(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಆ. ೬: ಕೊಡಗು ಜಿಲ್ಲೆಯ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯು ಇದೀಗ ಅಧಿಕೃತವಾಗಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿರುವ ಆದೇಶ ಹೊರಬಿದ್ದಿದೆ. ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಅವರ ಪ್ರಯತ್ನದಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರವಾಗಿದ್ದ ಪೊನ್ನಂಪೇಟೆ ಕ್ಷೇತ್ರವನ್ನು ಇದೀಗ ಮತ್ತೆ ಬದಲಾಯಿಸಬೇಕಾಗಿದೆ.

ಅದಲ್ಲದೇ ಪೊನ್ನಂಪೇಟೆ ಪಟ್ಟಣ ಪಂಚಾಯಿತಿಗೆ ಸೇರಿರುವ ಗ್ರಾಮಗಳು ಒಂದೆರಡು ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಒಳಪಟ್ಟಿವೆ. ಇದೀಗ ಮತ್ತೆ ಪೊನ್ನಂಪೇಟೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರವನ್ನು ಪುನರ್ವಿಂಗಡಿಸಬೇಕಾಗಿದೆ. ಜೂನ್ ೧೯ರಂದು ಸೀಮಾ ಗಡಿ ನಿರ್ಣಯ ಆಯೋಗವು ಕೊಡಗು ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡಣೆ ಪಟ್ಟಿಯನ್ನು ಘೋಷಿಸಿ, ಜುಲೈ ೩ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿಯಿಂದಾಗಿ ಕೊಡಗು ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡಣೆ ಪಟ್ಟಿ ಪ್ರಕಟಿಸಲು ತಡವಾಗಿತ್ತು.

ಜೂನ್ ೧೯ರಂದು ಪ್ರಕಟವಾಗಿದ್ದ ಕ್ಷೇತ್ರ ಪುನರ್ವಿಂಗಡಣೆ ಪಟ್ಟಿಯಲ್ಲಿ ಪೊನ್ನಂಪೇಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ, ಪೊನ್ನಂಪೇಟೆ, ಹಳ್ಳಿಗಟ್ಟು, ಬಲ್ಯಮಂಡೂರು, ಚಿಕ್ಕಮಂಡೂರು, ಮುಗುಟಗೇರಿ,

(ಮೊದಲ ಪುಟದಿಂದ) ಬೆಳ್ಳೂರು, ಹೈ ಸೊಡ್ಲೂರು, ಬೇಗೂರು ಗ್ರಾಮಗಳನ್ನು ಸೇರಿಸಲಾಗಿತ್ತು ಹಾಗೂ ತಾಲೂಕು ಪೊನ್ನಂಪೇಟೆ ಪಂಚಾಯಿತಿ ಕ್ಷೇತ್ರಕ್ಕೆ ಪೊನ್ನಂಪೇಟೆ, ಹಳ್ಳಿಗಟ್ಟು ಗ್ರಾಮಗಳನ್ನು ಸೇರಿಸಲಾಗಿತ್ತು. ಗೋಣಿಕೊಪ್ಪಲು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿಗೆ ಸೇರಿರುವ ಅರ್ವತೊಕ್ಲುವಿನ ನೆಹರು ನಗರ ಸೇರ್ಪಡೆಯಾಗಿತ್ತು.

ಇದೀಗ ಗೋಣಿಕೊಪ್ಪ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಅರ್ವತೊಕ್ಲುವಿನ ನೆಹರು ನಗರವನ್ನು ಕೈಬಿಡಬೇಕಾಗಿದೆ. ಹುದಿಕೇರಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ, ಬಲ್ಯಮಂಡೂರು, ಮುಗಟಗೇರಿ ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿತ್ತು. ಇದೀಗ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗೆ ಮುಂಚಿತವಾಗಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಂದ ಕೈಬಿಟ್ಟು ಹೊಸ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಕ್ಷೇತ್ರವನ್ನು ರಚಿಸಬೇಕಾಗಿದೆ.

ಪೊನ್ನಂಪೇಟೆ ತಾಲೂಕಿನಲ್ಲಿ ಆರು ಜಿಲ್ಲಾ ಪಂಚಾಯತ್ ಮತ್ತು ೧೧ ತಾಲ್ಲೂಕು ಪಂಚಾಯತ್ ಕ್ಷೇತ್ರಗಳನ್ನು ರಚಿಸಲಾಗಿತ್ತು. ಪೊನ್ನಂಪೇಟೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಂಡಿರುವುದರಿAದ ಈ ಹಿಂದೆ ಸೀಮಾಗಡಿ ನಿರ್ಣಯ ಆಯೋಗವು ಪ್ರಕಟಿಸಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಣೆಯಲ್ಲಿ ಮತ್ತೆ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಬದಲಾವಣೆ ಕಾಣಲಿದೆ.

ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿ

ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಒಟ್ಟು ವಿಸ್ತೀರ್ಣ ೧೧.೩೪ ಚ. ಕಿ. ಮೀ ಆಗಿದ್ದು, ಅರ್ವತೋಕ್ಲು ಗ್ರಾಮಕ್ಕೆ ಸೇರಿದ ನೆಹರು ನಗರ, ಹಳ್ಳಿಗಟ್ಟು ಗ್ರಾಮಕ್ಕೆ ಸೇರಿದ ಗಣಪತಿ ನಗರ, ಶಾಂತಿ ನಗರ, ಮೈತ್ರಿ ಲೇಔಟ್, ಎಂ. ಜಿ. ನಗರ, ನಿಸರ್ಗ ನಗರ, ಮತ್ತೂರು ಗ್ರಾಮಕ್ಕೆ ಸೇರಿದ ಜನತಾ ಕಾಲೋನಿ, ದತ್ತಾ ಕರುಂಬಯ್ಯ ಬಡಾವಣೆ, ತ್ಯಾಗರಾಜ ರಸ್ತೆ, ಶಿವ ಕಾಲೋನಿ, ದೇಚಮ್ಮ ಬಡಾವಣೆ, ಕಾಮತ್ ಬಡಾವಣೆ, ಕಾವೇರಿ ನಗರ, ಹುದೂರು ಗ್ರಾಮಕ್ಕೆ ಸೇರಿದ ಕೃಷ್ಣ ನಗರ, ಕಾಟ್ರಕೊಲ್ಲಿ, ಮುಗುಟಗೇರಿ ಗ್ರಾಮಕ್ಕೆ ಸೇರಿದ ಕಲ್ಲುಕೋರೆ, ತಣ್ಣಿಕೋಡ್, ಭಗವತಿನಗರ, ಪೊನ್ನಪ್ಪ ಲೇಔಟ್, ವಿಜಯನಗರ, ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು ರಸ್ತೆ ಕಾಲೋನಿ, ಮಾಪಿಳ್ಳೆತೋಡು ಸೇತುವೆ, ಕಾವೇರಮ್ಮ ಬಡಾವಣೆ, ಇತರ ಬಡಾವಣೆಗಳನ್ನು ಒಳಗೊಂಡAತೆ ಮುಗುಟಗೇರಿ ಗ್ರಾಮ ಪೊನ್ನಂಪೇಟೆ ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ.