ಸನಾತನ ಧರ್ಮದಲ್ಲಿ ಎಲ್ಲಾ ಹಬ್ಬ-ಹರಿದಿನಗಳು ಅದರದ್ದೇ ಆದ ಪ್ರಾಮುಖ್ಯತೆಯನ್ನು ಒಳಗೊಂಡಿದೆ. ಅಂತೆಯೇ ತುಳುನಾಡ ಸಂಸ್ಕೃತಿಯಲ್ಲಿ ‘ನಾಗಾರಾಧನೆ’ಯು ಪ್ರಮುಖವಾದುದು. ಭೂತರಾಧನೆಯಂತೆ ನಾಗಾರಾಧನೆಯನ್ನು ಬಹಳ ಭಯ-ಭಕ್ತಿಯಿಂದ ಆಚರಿಸುತ್ತಾರೆ. ತರವಾಡು ಮನೆಗಳಲ್ಲಿ ಇರುವಂತಹ ‘ನಾಗರಕಟ್ಟೆ’ಗೆ ಹಾಲು, ಎಳನೀರು, ಅಭಿಷೇಕ ಹಾಗೂ ನಾಗದೇವನಿಗೆ ಪ್ರಿಯವಾಗಿರುವ ‘ತಂಬಿಲ’ ಸೇವೆಯು ನಡೆಯುತ್ತಿದೆ. ತುಳುನಾಡು ಸಂಸ್ಕೃತಿಯಲ್ಲಿ ‘ನಾಗದೇವ’ನಿಗೆ ವಿಶೇಷವಾದ ಪೂಜ್ಯ ಭಾವನೆಯಿಂದ ಆರಾಧಿಸುತ್ತಾರೆ.
ಅರಣ್ಯ ನಾಶವಾಗದಂತೆ ತಡೆಗಟ್ಟಲು ನಾಗನಕಟ್ಟೆಗಳನ್ನು ಇಟ್ಟು ನಮ್ಮ ಪೂರ್ವಜರು ಪೂಜಿಸುತ್ತಿದ್ದರು. ಇದಕ್ಕೆ ‘ನಾಗಬನ’ವೆಂದು ಕರೆಯುತ್ತಿದ್ದರು. ಇಂದಿಗೂ ಕೂಡ ನಾಗಬನವು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ.
ಮದುವೆ ಮಾಡಿಕೊಟ್ಟಂತಹ ಹೆಣ್ಣು ಮಕ್ಕಳು ನಾಗರ ಪಂಚಮಿಯAದು ತವರು ಮನೆಗೆ ಬರುವ ವಾಡಿಕೆಯೂ ಇದೆ. ನಾಗರಪಂಚಮಿ ಎಂಬುದು ಕುಟುಂಬಗಳನ್ನು ಬೆಸೆಯುವ ಹಬ್ಬ.
- ಮೋಹಿನ್ ದಯಾನಂದ ರೈ, ಪಾಲಿಬೆಟ್ಟ.