ವೀರಾಜಪೇಟೆ, ಆ. ೭: ನಾಲ್ಕು ಮರದ ಕಂಬಗಳಿಗೆ ಟಾರ್ಪಲ್ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಯರವ ಕುಟುಂಬಗಳು, ಮಳೆ ಗಾಳಿಯನ್ನು ಎದುರಿಸಿಕೊಂಡು ಕತ್ತಲಾದ್ರೆ ಸಾಕು ಹಾವು-ಚೇಳುಗಳ ಭೀತಿಯಿಂದ ಬದುಕುತ್ತಿರುವ ಬಡ ಜೀವಗಳು. ಕರೆಂಟ್, ಮೂಲಭೂತ ಸೌಲಭ್ಯ ಅಷ್ಟಕಷ್ಟೇ.

ಈ ಎಲ್ಲಾ ದೃಶ್ಯಗಳು ಕಂಡುಬAದಿದ್ದು ವೀರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದಲ್ಲಿ. ಹೌದು...ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಗ್ರಾಮದ ಕುಟ್ಟಿಪರಂಬು ಪೈಸಾರಿಯಲ್ಲಿ ಕಳೆದ ನಾಲ್ಕೆöÊದು ವರ್ಷಗಳಿಂದಲೂ ಹೀಗೆ ಊರಾಚೆ ಟಾರ್ಪಲ್ ಹಾಕಿಕೊಂಡು ಯರವ ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಇವರ ಸೂರಿನ ಕನಸು ಮರೀಚಿಕೆಯಾಗಿಯೇ ಉಳಿದಿದೆ.

ತಾಲೂಕಿನಿಂದ ಐದಾರು ಕಿಲೋಮೀಟರ್ ದೂರದಲ್ಲಿರುವ ಕುಟ್ಟಿಪರಂಬು ಪೈಸಾರಿ ನಿವಾಸಿಗಳನ್ನು ಸಂಕಟದಿAದ ನೋಡಿದಾಗ ಅವರ ಕಣ್ಣ ಹನಿ ಮತ್ತು ಮಳೆಹನಿ ಎರಡು ಒಂದಾಗಿದ್ದವು.

ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳ ಕಾಫಿ ತೋಟಗಳ ಮಾಲೀಕರ ಲೈನ್‌ಮನೆಗಳಲ್ಲಿ ವಾಸಿಸುತ್ತಿದ್ದ ಹಲವು ಕುಟುಂಬಗಳು ಸ್ವಂತ ಸೂರಿನ ಕನಸ್ಸಿನೊಂದಿಗೆ ಕುಟ್ಟಿಪರಂಬು ಪೈಸಾರಿಗೆ ಬಂದು ಟಾರ್ಪಲ್ ಹಾಕಿ ಗುಡಿಸಲು ನಿರ್ಮಾಣ ಮಾಡಿಕೊಂಡು ಸ್ವಂತ ನಿವೇಶನ ಮತ್ತು ಸೂರಿಗಾಗಿ ಅಹೋರಾತ್ರಿ ಧರಣಿ, ಪ್ರತಿಭಟನೆ ನಡೆಸಿದರು.

(ಮೊದಲ ಪುಟದಿಂದ) ಇತ್ತ ಸ್ವಂತ ಸೂರು ಇಲ್ಲ, ಮಳೆಗಾಲದಲ್ಲಿ ನೆಮ್ಮದಿಯ ಬದುಕು ಇಲ್ಲ ಎಂಬ ಅತಂತ್ರ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವ ಅನಿವಾರ್ಯತೆ ಇವರದ್ದು.

ಪ್ಲಾಸ್ಟಿಕ್ ಶೀಟ್‌ಗಳನ್ನು ಹೊದಿಸಿ ನಿರ್ಮಾಣವಾದ ಕುಟೀರಗಳಲ್ಲಿ ವಾಸಿಸುವ ಇಲ್ಲಿನ ನಿವಾಸಿಗಳ ಗೋಳಿನ ಕೂಗು ಮುಗಿಲು ಮುಟ್ಟಿದೆ. ಇದೀಗ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಇವರು ವಾಸಿಸುತ್ತಿರುವ ಗುಡಿಸಲುಗಳಲ್ಲಿ ನೀರು ತುಂಬಿಕೊAಡಿದೆ. ಗಾಳಿಗೆ ಟಾರ್ಪಲಿನ್ ಹಾರಿ ಹರಿದು ಹೋಗುತ್ತಿದೆ. ಇವರ ಬದುಕು ಮಳೆಯಲ್ಲಿ ಮುಳುಗಿದೆ. ಮಳೆಯ ಅಬ್ಬರಕ್ಕೆ ಸಿಲುಕಿ ಇಲ್ಲಿನ ನಿವಾಸಿಗಳ ಸ್ಥಿತಿ ಚಿಂತಾಜನಕವಾಗಿದೆ.

ಇಲ್ಲಿ ಸುಮಾರು ೨೧ ಕುಟುಂಬಗಳು ವಾಸಿಸಿವೆ. ಗುಡಿಸಲಿನಲ್ಲಿ ವಾಸಿಸುವ ಕುಟುಂಬಗಳಿಗೆ ಸರಿಯಾದ ಶೌಚಾಲಯಗಳಿಲ್ಲ, ಕರೆಂಟ್ ಇಲ್ಲ. ಇನ್ನಿತರೆ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಗುಡಿಸಲು ಮುಕ್ತ ರಾಜ್ಯ ಮಾಡಬೇಕೆನ್ನುವ ಕಾರಣದಿಂದ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರಗಳು ಸಾಕಷ್ಟು ಅನುದಾನ ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಆದ್ರೆ ಈ ಗ್ರಾಮದಲ್ಲಿ ಮಾತ್ರ ಗುಡಿಸಲು ಮುಕ್ತವಾಗಿಲ್ಲ.

ಮಳೆ ನೀರು ಬೀಳದಂತಹ ಒಂದು ಸೂರು, ಸರಾಗವಾಗಿ ನಡೆಯಲು ದಾರಿ ಮಾಡಿಕೊಡಿ ಎಂದು ಇದುವರೆಗೂ ಕೇಳುತ್ತಲೇ ಬಂದಿದ್ದೇವೆ. ಗೋಡೆಗಳಿಲ್ಲದೆ ಕೇವಲ ಗುಡಿಸಲನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತೇವೆ. ನೆಲವೆಲ್ಲ ಶೀತಹಿಡಿದು ಆರೋಗ್ಯ ಕೆಡುತ್ತಿದೆ. ಗುಡಿಸಲಿನೊಳಗೆ ನೀರು ನಿಂತಿದ್ದು ಇದರೊಳಗೆ ವಾಸಿಸಲೂ ಆಗದ ಸ್ಥಿತಿ ಇದೆ ಎಂದು ಅಲ್ಲಿನ ನಿವಾಸಿಗಳು ತಮ್ಮ ಕಷ್ಟಗಳನ್ನು ತೋಡಿಕೊಳ್ಳುತ್ತಾರೆ.

ಇವರಿಗೆ ದಿನಗೂಲಿಯೇ ಬದುಕಿಗೆ ಆಸರೆ. ಮಳೆಯ ನಡುವೆ ಕೆಲಸಕ್ಕೂ ಬರವಿದೆ. ಜೀವನ ನಿರ್ವಹಣೆಗೆ ಪರದಾಡುವ ಪರಿಸ್ಥಿತಿ ಇದೆ. ಈಗಾಗಲೇ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಕೊಟ್ಟಿದ್ದರೂ ನಮ್ಮನ್ನು ನಿರ್ಲಕ್ಷ÷್ಯ ಮಾಡಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸುತ್ತಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ವಸತಿ ರಹಿತ, ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ಮಾಡಿ, ಗ್ರಾಮಸಭೆಗಳಲ್ಲಿ ಆಯ್ಕೆ ಮಾಡಿ, ಅನುಮೋದಿಸಬೇಕು. ವಸತಿ ಇಲ್ಲದವರಿಗೆ ನಿವೇಶನ ಕೊಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಆದ್ರೆ ಇದುವರೆಗೂ ಆ ಕೆಲಸ ಮಾಡಿಲ್ಲ.

ಗುಡಿಸಲಿನಲ್ಲಿ ವಾಸಿಸುವವರು ಹೇಳುವುದೇನು? ನಾವು ಹಿಂದೆ ಬೇರೆ ಕಡೆ ವಾಸ ಮಾಡುತ್ತಿದ್ದೆವು. ನಮಗೂ ಸ್ವಂತ ಸೂರು ಬೇಕು ಎನ್ನುವ ಉದ್ದೇಶದಿಂದ ಇಲ್ಲಿ ಬಂದು ಗುಡಿಸಲು ನಿರ್ಮಾಣ ಮಾಡಿ ಸೇರಿಕೊಂಡಿದ್ದೇವೆ. ಮಳೆ ಬಂದು ಗುಡಿಸಲು ಒಳಗೆ ನೀರು ತುಂಬಿಕೊAಡಿದೆ. ಕೂಲಿ ಮಾಡಿ ಜೀವನ ಸಾಗಿಸುವ ನಮಗೆ ರಾತ್ರಿ ಮಲಗಲು ಆಸರೆಯೇ ಇಲ್ಲ. ಚುನಾವಣೆ ಸಮಯದಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿಗಳು ಮನೆ ಕಟ್ಟಿಕೊಡುವ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ನಂತರ ಯಾರೂ ಈ ಕಡೆ ತಲೆಹಾಕಲ್ಲ.

ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಳೆಗಾಲಕ್ಕೆ ಮೊದಲೇ ಮನೆ ನಿರ್ಮಾಣ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ ಅಧಿಕಾರಿಗಳು ಚುನಾವಣೆಯ ಭರಾಟೆಯಲ್ಲಿ ಈ ನಿರಾಶ್ರಿತರನ್ನು ಮರೆತ ಪರಿಣಾಮ ಮಳೆಗಾಲದಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ.

ಸೋರುವ ಕುಟೀರ:

ಮಳೆಗಾಲ ಪ್ರಾರಂಭಕ್ಕೂ ಮೊದಲು ಮನೆ ನಿರ್ಮಿಸುವ ಭರವಸೆ ನೀಡಿದ್ದರು. ಮನೆ ನಿರ್ಮಾಣಗೊಳ್ಳುವ ಕನಸಿನಲ್ಲೇ ೨೧ ಕುಟುಂಬಗಳು ತಮ್ಮ ತಮ್ಮ ಜಾಗಗಳಲ್ಲಿ ಸಣ್ಣ ಜೋಪಡಿಗಳನ್ನು ನಿರ್ಮಿಸಿಕೊಂಡು ವಾಸಿಸಲು ಪ್ರಾರಂಭಿಸಿದರು. ಇತ್ತೀಚೆಗೆ ಶಾಸಕ ಪೊನ್ನಣ್ಣ ಶೀಟ್‌ಗಳನ್ನು ವಿತರಣೆ ಮಾಡಿದ್ದರು. ಆದರೆ, ಮಳೆ ಪ್ರಾರಂಭವಾದರೂ ಮನೆ ನಿರ್ಮಾಣ ಕೈಗೊಂಡಿಲ್ಲ. ಹೀಗಾಗಿ ಇಲ್ಲಿ ನಿವಾಸಿಗಳು ಸೋರುವ ತಮ್ಮ ಕುಟೀರದಲ್ಲೇ ವಾಸಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆ ಇಲ್ಲಿನ ಬುಡಕಟ್ಟು ಜನರ ಪರಿಸ್ಥಿತಿ ಅಯೋಮಯವಾಗಿದೆ. ಅಲ್ಲಿಯೂ ಇಲ್ಲ, ಇಲ್ಲಿಯೂ ಸಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆ ಮುಗಿಯುವ ಮೊದಲೇ ಮನೆಗಳು ನಿರ್ಮಿಸಿಕೊಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು. ಚುನಾವಣೆಯಿಂದ ಮೇ ತಿಂಗಳಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಮಳೆಯ ಅಬ್ಬರಕ್ಕೆ ಇಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಬಿಟ್ಟAಗಾಲ ಗ್ರಾಮ ಪಂಚಾಯಿತಿ ವತಿಯಿಂದ ನಿವೇಶನ ಮಾಡಿ ಅವರಿಗೆ ನೀಡಲಾಗಿದೆ. ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೊರೆಸಲಾಗಿದೆ. ಸರಕಾರದಿಂದ ಅನುದಾನ ಬಂದ ಕೂಡಲೇ ಐಟಿಡಿಪಿ ಇಲಾಖೆಯಿಂದ ಮನೆ ನಿರ್ಮಾಣ ಕಾರ್ಯ ಮಾಡಲಾಗುತ್ತದೆ. ವಸತಿ ನಿರ್ಮಾಣದ ಜವಬ್ದಾರಿ ಐಟಿಡಿಪಿ ಇಲಾಖೆಗೆ ಸೇರಿದ್ದು ಎಂದು ವೀರಾಜಪೇಟೆ ತಹಶೀಲ್ದಾರ್ ಮಾಹಿತಿ ಇತ್ತಿದ್ದಾರೆ.