ಚೆಟ್ಟಳ್ಳಿ, ಆ. ೫: ಚೆಟ್ಟಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೩-೨೪ನೇ ಸಾಲಿನಲ್ಲಿ ರೂ. ೫೪.೦೮ ಲಕ್ಷ ಲಾಭಾಂಶ ಗಳಿಸಿದೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಂಘದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಕಾಫಿ ಗುಣಮಟ್ಟ ಪರಿಶೀಲನಾ ಘಟಕ, ಮಣ್ಣು ಪರೀಕ್ಷಾಕೇಂದ್ರ, ಸಂಘದ ಮುಖ್ಯಕಛೇರಿ ಕಟ್ಟಡದ ಮೇಲ್ಬಾಗದಲ್ಲಿ ಪುಣ್ಯಕೋಟಿ ಅತಿಥಿಗೃಹ, ವ್ಯಾಪಾರಮಳಿಗೆ, ಸಭೆ ಸಮಾರಂಭ ಹಾಗೂ ಇನ್ನಿತರೆ ಕಾರ್ಯಕ್ರಮ ನಡೆಸಲು ದೇಣಿಗೆ ಪಡೆದು ವಿಶ್ವಗುರು ಶ್ರೀ ನರೇಂದ್ರ ಮೋದಿ ಸಹಕಾರ ಭÀವನ, ಈರಳೆ ಶಾಖೆಯಲ್ಲಿ ವ್ಯಾಪಾರ ಮಳಿಗೆ, ಲಾಕರ್ ವ್ಯವಸ್ಥೆ, ಆರ್ಟಿಸಿ, ಇ-ಸ್ಟಾö್ಯಂಪ್ ಸೌಲಭ್ಯವನ್ನು ಮಾಡಲಾಗುತ್ತಿದೆ ಎಂದು ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ಬ್ಯಾಂಕಿAಗ್ ಸೌಲಭ್ಯದ ಜೊತೆ ರೈತರಿಗೆ ಕೃಷಿ ಸಾಲವಲ್ಲದೆ ಕೃಷಿಯೇತರ ಸಾಲಗಳಾದ ಆಭರಣ ಈಡಿನ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ವ್ಯಾಪಾರ ಸಾಲ, ಸ್ವಸಹಾಯ ಸಂಘಗಳಿಗೆ ಸಾಲ ಹೀಗೆ ಹತ್ತು ಹಲವು ಸಾಲಗಳನ್ನು ನೀಡಲಾಗುತ್ತಿದೆ. ವಿವಿಧ ರೀತಿಯ ಗೊಬ್ಬರ ಹಾಗೂ ನ್ಯಾಯಬೆಲೆ ಅಂಗಡಿಯನ್ನು ನಡೆಸಲಾಗುತ್ತಿದೆ ಎಂದರು.
ಸಹಕಾರಿ ಕ್ಷೇತ್ರದ ಕಾರ್ಯಗಳ ಜೊತೆ ಕೃಷಿಕರಿಗೆ ಅನುಕೂಲವಾಗುವ ವಿವಿಧ ಕಾರ್ಯಕ್ರಮವನ್ನು ಆಯೋಜಿಸುವುದು, ವಿವಿಧ ಸಂಘಸAಸ್ಥೆಗಳಿಗೆ ದೇಣಿಗೆ ನೀಡುವುದು. ನಿವೃತ್ತ ಸೇನಾನಿಗಳಿಗೆ, ಸಂಘದ ಹಿರಿಯ ಸದಸ್ಯರಿಗೆ, ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದಲ್ಲದೆ, ಪ್ರತೀ ವರ್ಷ ಗ್ರಾಮೀಣ ಮಟ್ಟದಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತಿದೆ. ಸಂಘದಿAದ ಸಾಲ ಪಡೆದು ಮನೆ ನಿರ್ಮಿಸಿದ ಸಂಘದ ಸದಸ್ಯರುಗಳಿಗೂ ಸಂಘದ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸುವ ಮೂಲಕ ಸಹಕಾರ ಕ್ಷೇತ್ರದಲ್ಲೇ ಮಾದರಿ ಸಹಕಾರ ಸಂಘವಾಗಿ ಬೆಳೆಯುತ್ತಿದೆ, ಸೆಪ್ಟೆಂಬರ್ ೨೫ರಂದು ಸಂಘದ ಮಹಾಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.