ಮಡಿಕೇರಿ, ಆ. ೬: ಪ್ರತಿಯೊಂದು ಸಮುದಾಯಗಳೂ ತಮ್ಮ ಸಂಸ್ಕೃತಿಗೆ ಸಂಬAಧಪಟ್ಟ ಕಾರ್ಯಕ್ರಮಗಳನ್ನು ನಡೆಸುವಾಗ ಯುವ ಪೀಳಿಗೆಗೆ ಕೆಲವು ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಅವರಲ್ಲಿ ಸಂಸ್ಕೃತಿಯ ಬಗ್ಗೆ ಜ್ಞಾನ ಮತ್ತು ಜಾಗೃತಿಯನ್ನು ಮೂಡಿಸುವ ಅವಶ್ಯಕತೆ ಇದೆ ಎಂದು ಮೈಸೂರು ಗೌಡ ಸಮಾಜದ ನಿಕಟಪೂರ್ವ ಅಧ್ಯಕ್ಷ ತೋಟಂಬೈಲು ಮನೋಹರ್ ಕರೆ ನೀಡಿದರು.
ಮೈಸೂರಿನ ಕೊಡಗು ಗೌಡ ಸಮಾಜ ಹಾಗೂ ಕೊಡಗು ಮತ್ತು ದಕ್ಷಿಣಕನ್ನಡ ಮಹಿಳಾ ಸಮಾಜಗಳ ಸಂಯುಕ್ತಾಶ್ರಯದಲ್ಲಿ ನಡೆದ ‘ಆಟಿಗೌಜಿ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮಗಳಲ್ಲಿ ವೈವಿಧ್ಯತೆ ಮತ್ತು ಶ್ರೇಷ್ಠತೆಯನ್ನು ಕಾಯ್ದುಕೊಂಡು ಯುವಜನರನ್ನು ಆಕರ್ಷಿಸಬೇಕೆಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ರಂಗಾಯಣ ಕಲಾವಿದೆ ಹಾಗೂ ಕೊಡಗು ಮತ್ತು ದಕ್ಷಿಣ ಕನ್ನಡ ಮಹಿಳಾ ಸಮಾಜದ ನಿಕಟಪೂರ್ವ ಅಧ್ಯಕ್ಷೆ ಗೀತಾ ಮೋಂಟಡ್ಕ ಮಾತನಾಡಿ, ಕೊಡಗು ಮತ್ತು ದಕ್ಷಿಣಕನ್ನಡ ಗೌಡ ಸಮುದಾಯಗಳ ಸಂಸ್ಕೃತಿಯಲ್ಲಿ ಅನ್ಯೋನ್ಯತೆಯಿದ್ದರೂ, ಆಯಾ ಪರಿಸರಕ್ಕೆ ಸಂಬAಧಪಟ್ಟAತೆ ಕೆಲವು ಬದಲಾವಣೆಗಳಿವೆ. ಆದರೆ ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದೊAದು ಹಿನ್ನೆಲೆ ಯಿರುತ್ತದೆ. ಅಂತಹ ಆಚರಣೆಗಳನ್ನು ಮುಂದುವರೆಸಿಕೊAಡು ಹೋಗುವುದು ಎಲ್ಲರ ಜವಾಬ್ದಾರಿ ಎಂದರು.
ಸ್ಥಳೀಯ ಮಾಜಿ ನಗರಪಾಲಿಕೆ ಸದಸ್ಯ ಶ್ರೀಧರ್ ಕೊಡಗಿನ ಗೌಡರ ಶಿಸ್ತು, ಸಂಸ್ಕೃತಿ, ಸಂಪ್ರದಾಯಗಳನ್ನು ಕೊಂಡಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪನವರು ಮಾತನಾಡಿ, ಇಂದಿನ ಪೀಳಿಗೆಗೆ ನಮ್ಮ ಆಚಾರ - ವಿಚಾರ, ಕೃಷಿ ಚಟುವಟಿಕೆ, ಪರಿಸರ ಇವುಗಳ ಬಗ್ಗೆ ಕನಿಷ್ಟ ಜ್ಞಾನ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಪೊನ್ನೆಟಿ ನಂದ, ಕೊಡಗು ಮತ್ತು ದಕ್ಷಿಣಕನ್ನಡ ಗೌಡ ಮಹಿಳಾ ಸಮಾಜದ ಅಧ್ಯಕ್ಷೆ ನಡುವಟ್ಟಿರ ಗೀತಾ ಲಕ್ಷö್ಮಣ, ಕಾರ್ಯದರ್ಶಿ ಕುಂಟುಪುಣಿ ಶೀಲಾ ಉಪಸ್ಥಿತರಿದ್ದರು.
ಮೈಸೂರು ಕೊಡಗು ಗೌಡ ಸಮಾಜದ ನಿರ್ದೇಶಕ ಪಟ್ಟಡ ಶಿವಕುಮಾರ್ರವರು ಸರ್ವರನ್ನು ಸ್ವಾಗತಿಸಿದರೆ, ಸಮಾಜದ ಉಪಾಧ್ಯಕ್ಷ ಕುದುಪಜೆ ಚಂದ್ರಶೇಖರ್ರವರು ವಂದಿಸಿದರು. ಕೊಡಗು ಮತ್ತು ದಕ್ಷಿಣಕನ್ನಡ ಮಹಿಳಾ ಸಮಾಜದ ನಿರ್ದೇಶಕಿ ಶಂಕರನ ಶ್ಯಾಮಲಾ ದೇವಯ್ಯನವರು ಕಾರ್ಯಕ್ರಮ ನಿರೂಪಿಸಿದರು.
ಸಂಭ್ರಮ ಮೂಡಿಸಿದ ‘ಆಟಿಗೌಜಿ’
ಆಟಿ ೧೮ರ ಪ್ರಯುಕ್ತ ೧೮ ಆಹಾರ ಮಳಿಗೆಗಳನ್ನು ತೆರೆಯಲಾಗಿದ್ದು, ಅದರಲ್ಲಿ ಆಟಿ ತಿಂಗಳಲ್ಲಿ ಬಳಸುವ ವೈವಿಧ್ಯಮಯ ತಿಂಡಿ - ತಿನಿಸುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜನರು ಸಂಭ್ರಮದಿAದ ತಮಗಿಷ್ಟ ಬಂದ ಆಹಾರವನ್ನು ಸೇವಿಸಿ ಸಂಭ್ರಮಿಸಿದರು. ಅಲ್ಲದೆ ಕೊಡಗಿನಲ್ಲಿ ಮಳೆಗಾಲದಲ್ಲಿ ಸಿಗುವ ಪದಾರ್ಥಗಳನ್ನು ಮಾರಾಟಕ್ಕೆ ಇಟ್ಟಿದ್ದು, ಜನ ನಾಮುಂದು ತಾಮುಂದು ಎಂದು ಖರೀದಿಸಿ ಕೊಂಡೊಯ್ದರು.