ಶನಿವಾರಸಂತೆ, ಆ. ೭: ಶನಿವಾರಸಂತೆ-ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕಳೆದೆರೆಡು ದಿನಗಳಿಂದ ಆಶ್ಲೇಶ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ತುಂತುರು ಮಳೆಯ ಸಿಂಚನದ ನಡುವೆ ಆಗಾಗ್ಗೆ ಸೂರ್ಯದೇವನ ದರ್ಶನವೂ ಆಗುತ್ತಿದೆ. ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆ ಮತ್ತೆ ಜೀವ ಪಡೆದುಕೊಳ್ಳುತ್ತಿದ್ದು, ರೈತರು ಮತ್ತೆ ಗದ್ದೆಗಳತ್ತ ಮುಖ ಮಾಡಿದ್ದಾರೆ.

ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ರೈತರು ಗದ್ದೆಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗದ್ದೆಗಳಲ್ಲಿ ಉಳುಮೆ, ಸಸಿಮಡಿ ಕೀಳುವುದು, ನಾಟಿ ಮಾಡುವ ಕಾರ್ಯ ಭರದಿಂದ ಆರಂಭವಾಗಿದೆ. ಶೇ.೬೦ ರಷ್ಟು ಗದ್ದೆಗಳಲ್ಲಿ ಭತ್ತದ ವ್ಯವಸಾಯ ಮಾಡಲಾಗುತ್ತಿದೆ. ಕೆಲವು ರೈತರು ಮಾತ್ರ ಗದ್ದೆಗಳನ್ನು ತೋಟ ಮಾಡಿ ಅಡಿಕೆ, ಕಾಫಿ ಬೆಳೆದಿದ್ದಾರೆ.

ಕೊಡ್ಲಿಪೇಟೆಗೆ ಈವರೆಗೆ ೭೦ ಇಂಚು ಮಳೆಯಾಗಿದ್ದರೆ ಕಿರಿಕೊಡ್ಲಿ ಗ್ರಾಮಕ್ಕೆ ೬೬ ಇಂಚು ಮಳೆಯಾಗಿದೆ.ಗದ್ದೆ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಕಿರಿಕೊಡ್ಲಿಮಠಕ್ಕೆ ೩ ಎಕರೆ ಗದ್ದೆಯಿದ್ದು ಭತ್ತದ ಕೃಷಿ ನಿರಂತರವಾಗಿ ಸಾಗಿದೆ. ಸಸಿಮಡಿ ಬೆಳೆದು ನಿಂತು ೧ ತಿಂಗಳಾಗಿದ್ದರೂ ಧಾರಾಕಾರ ಮಳೆಯ ಕಾರಣ ಮಂದೂಡಲ್ಪಟ್ಟಿದ್ದ ನಾಟಿ ಕಾರ್ಯ ೨ ದಿನಗಳ ಕಾಲ ನಡೆಯಿತು. ಮಠಾಧೀಶ ಸದಾಶಿವ ಸ್ವಾಮೀಜಿ ತಾವೇ ಮುಂದೆ ನಿಂತು ಗದ್ದೆ ಕೆಲಸ ಮಾಡಿಸಿದರು.

“ಕೃಷಿತೋ ನಾಸ್ತಿ ದುರ್ಭಿಕ್ಷಂ” ಎಂಬAತೆ ಮಠದಲ್ಲಿ ಭತ್ತದ ಕೃಷಿ ಜತೆಗೆ ಪಶುಪಾಲನೆಗೂ ಆದ್ಯತೆ ನೀಡಲಾಗುತ್ತದೆ. ೧೨ ನಾಟಿ ಗೋವುಗಳಿದ್ದು, ೧೯೮೫ ರಿಂದಲೂ ಗೋಬರ್ ಗ್ಯಾಸ್ ಉಪಯೋಗಿಸಲಾಗುತ್ತಿದೆ. ೧೦-೧೨ ಮಂದಿಗೆ ಅಡುಗೆ ಮಾಡಲಾಗುತ್ತಿದೆ. ಹುಲ್ಲು ಹಸುಗಳಿಗೆ ಮೇವಾಗುತ್ತಿದೆ. ಬೆಳೆದ ಭತ್ತ ಹಾಗೂ ಹಸುಗಳ ಹಾಲು ಮಠಕ್ಕೆ ಉಪಯೋಗವಾಗುತ್ತಿದೆ. ಕೃಷಿಗೆ ಗೊಬ್ಬರವೂ ದೊರೆಯುತ್ತದೆ.

ಇಂದು ರೈತರಿಗೆ ಕೃಷಿಗೆ ಆರ್ಥಿಕ ಸಮಸ್ಯೆಯಿಲ್ಲ. ಜಮೀನೂ ಇದೆ. ಆದರೆ, ಕೃಷಿ ಕೆಲಸದ ಬಗ್ಗೆ ನಿರಾಸಕ್ತಿ ಮೂಡಲು ಕೂಲಿ ಕಾರ್ಮಿಕರ ಕೊರತೆಯೇ ಕಾರಣ. ಭತ್ತದ ಕೃಷಿ ಹಾಗೂ ಪಶುಪಾಲನೆಗೆ ಅವಿನಾಭಾವ ಸಂಬAಧವಿದೆ. ಬೆಳೆಗೆ ಬೆಲೆ ಇದೆಯಾದರೂ ಕಾರ್ಮಿಕರ ಕೊರತೆಯಿಂದ ಕೃಷಿಯ ಬಗ್ಗೆ ನಿರಾಸಕ್ತಿ ಮೂಡಿದೆ. ಗದ್ದೆ ಬೇಸಾಯ ಹಾಗೂ ದನಗಳು ಚಕ್ರವಿದ್ದಂತೆ. ಒಂದಕ್ಕೊAದು ಸಂಬAಧವಿದೆ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡ್ಲಿಪೇಟೆ ಹೋಬಳಿಯಲ್ಲೂ ಮಳೆ-ಗಾಳಿಯ ಅಬ್ಬರಕ್ಕೆ ಹೇಮಾವತಿ ಹೊಳೆ ಮೈದುಂಬಿ ಹರಿದ ಕಾರಣ ಹಿನ್ನೀರು ವ್ಯಾಪಿಸಿ ತೋಟ-ಗದ್ದೆಗಳು ಜಲಾವೃತವಾಗಿ ಮರಳು ತುಂಬಿಕೊAಡ ಕಾರಣ ಬೆಳೆ ಹಾನಿ ಸಂಭವಿಸಿದೆ. ಇದೀಗ ಮಳೆ ಕ್ಷೀಣಿಸಿದ್ದು, ರೈತರು ಮರಳಿ ಕೃಷಿಯತ್ತ ಗಮನ ಹರಿಸಿದ್ದಾರೆ. ಅಳಿದುಳಿದ ಕೃಷಿಯನ್ನಾದರೂ ರೂಢಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.