇವಯ್ಯ ನಿರ್ವಹಿಸುವಂತೆ, ಉಳುವ ಎತ್ತಿನ ವ್ಯವಸ್ಥೆಗೆ ಪೊನ್ನಚಂಡ ಸುರೇಂದ್ರರವರನ್ನು, ಬಂದೂಕು ದಾರಿಗಳ ತಯಾರಿಗೆ ಪಂದ್ಯAಡ ರವಿ ಹಾಗೂ ಮಾತಂಡ ಮಧು ಪೂವಯ್ಯರನ್ನು ನೇಮಿಸಲಾಯಿತು. ಊಟೋಪಚಾರದ ವ್ಯವಸ್ಥೆಯನ್ನು ಕುಳಿಯಕಂಡ ಪೊನ್ನಣ್ಣ ನೋಡಿ ಕೊಳ್ಳುವಂತೆ ತೀರ್ಮಾನಿಸಲಾಯಿತು. ಒಯ್ಯಪಾಟ್ ಗುಂಪನ್ನು ಕೂತಂಡ ಕುಶಾಲಪ್ಪ ನಿರ್ವಹಿಸುವಂತೆ, ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಡೀ ವ್ಯಾಪಕ ಪ್ರಚಾರದ ಜವಾಬ್ದಾರಿಯನ್ನು ಪಾಲಚಂಡ ಸುರೇಶ್‌ರಿಗೆ ನೀಡಲಾಯಿತು. ಓಟಾಕ ಓಟ, ಹಗ್ಗ ಜಗ್ಗಾಟ ಹಾಗೂ ನಾಟಿಗದ್ದೆಗಳ ಉಸ್ತುವಾರಿ ಯನ್ನು ಮಾತಂಡ ಪಂಚು, ಚೇನಂಡ ಸುರೇಶ್, ಬಡಕಡ ದೀನ ಪೂವಯ್ಯರು ನಿರ್ವಹಿಸು ವಂತಾಯಿತು. ಓಟಾಕ ಓಟದಲ್ಲಿ ನಾಲ್ಕು ವಿಭಾಗಗಳಿದ್ದು ಪುರುಷರು, ಮಹಿಳೆ ಯರು, ಬಾಲಕರು, ಬಾಲಕಿಯರು, ಇದರಲ್ಲಿ ಪುರುಷರು ಹಾಗೂ ಮಹಿಳೆಯರಲ್ಲಿ ಪ್ರಥಮ ಬಹುಮಾನ ವಾಗಿ ಕೋರಿಕೊಡೆಯೊಂದಿಗೆ ನಗದು ರೂ. ೨,೦೦೦, ದ್ವಿತೀಯ ರೂ. ೧,೫೦೦, ತೃತೀಯ ರೂ. ೧,೦೦೦ ಕೊಡುವಂತೆ ತೀರ್ಮಾನಿಸಲಾಯಿತು. ಹಗ್ಗ ಜಗ್ಗಾಟದಲ್ಲಿ ಪ್ರಥಮ ಬಹುಮಾನ ರೂ. ೧೦,೦೦೦, ದ್ವಿತೀಯ ರೂ. ೭,೦೦೦, ಕೊಡಲಾಗುವುದು.

ವೇದಿಕೆ ಕಾರ್ಯಕ್ರಮದ ವೇಳೆ ಪೊನ್ನಂಪೇಟೆ ಅರಣ್ಯ ಕಾಲೇಜಿನ ನಿವೃತ್ತ ಡೀನ್, ಕೊಡಗು ವಿಜ್ಞಾನ ವೇದಿಕೆಯ ಅಧ್ಯಕ್ಷ ಡಾ. ಚೆಪ್ಪುಡಿರ ಜಿ. ಕುಶಾಲಪ್ಪನವರಿಂದ “ಗದ್ದೆ ಕೃಷಿ : ಕಷ್ಟ: ಸುಖ: ಪರಿಹಾರ ವಿಷಯವಾಗಿ ವಿಚಾರ ಮಂಡಿಸಲಿದ್ದಾರೆ. ಈ ವೇಳೆ ಕೃಷಿಮಂತ್ರಿಯವರು ಹಾಗೂ ಶಾಸಕರ ಸಮ್ಮುಖದಲ್ಲಿ ಹತ್ತು ನಿಮಿಷಗಳ ಕಾಲ ಕೃಷಿ ಕುರಿತಾಗಿ ರೈತಾಪಿ ವರ್ಗದಿಂದ ಸಂವಾದವನ್ನು ಏರ್ಪಡಿಸಲಾಗಿದೆ.

ಬೇಲ್ ನಮ್ಮೆಯಲ್ಲಿ ಮಳೆಗಾಲದ ವಿಷಯವಾಗಿ, ಕೃಷಿಗೆ ಸಂಬAಧಿಸಿ ದಂತೆ, ನಾಟಿಗೆ ಹೊಂದಿಕೊAಡAತೆ ಜಿಲ್ಲೆಯ ಹೆಸರಾಂತ ಹಾಡುಗಾರರಿಂದ ಕಿರು ಆರ್ಕೆಸ್ಟಾçವನ್ನು ಏರ್ಪಡಿಸಲಾಗು ವುದು. ಬಿಡುವಿನ ವೇಳೆಯಲ್ಲಿ ಕೃಷಿಕ ವರ್ಗದವರಿಂದ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಮಯ ನಿಗದಿಸ ಲಾಗುವುದು.

ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರು ಈ ಎಲ್ಲಾ ಸಮಿತಿಯವರು ಬೇಲ್ ನಮ್ಮೆ ಯನ್ನು ತಮ್ಮ ಊರಿನ ನಮ್ಮೆಯಂತೆ ಒಗ್ಗೂಡಿ ನಡೆಸಿಕೊಡುವ ಭರವಸೆ ಮಾತುಗಳನ್ನಾಡಿದರು. ಸಭೆಯಲ್ಲಿ ವಿಶೇಷ ಮಹಿಳಾ ಕೃಷಿಕರಾಗಿರುವ ಮಾತಂಡ ಶಕು ಅಕ್ಕಮ್ಮರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸುವಂತೆ ತೀರ್ಮಾನಿಸಲಾಯಿತು.

ಪೂರ್ವಭಾವಿ ಸಭೆಯಲ್ಲಿ ಅಕಾಡೆಮಿಯ ಸದಸ್ಯರು ಹಾಗೂ ಸಂಚಾಲಕರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಪೊನ್ನಿರ ಗಗನ್, ಬೊಳ್ಳುಮಾಡು, ಕುಂಜಿಲಗೇರಿ, ಕಡಂಗ ಮರೂರು ಗ್ರಾಮಸ್ಥರು ಹಾಜರಿದ್ದು ಬೇಲ್ ನಮ್ಮೆಯ ಯಶಸ್ವಿಗೆ ಸಹಕರಿಸುವಂತೆ ಕೈಜೋಡಿಸಿದರು.