ಮಡಿಕೇರಿ, ಆ. ೭: ಭಾರಿ ಮಳೆಯಿಂದ ಜಿಲ್ಲೆಯ ಜನತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಹಣಕಾಸು ಸಂಸ್ಥೆ, ಗಿರವಿದಾರರು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೀಡಿರುವ ಸಾಲದ ಕಂತು ಪಾವತಿಯನ್ನು ಸೆಪ್ಟಂಬರ್ ೧೫ರ ನಂತರ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿ ಜ್ಞಾಪನ ಪತ್ರ ಹೊರಡಿಸಿದ್ದಾರೆ.

ಕಳೆದ ಒಂದು ತಿಂಗಳಿನಿAದ ವಿಪರೀತ ಮಳೆಯಿಂದಾಗಿ ಕೂಲಿ ಕಾರ್ಮಿಕರಿಗೆ ಕೆಲಸ ವಿಲ್ಲದೆ ಜೀವನ ನಡೆಸಲು ತೊಂದರೆ ಉಂಟಾಗಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಹಣಕಾಸು ಸಂಸ್ಥೆಗಳು, ಗಿರವಿದಾರರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿAದ ಜನರು ಕೃಷಿಯೇತರ ಸಾಲ ಪಡೆದಿರುತ್ತಾರೆ. ಈ ಹಣವನ್ನು ಪ್ರತಿ ವಾರ ಅಥವಾ ತಿಂಗಳಲ್ಲಿ ಪಾವತಿ ಮಾಡಬೇಕಾಗಿದೆ. ಸಂಸ್ಥೆಗಳಿAದ ಸಾಲ ಪಡೆದವರು ಬಹುತೇಕರು ಕೂಲಿ ಕಾರ್ಮಿಕರು, ಕೃಷಿಕರು ಮತ್ತು ಶ್ರಮಿಕರಾಗಿರುವ ಹಿನ್ನೆಲೆ ಸಾಲದ ಕಂತು ಪಾವತಿ ಕಷ್ಟ ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪತ್ರದಲ್ಲಿ ತಿಳಿಸಿದ್ದಾರೆ.

ಸಂಕಷ್ಟದ ಸಮಯವಾಗಿರುವ ಕಾರಣ ಜನರ ಆದಾಯದಲ್ಲಿ ವ್ಯತ್ಯಯ ಉಂಟಾಗಿದ್ದು, ಕಂತುಗಳ ಪಾವತಿ ವಿಚಾರದಲ್ಲಿ ಕೊಡಗು ಜಿಲ್ಲೆಯಲ್ಲಿರುವ ಹಣಕಾಸು ಸಂಸ್ಥೆ, ಗಿರವಿದಾರರು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಿ ಮಾಡುವ ಕಂತುಗಳನ್ನು ಸೆಪ್ಟೆಂಬರ್ ೧೫ರ ನಂತರ ವಸೂಲಿ ಮಾಡಲು ಸೂಚಿಸಿದ್ದಾರೆ.

ಈ ಹಿಂದೆ ಈ ಸಂಬAಧ ಅಧಿಕಾರಿಗಳನ್ನು ಜನತೆ ಕಂತು ಪಾವತಿಗೆ ಸಮಯಾವಕಾಶ ನೀಡುವಂತೆ ಒತ್ತಾಯಿಸಿದ್ದರು. ಕೆಲ ದಿನಗಳ ಹಿಂದೆ ಮಾಜಿ ಉಪಮುಖ್ಯಮಂತ್ರಿ, ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ ಅವರು ಕಾಳಜಿ ಕೇಂದ್ರವೊAದಕ್ಕೆ ಭೇಟಿ ನೀಡಿದ್ದ ಸಂದರ್ಭ ಈ ಬಗ್ಗೆ ಒತ್ತಾಯಗಳು ಕೇಳಿಬಂದಿದ್ದವು. ನಂತರ ಜಿಲ್ಲಾಧಿಕಾರಿಯನ್ನು ಅಶ್ವತ್ಥ ನಾರಾಯಣ ಭೇಟಿಯಾಗಿ ಸಾಲ ಕಂತು ಪಾವತಿ ವಿಚಾರದಲ್ಲಿ ಸಮಯಾವಕಾಶ ನೀಡಲು ಕ್ರಮವಹಿಸಬೇಕೆಂದು ಗಮನ ಸೆಳೆದಿದ್ದರು. ಅಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಈ ಬಗ್ಗೆ ಸಕರಾತ್ಮಕ ಸ್ಪಂದನ ಕೂಡ ನೀಡಿದ್ದರು.