ವೀರಾಜಪೇಟೆ, ಆ. ೫: ಶ್ರಾವಣ ಮಾಸದ ಅಂಗವಾಗಿ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೀಶ್ವರ ದೇವಾಲಯದಲ್ಲಿ ಪೂಜೆಗಳು ತಾ. ೧೦ ರಿಂದ ಆರಂಭವಾಗಲಿದೆ.
ತಾ. ೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಗಣಪತಿ ಹೋಮದೊಂದಿಗೆ ಪೂಜಾ ಕಾರ್ಯಕ್ರಮಗಳು ಆರಂಭಗೊAಡು ವಿಶೇಷ ಪೂಜಾ ಕಾರ್ಯ, ಮಹಾ ಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ತಾ ೧೭, ೨೪, ಮತ್ತು ೩೧ ರ ನಾಲ್ಕು ಶನಿವಾರ ದಂದು ಶ್ರಾವಣ ಮಾಸ ಪೂಜೆಗಳು ನಡೆಯಲಿವೆ. ಶ್ರಾವಣ ಮಾಸದ ವಿಶೇಷ ದಿನಗಳಲ್ಲಿ ನವಗ್ರಹ ಪೂಜೆ, ಶನಿಶಾಂತಿ ಪೂಜೆ, ಶನಿಜಪ ತಪ ಮುಂತಾದ ಪೂಜೆಗಳು ದೇವಾಲಯದಲ್ಲಿ ನಡೆಯಲಿದೆ. ಅಪರಾಹ್ನ ೧-೦೦ ಗಂಟೆಗೆ ನಾಡಿನ ಸುಭಿಕ್ಷೆಗಾಗಿ ಶ್ರೀ ಸ್ವಾಮಿಗೆ ವಿಶೇಷ ಮಹಾ ಪೂಜೆ ನಡೆಸಲಾಗುತ್ತದೆ. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.