*ಗೋಣಿಕೊಪ್ಪ, ಆ. ೮: ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಅತ್ತೂರು ಆಯುಷ್ಮಾನ್ ಆರೋಗ್ಯ ಮಂದಿರ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು.

ತಾಯಿಯ ಎದೆ ಹಾಲು ಅಮೃತಕ್ಕೆ ಸಮ. ಮಕ್ಕಳ ಬೆಳವಣಿಗೆಗೆ ತಾಯಿಯ ಎದೆ ಹಾಲು ಬಹು ಮುಖ್ಯವಾಗಿದೆ ಎಂದು ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಗಣಪತಿ ಹೇಳಿದರು.

ತಿತಿಮತಿ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಪೃಥ್ವಿ, ಎದೆಹಾಲಿನ ಮಹತ್ವ, ಗರ್ಭಿಣಿ ಮತ್ತು ಮಕ್ಕಳ ಆರೈಕೆ, ಚುಚ್ಚುಮದ್ದಿನ ಬಗ್ಗೆ ವೈಯಕ್ತಿಕ ಮತ್ತು ಪರಿಸರ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು.

ಹಾತೂರು ಗ್ರಾಮ ಪಂಚಾಯಿತಿ ಸದಸ್ಯೆ ಸುನಿತಾ ಮಂದಣ್ಣ, ಸಂಜೀವಿನಿ ಒಕ್ಕೂಟದ ಸಂಪನ್ಮೂಲ ವ್ಯಕ್ತಿ ವರಲಕ್ಷಿö್ಮ, ಆರೋಗ್ಯ ಕಾರ್ಯಕರ್ತೆ ಶಿವಮ್ಮ, ಅಂಗನವಾಡಿ ಕಾರ್ಯಕರ್ತೆ ಲತಾ, ಆಶಾ ಕಾರ್ಯಕರ್ತೆ ಸುಧಾ, ಅತ್ತೂರು ಸಬ್ ಸೆಂಟರಿನ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿ ಸ್ತಿçÃಯರು, ಬಾಣಂತಿಯರು, ತಾಯಂದಿರು ಹಾಜರಿದ್ದರು.