ಮೂರ್ನಾಡು, ಆ. ೬: ಕಾಂತೂರು-ಮೂರ್ನಾಡಿನಲ್ಲಿ ನೂತನವಾಗಿ ರಚಿಸಲಾಗಿರುವ ಜೈ ಭೀಮ್ ಯುವಕ ಸಂಘದ ಅಧ್ಯಕ್ಷರಾಗಿ ಹೆಚ್.ಎಸ್. ಹೀರಾ ಸುಬ್ಬಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯದರ್ಶಿಯಾಗಿ ಎಚ್.ಬಿ. ಮಂಜು ಆಯ್ಕೆಯಾಗಿದ್ದು, ೩೦ ಜನ ಯುವಕ ಸಂಘದ ಸದಸ್ಯರಾಗಿರುತ್ತಾರೆ.
ಈ ಸಂದರ್ಭ ಮೂರ್ನಾಡಿನಲ್ಲಿ ನೂತನವಾಗಿ ಆರಂಭಿಸಲಾಗಿರುವ ಜೈಭೀಮ್ ಯುವಕ ಸಂಘದ ಕಚೇರಿಯನ್ನು ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಉದ್ಘಾಟಿಸಿದರು. ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಜನಾಂಗವು ಒಗ್ಗಟ್ಟಿನಿಂದ ಮುಂದುವರೆದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ಸರ್ಕಾರದ ಅನೇಕ ಸೌ¯ಭ್ಯಗಳನ್ನು ಪಡೆಯಬಹುದು. ಸಂಘದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸುವಂತಾಗಬೇಕು ಎಂದು ಹೇಳಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಡಿಕೇರಿಯ ಶಿಕ್ಷಕ ಎಚ್.ಎಲ್. ಭೈರ, ಕಾಂತೂರು-ಮೂರ್ನಾಡು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಾಪು ಸಣ್ಣಯ್ಯ ಮತ್ತು ಹೆಚ್.ಪಿ. ಸುಬ್ರಮಣಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಎಚ್.ಎಸ್. ಹೀರಾ ಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯರಾದ ರಘು ಸ್ವಾಗತಿಸಿ, ದಿನೇಶ್ ವಂದಿಸಿದರು.