ಮಡಿಕೇರಿ, ಆ. ೫: ಪೊನ್ನಂಪೇಟೆ ತಾಲೂಕು ಕೇಂದ್ರದಲ್ಲಿ ನೂತನ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಪೊನ್ನಂಪೇಟೆ ನಾಗರಿಕ ವೇದಿಕೆ ಒತ್ತಾಯಿಸಿದೆ.
ಇತ್ತೀಚೆಗೆ ಕುಟ್ಟ ಸಮೀಪದ ಮಂಚಳ್ಳಿಗೆ ಭೇಟಿ ನೀಡಿದ್ದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ವೇದಿಕೆಯ ಉಪಾಧ್ಯಕ್ಷ ಎ.ಎ. ಎರ್ಮು ಹಾಜಿ ಈ ಬಗ್ಗೆ ಗಮನ ಸೆಳೆದರು. ಪೊನ್ನಂಪೇಟೆ ತಾಲೂಕು ಆಡಳಿತ ಕಚೇರಿ ಶಿಥಿಲಗೊಂಡಿದ್ದು, ಪುನರ್ನಿರ್ಮಾಣದ ಅವಶ್ಯಕತೆ ಇದೆ ಎಂದು ತಿಳಿಸಿದರು. ಚೀನಿವಾಡ ಗ್ರಾಮದಲ್ಲಿರುವ ೨ ಎಕರೆ ಪೈಸಾರಿ ಜಾಗವನ್ನು ಆರೋಗ್ಯ ಇಲಾಖೆ ಸ್ವಾಧೀನಕ್ಕೆ ನೀಡಿ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮಕೊಳ್ಳುವಂತೆ ಆಗ್ರಹಿಸಿದರು.