ವೀರಾಜಪೇಟೆ, ಆ. ೮: ಪರಕೀಯರ ದಾಳಿಯಿಂದ ಛಿದ್ರಗೊಂಡಿರುವ ಭಾರತ ನೆಲ ಒಂದಾಗಿ ಅಖಂಡ ಭಾರತ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಒಂದಾಗಬೇಕೆAದು ಹಿಂದೂ ಪರ ಸಂಘಟನೆಯ ಹಿರಿಯ ನಾಯಕರಾದ ಚಿ.ನಾ. ಸೋಮೇಶ್ ಕರೆ ನೀಡಿದರು.

ವೀರಾಜಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ ಬಳಿಕ ನಗರದ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ತಮ್ಮ ದಿಕ್ಸೂಚಿ ಭಾಷಣ ಮಾಡಿದ ಚಿ.ನಾ ಸೋಮೇಶ್ ಅವರು, ಅಖಂಡ ಭಾರತವಾಗಿದ್ದ ಭಾರತದ ಮೇಲೆ ಡಚ್ಚರು, ಆಂಗ್ಲರು, ಮುಸ್ಲಿಂ ದೊರೆಗಳ ಆಕ್ರಮಣದಿಂದಾಗಿ ಭಾರತವು ತುಂಡು ತುಂಡಾಯಿತು. ಅಂದಿನ ಕಾಲದಲ್ಲಿ ನಡೆದ ನರಮೇಧ, ಮಹಿಳೆಯರ ಮೇಲೆ ಅತ್ಯಾಚಾರ, ಮಕ್ಕಳ ಮೇಲಿನ ದೌರ್ಜನ್ಯ, ಕೊಲೆÀ ಭೀಕರತೆ ಇಂದಿನ ಯುವ ಸಮಾಜ ನೆನಪಿಟ್ಟುಕೊಳ್ಳಬೇಕು. ಸ್ವಾತಂತ್ರö್ಯ ಸೇನಾನಿಗಳ, ಹೋರಾಟಗಾರರ, ತ್ಯಾಗ ಬಲಿದಾನಗಳಿಂದ ಪಡೆದ ನೆತ್ತರ ಚರಿತ್ರೆ ಮರೆಯಬಾರದು. ಇದರಿಂದ ದೇಶಾಭಿಮಾನ ಮೂಡುವುದರೊಂದಿಗೆ ಭಾರತ ಭೂಮಿ ಉಳಿವಿಗೆ ಪ್ರೇರೆಪಣೆಯಾಗುತ್ತದೆ ಎಂದರು.

ರಾಜಕೀಯ ಲಾಭಕ್ಕಾಗಿ ಹಿಂದೂ ಧರ್ಮದ ಅವಹೇಳನವಾಗುತ್ತಿರುವುದು ಖಂಡನೀಯ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಂದೂಗಳ ಬಹುಕಾಲದ ಬೇಡಿಕೆಯಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮೂಲಕ ಕನಸು ಸಾಕಾರಗೊಳಿಸಿದ್ದಾರೆ ಎಂದ ಅವರು, ಭಾರತೀಯ ಯೋಧರಿಗೆ ನಮ್ಮ ಸಹಕಾರವಿರಬೇಕು. ದೇಶ ರಕ್ಷಣೆಗೆ ಕೈಜೋಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಕರ್ನಲ್ ಕೆ.ಸಿ. ಸುಬ್ಬಯ್ಯ ಅವರು, ದೇಶಕ್ಕಾಗಿ ದುಡಿದ, ದುಡಿಯುತ್ತಿರುವ ಸೈನಿಕರ ಸ್ಮರಣೆ ಎಲ್ಲರೂ ಮಾಡಬೇಕು. ದೇಶದ ಭದ್ರತೆಗೆ ಸರ್ವರ ಸಹಕಾರ ಅಗತ್ಯ. ವಿಧ್ವಂಸಕ ಕೃತ್ಯಗಳ ತಡೆಗಟ್ಟಲು ಸಾಮಾನ್ಯ ಜನರ ಸಹಕಾರವೂ ಬೇಕು. ನೈಜ ಇತಿಹಾಸ ಜನರಿಗೆ ತಿಳಿಸುವ ಕೆಲಸವಾಗಬೇಕು. ಸೈನಿಕರೊಂದಿಗೆ ದೇಶದ ರೈತರನ್ನು ಗೌರವಿಸಬೇಕು ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ್ ಅಲ್ಲುಮಾಡ ಶರತ್, ವೀರಾಜಪೇಟೆ ಸಂಯೋಜಕ್ ರವೀಂದ್ರ ಪೂಜಾರಿ ಉಪಸ್ಥಿತರಿದ್ದರು. ಹಿಂದೂ ಜಾಗರಣ ವೇದಿಕೆಯ ಜಯೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಸಹ ಸಂಯೋಜಕ್ ಯೋಗೇಶ್, ತಾಲೂಕು ಟೋಳಿ ಗಣೇಶ್ ಬಿಟ್ಟಂಗಾಲ, ವಿಶ್ವನಾಥ್ ಸೇರಿದಂತೆ ತಾಲೂಕು ಜಿಲ್ಲಾ ಕಾರ್ಯಕರ್ತರು. ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಟೋಳಿ ಸುನೀಲ್ ಮಾದಾಪುರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಪೊನ್ನಂಪೇಟೆ ಟೋಳಿ ಪುತ್ತಮನೆ ಅನಿಲ್ ಪ್ರಸಾದ್ ವಂದಿಸಿದರು.

-ಕಿಶೋರ್‌ಕುಮಾರ್ ಶೆಟ್ಟಿ