ಕಡಂಗ, ಆ. ೬: ಬಿ.ಸಿ. ರಂಗಪ್ಪ ವಿದ್ಯಾನಿಧಿ ಟ್ರಸ್ಟ್ ವತಿಯಿಂದ ಕೊಳ್ಳೇಗಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತವರಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಕೊಡಗಿನ ವಿಧ್ಯಾರ್ಥಿಗಳಾದ ಭವಿಷ್ಯ, ಗಾನವಿ ಹಾಗೂ ಐಶ್ವರ್ಯ ಇವರುಗಳಿಗೆ ದ್ವಿತೀಯ ಪಿಯುಸಿಯಲ್ಲಿನ ಅತ್ಯುತ್ತಮ ಸಾಧನೆಗೆ ಪುರಸ್ಕಾರ ನೀಡಲಾಯಿತು.
ರಾಜ್ಯದ ಕಣಿಯ ಜನಾಂಗದ ಹಲವು ಸಾಧಕರಿಗೆ ಸನ್ಮಾನ ಮಾಡಿದ ಸಂದರ್ಭ ೩೦ ವರ್ಷಗಳ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಮತ್ತು ನಾಟಿ ಜೌಷಧಿ ರಂಗದಲ್ಲಿ ಮಾಡಿದ ಸೇವೆ ಪರಿಗಣಿಸಿ ಅರಪಟ್ಟುವಿನ ಕೆ.ಜೆ. ಶಾರದ ಹಾಗೂ ಕೊಡಗು ಕಣಿಯ ಸಂಘದ ಸ್ಥಾಪಕ ಕೆ.ಎನ್. ನಾಣಯ್ಯ ಅವರನ್ನು ಸನ್ಮಾನಿಸಲಾಯಿತು.