ನಾಗರ ಶುದ್ಧ ಪಂಚಮಿಯAದು ನಾಗ ದೇವತೆಯನ್ನು ಪೂಜಿಸುವರು. ಹಿಂದೂ ಧರ್ಮದಲ್ಲಿ ನಾಗದೇವತೆಗೆ ವಿಶೇಷ ಮಹತ್ವವಿದೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯAದು ನಾಗನ ಕಲ್ಲಿಗೆ, ಹಾವಿನ ಹುತ್ತಕ್ಕೆ ಶ್ರದ್ಧಾಭಕ್ತಿಯಿಂದ ಪೂಜಿಸಿ ಹಾಲಿನ ತನಿ ಎರೆಯುವರು. ನಾಗರ ಪಂಚಮಿಯAದು ಹೊಲಗಳ ಬೆಳೆ ರಕ್ಷಣೆಗಾಗಿ ಹಾವುಗಳನ್ನು ಪೂಜಿಸುವರು. ದೇವತೆಗಳಲ್ಲಿ ಸರ್ಪಕೂಡ ಒಂದಾಗಿದೆ. ನಾಗನ ಕಲ್ಲುಗಳನ್ನು ಹೆಚ್ಚಾಗಿ ಅಶ್ವತ್ಥ ವೃಕ್ಷಗಳ ಕೆಳಗೆ ಸ್ಥಾಪಿಸುವರು.

ಭೂಮಿಯು ಸರ್ಪರಾಜನ ಆದಿಶೇಷನ ಹೆಡೆಯ ಮೇಲಿದೆ ಎಂಬ ಮಾತಿದೆ. ಸರ್ಪ ಶಿವನ ಆಭರಣ, ಗಣೇಶನ ಉದರಬಂಧ, ಸುಬ್ರಹ್ಮಣ್ಯ, ಬಲರಾಮ, ನಾಗರಾಜನ ಅವತಾರವೆನ್ನುವರು. ಸರ್ಪದೋಷ ನಿವಾರಣೆಗಾಗಿ ಆಶ್ಲೇಷ ಬಲಿಪೂಜೆ ಮಾಡಿದರೆ ದೋಷ ನಿವಾರಣೆ ಎನ್ನುವರು. ನಾಗಕುಲವನ್ನು ಆಸ್ತಿಕ ಋಷಿ ರಕ್ಷಿಸಿದ್ದರಿಂದ ಅಂದಿನ ದಿನ ಆಸ್ತಿಕ ಎಂಬ ನಾಮವನ್ನು ಉಚ್ಚರಿಸಿದರೆ ನಾಗಗಳು ತೊಂದರೆ ಕೊಡಲಾರರು ಎನ್ನುವರು. ನಾಗನನ್ನು ಕ್ಷೇತ್ರಪಾಲಕನೆನ್ನುವರು. ನಾಗರಾಧನೆ ಮಾಡಿದರೆ ಸಂತಾನ ಪ್ರಾಪ್ತಿ ಎನ್ನುವ ಮಾತಿದೆ. ನಾಗಾರಾಧನೆ ಪ್ರಕೃತಿ ಪೂಜೆಯ ಒಂದು ಭಾಗ. ನಾಗರ ಪಂಚಮಿಯ ಬಗ್ಗೆ ಜನಪದ ಹಾಡುಗಳಿವೆ. ಇದು ಅಣ್ಣ-ತಂಗಿಯರ ಪ್ರೀತಿಯನ್ನು ಸಾರುವ ಹಬ್ಬ. ಅಣ್ಣ-ತಂಗಿಯರಲ್ಲಿ ತಂಗಿ ನಾಗದೇವತೆಯನ್ನು ಆರಾಧಿಸುವವಳಾಗಿದ್ದಳು. ಒಂದು ದಿನ ತಂಗಿ ಅಣ್ಣನಿಗೆ ನಾಗ ಪೂಜೆಗೆ ಹೂ ತರಲೆಂದು ಕಳಿಸಿದಾಗ ಅಲ್ಲಿ ಅಣ್ಣನನ್ನು ಹಾವು ಕಚ್ಚಿ ಸಾಯಿಸಿತು. ಇದನ್ನು ಕಂಡು ದುಃಖಗೊಂಡ ತಂಗಿ ನಾಗದೇವತೆಯನ್ನು ಪ್ರಾರ್ಥಿಸಿ ಬೇಡಿಕೊಂಡಳು. ಆ ದಿನ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿ ಆಗಿತ್ತು. ಅವಳ ಪ್ರಾರ್ಥನೆಗೊಲಿದ ನಾಗದೇವ ಪ್ರತ್ಯಕ್ಷವಾಗಿ ಅಣ್ಣನ ಬೆನ್ನ ಮೇಲೆ ಮಣ್ಣಿನ ಪುಡಿ ಹಚ್ಚಲು ನೀಡಿ ಮಾಯವಾಯಿತು. ತಕ್ಷಣವೇ ಅಣ್ಣ ಎಚ್ಚರಗೊಂಡನು. ಅಂದಿನ ದಿನವನ್ನು ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ದಿನವನ್ನಾಗಿ ಆಚರಿಸುವರು. ನಾಗರಪಂಚಮಿ ನಾಡಿಗೆ ದೊಡ್ಡ ಹಬ್ಬ.

ನಾಗರ ಪಂಚಮಿಯAದು ನಾಗನನ್ನು ಕ್ಷೀರಾಭಿಷೇಕದಿಂದ ಪೂಜಿಸಬೇಕು. ಇದರ ಬಗ್ಗೆ ಹಲವಾರು ಪುರಾಣ ಕಥೆಗಳಿವೆ. ನಾಗನಿಗೆ ತೊಂದರೆ ಮಾಡಿದರೆ ನಾಗದೋಷ ಕಾಡುವುದು. ಕಲ್ಲಿನ ನಾಗನನ್ನು ಕಂಡರೆ ಭಕ್ತಿಯಿಂದ ಪೂಜಿಸಿ ಹಾಲೆರೆಯುವರು. ನಾವು ತೊಂದರೆ ಮಾಡಿದರೆ ಮಾತ್ರ ನಮಗೆ ಅದು ತೊಂದರೆ ಕೊಡುತ್ತವೆ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ನಾಗಸಂತತಿಗೆ ನೋವು ಕೊಡಬಾರದು. ಹಾವುಗಳು ರೈತನ ಮಿತ್ರ. ಹಾವುಗಳು ರೈತನಿಗೆ ಸಹಾಯ ಮಾಡುತ್ತವೆ.

ಸರ್ಪದೋಷ ನಿವಾರಣೆಗಾಗಿ ಸುಬ್ರಹ್ಮಣ್ಯ ಸ್ವಾಮಿಯನ್ನು ಬೇಡಿಕೊಳ್ಳೋಣ. ನಾಗನಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸೋಣ.

- ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ,

ಟಿ. ಶೆಟ್ಟಿಗೇರಿ. ಮೊ. ೭೭೬೦೬೮೫೬೭೧