ಚೆಯ್ಯಂಡಾಣೆ, ಆ. ೭: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಕಕ್ಕಬೆಯ ತಾಮರಾ ರೆಸಾರ್ಟ್ ವತಿಯಿಂದ ಶಾಲೆಯ ಉಪಯೋಗಕ್ಕಾಗಿ ಟಿವಿಯನ್ನು ಉಡುಗೊರೆಯಾಗಿ ನೀಡಲಾಯಿತು.

ಈ ಸಂದರ್ಭ ತಾಮರಾ ರೆಸಾರ್ಟ್ನ ವ್ಯವಸ್ಥಾಪಕ ಗಿರೀಶ್ ಸುಬ್ಬಯ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನು ಕೂಡ ವಿದ್ಯಾರ್ಥಿಗಳಿಗೆ ಉಪಯೋಗ ವಾಗುವ ವಸ್ತುಗಳನ್ನು ನೀಡಲಿದ್ದೇವೆ ಎಂದರು. ಶಾಲೆಯ ಮುಖ್ಯ ಶಿಕ್ಷಕಿ ಎಚ್.ಆರ್. ಪ್ರೇಮಾ ಕುಮಾರಿ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಗುವ ನೆರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಈ ಸಂದರ್ಭ ತಾಮರಾ ರೆಸಾರ್ಟ್ನ ನೀತು ಬೋಪ್ಪಣ್ಣ, ಸರ್ವಾನಿ, ರೆಸಾರ್ಟ್ ಆರ್.ಹೆಚ್.ಟಿ. ತಂಡದ ತನಿಶ್, ಮೊಹಮ್ಮದ್ ಅರ್ಸ್, ಅಭಿಜಿತ್, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ನಿಕಟಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ರತ್ನಾ, ರೆಸಾರ್ಟ್ ಸಿಬ್ಬಂದಿಗಳು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಪೋಷಕರು ಮತ್ತಿತರರು ಉಪಸ್ಥಿತರಿದ್ದರು.