ಮಡಿಕೇರಿ, ಆ. ೭: ಪೊನ್ನಂಪೇಟೆಯ ಸಂತ ಅಂತೋಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ‘ಬನ್ನಿ ಹೋಗೋಣ ಗದ್ದೆ ಕಡೆಗೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭತ್ತದ ಗದ್ದೆಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವ ಪಠ್ಯದ ಭಾಗವಾಗಿ ಮಕ್ಕಳನ್ನು ಸ್ಥಳೀಯ ಮತ್ತೂರು ಗ್ರಾಮದ ಪಿ.ಪಿ. ಶ್ರೀಪತಿ ಅವರ ಗದ್ದೆಗೆ ಕರೆದೊಯ್ದು ಗದ್ದೆ ಉಳುಮೆ ಮಾಡುವುದು, ಪೈರು ಕೀಳುವುದು, ನಾಟಿ ನೆಡುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯರಾದ ಪದ್ಮನಾಭ ಅವರು ಮಕ್ಕಳಿಗೆ ಕೆಸರುಗದ್ದೆ ಓಟವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ರಜನಿ ಹಾಗೂ ಶಿಕ್ಷಕರಾದ ಚೈತ್ರ ಉಷಾ ಮತ್ತು ರಶ್ಮಿ ದೇವಯ್ಯ ಭಾಗವಹಿಸಿದ್ದರು.