ಮಡಿಕೇರಿ, ಆ. ೬: ನಗರದ ಕೊಡಗು ವಿದ್ಯಾಲಯದ ಎನ್.ಸಿ.ಸಿ ಕೆಡೆಟ್ಗಳಾದ ಜ್ಯೋತಿರಾದಿತ್ಯ ಬಿ.ವೈ., ಕೃತಾರ್ಥ್ ಸಿ.ಪಿ. ಮತ್ತು ಇರ್ಶಾನ್ ವಿ.ಐ. ಕೊಡಗು, ಮಂಗಳೂರು, ಉಡುಪಿ, ಕುಂದಾಪುರ, ಶಿವಮೊಗ್ಗ ಒಳಗೊಂಡ ಮಂಗಳೂರು ವಿಭಾಗ ಮಟ್ಟದ ಶೂಟಿಂಗ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ೬ ಜೂನಿಯರ್ ಕೆಡೆಟ್ಗಳ ಪೈಕಿ ಈ ೩ ಕೆಡೆಟ್ಗಳು ಮಡಿಕೇರಿಯ ಕೊಡಗು ವಿದ್ಯಾಲಯದವರಾಗಿದ್ದು, ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಮಟ್ಟದ ಶೂಟಿಂಗ್ ಸ್ಪರ್ಧೆಗೆ ಮಂಗಳೂರು ವಿಭಾಗ ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ.
ಇವರು ೧೪ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಕೆಡೆಟ್ಗಳಾಗಿದ್ದು. ಮೈಸೂರಿನಲ್ಲಿ ಆಗಸ್ಟ್ ೧ ರಿಂದ ೧೦ ರವರೆಗೆ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ವಿದ್ಯಾಲಯದ ಪ್ರಕಟಣೆ ತಿಳಿಸಿದೆ.