ಸಿದ್ದಾಪುರ, ಆ. ೭: ಧಾರಾಕಾರ ಮಳೆ ಹಾಗೂ ಗಾಳಿಗೆ ಸಿಲುಕಿ ವೀರಾಜಪೇಟೆ ತಾಲೂಕಿನ ವ್ಯಾಪ್ತಿ ಯಲ್ಲಿ ೫೫ ಮನೆಗಳು ಹಾನಿಗೊಂಡಿವೆ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಮಾಹಿತಿ ನೀಡಿ ೨೦೨೪ರ ಮಳೆ ಗಾಳಿಯಲ್ಲಿ ೫೫ ಮನೆಗಳ ಪೈಕಿ ೨೧ ಮನೆಗಳು ಭಾಗಶಃ ಹಾನಿಯಾಗಿದ್ದು, ೩೬ ಮನೆಗಳು ಅಲ್ಪ ಪ್ರಮಾಣದ ಹಾನಿಯಾಗಿ ಮನೆಗಳ ಹಾನಿಗಳನ್ನು ಮೂರು ವರ್ಗವಾಗಿ ವಿಂಗಡಿಸ ಲಾಗಿದೆ. ಇದಲ್ಲದೆ ಮಳೆಗೆ ಸಿಲುಕಿ ಎರಡು ಕೊಟ್ಟಿಗೆಗಳು ಹಾನಿ ಯಾಗಿದ್ದು, ಎರಡು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಹೇಳಿದರು.
ಮನೆಗಳ ಹಾನಿಗಳ ವಿವರಗಳನ್ನು ಆಯಾಯ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಹೋಬಳಿ ವ್ಯಾಪ್ತಿಯ ಕಂದಾಯ ಪರಿವೀಕ್ಷಕರಿಂದ ವರದಿಗಳು ಬಂದ ಬಳಿಕ ನಷ್ಟ ಪರಿಹಾರದ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ಪರಿಹಾರವನ್ನು ನೀಡುವ ಕ್ರಮವನ್ನು ಕೈಗೊಳ್ಳಲಾಗುವುದೆಂದು ಮಾಹಿತಿ ನೀಡಿದರು.
ಈ ಬಾರಿ ಸುರಿದ ಧಾರಾಕಾರ ಮಳೆಯಲ್ಲಿ ನರಿ ತೀರದ ನಿವಾಸಿಗಳಿಗೆ ಹಾಗೂ ಅಪಾಯದಲ್ಲಿ ಇರುವ ಬೆಟ್ಟ ಗುಡ್ಡಗಳಲ್ಲಿ ವಾಸ ಮಾಡುವ ನಿವಾಸಿಗಳಿಗೆ ಯಾವುದೇ ಅಪಾಯಗಳು ಸಂಭವಿಸದAತೆ ಮುಂಜಾಗ್ರತಾ ಕ್ರಮವಾಗಿ ವೀರಾಜಪೇಟೆಯ ತೋರ, ಅಮ್ಮತ್ತಿಯ ಸಮೀಪದ ಹಚ್ಚಿನಾಡು ಗ್ರಾಮದಲ್ಲಿ ಮತ್ತು ಸಿದ್ದಾಪುರದ ಕರಡಿಗೋಡು ಗ್ರಾಮದ ನಿವಾಸಿಗಳಿಗೆ ಸಿದ್ದಾಪುರದಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿತ್ತು. ಇದರಲ್ಲಿ ನೂರಾರು ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ವಾಸ ಮಾಡಿಕೊಂಡು ಆಸರೆ ಪಡೆದಿದ್ದಾರೆ. ವೀರಾಜಪೇಟೆ ವ್ಯಾಪ್ತಿಯಲ್ಲಿ ಗಾಳಿ ಮಳೆಗೆ ಸಿಲುಕಿ ಹಲವಾರು ವಿದ್ಯುತ್ ಕಂಬಗಳು ಹಾಗೂ ತಂತಿಗಳು ನೆಲಕ್ಕೆ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಕಾಫಿ ತೋಟಗಳಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು ಹಾನಿಗಳು ಸಂಭವಿಸಿತ್ತು. ಧಾರಾಕಾರ ಮಳೆಯಿಂದಾಗಿ ವೀರಾಜಪೇಟೆ ತಾಲೂಕು ಹಾಗೂ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಕೃಷಿ ಮಾಡಿದ ಗದ್ದೆಗಳಿಗೆ ನೀರು ನುಗ್ಗಿ ನಾಟಿ ಮಾಡಿದ ೫.೫೦ ಹೆಕ್ಟೇರ್ ಕೃಷಿ ಭೂಮಿಗೆ ಕ್ಷೇತ್ರದಲ್ಲಿ ಹಾನಿಯಾಗಿರುತ್ತದೆ ಎಂದು ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಕೃಷಿ ಇಲಾಖೆಯ ಸಹಾಯಕ ಉಪನಿರ್ದೇಶಕ ಗೌರಿ ತಿಳಿಸಿದ್ದಾರೆ.